ಭಾರತೀಯ ಮೂಲದ ದಂಪತಿ ಸೌದಿ ಅರೇಬಿಯಾದ ಉನೈಜಾದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಪತಿ ಶರತ್ ನೇಣು ಬಿಗಿದುಕೊಂಡಿದ್ದು, ಪತ್ನಿ ಪ್ರೀತಿ ಶವ ನೆಲದ ಮೇಲೆ ಪತ್ತೆಯಾಗಿದೆ. ಘಟನೆಯ ತನಿಖೆ ನಡೆಯುತ್ತಿದೆ.
ಬುರೈದಾ (ಸೌದಿ ಅರೇಬಿಯಾ): ಕೇರಳದ ಕೊಲ್ಲಂನ ಕಡಕ್ಕಲ್‌ನ ದಂಪತಿಗಳು ಸೌದಿ ಅರೇಬಿಯಾದ ಅಲ್-ಖಾಸಿಮ್ ಪ್ರದೇಶದ ಬುರೈದಾ ಬಳಿಯ ಉನೈಜಾದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಮೃತರನ್ನು ಕಡಕ್ಕಲ್‌ನ ಮಣಿ ಎಂಬವರ ಪುತ್ರ ಶರತ್ (40) ಮತ್ತು ಕೊಲ್ಲಂ ಮೂಲದ ಅವರ ಪತ್ನಿ ಪ್ರೀತಿ (32) ಎಂದು ಗುರುತಿಸಲಾಗಿದೆ.
ಶರತ್ ಕೋಣೆಯೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರೆ, ಪ್ರೀತಿ ನೆಲದ ಮೇಲೆ ಶವವಾಗಿ ಬಿದ್ದಿದ್ದಳು.
ಶರತ್ ಅವರು ಕೆಲಸಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ಅವರ ಉದ್ಯೋಗದಾತ ಅವರ ನಿವಾಸಕ್ಕೆ ಭೇಟಿ ನೀಡಿದ ನಂತರ ಘಟನೆ ಬೆಳಕಿಗೆ ಬಂದಿದೆ. ಬಹಳ ಹೊತ್ತಾದರೂ ಬಾಗಿಲು ತೆರೆಯದೇ ಇದ್ದಾಗ ಪೊಲೀಸರಿಗೆ ಕರೆ ಮಾಡಿದ್ದಾರೆ. ಬಾಗಿಲು ತೆರೆದಾಗ ದಂಪತಿ ಶವವಾಗಿ ಕಂಡರು.
ಶರತ್ ಹಲವಾರು ವರ್ಷಗಳಿಂದ ಉನೈಜಾದಲ್ಲಿ ಎಲೆಕ್ಟ್ರಿಕಲ್ ಮತ್ತು ಪ್ಲಂಬಿಂಗ್ ಕೆಲಸ ಮಾಡುತ್ತಿದ್ದ. ಎರಡು ತಿಂಗಳ ಹಿಂದೆ ಪತ್ನಿ ಪ್ರೀತಿಯನ್ನು ಸೌದಿ ಅರೇಬಿಯಾಕ್ಕೆ ಕರೆತಂದಿದ್ದರು.
ದಂಪತಿಗೆ ಹಣಕಾಸಿನ ಸಮಸ್ಯೆ ಇದೆಯೇ ಅಥವಾ ಇಬ್ಬರ ನಡುವೆ ಏನಾದರೂ ಸಮಸ್ಯೆಗಳಿವೆಯೇ ಎಂಬುದು ಸ್ಪಷ್ಟವಾಗಿಲ್ಲ. ತನಿಖೆ ನಡೆಯುತ್ತಿದೆ.