ಪುತ್ತೂರು: ಇಲ್ಲಿನ ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ದರ್ಶನಕ್ಕೆ ಶೀಘ್ರದಲ್ಲಿಯೇ ಭಕ್ತರಿಗೆ ವಸ್ತ್ರಸಂಹಿತೆ (ಡ್ರೆಸ್ ಕೋಡ್) ಜಾರಿಯಾಗುವ ಸಾಧ್ಯತೆಯಿದೆ. ಈಗಾಗಲೇ ದೇವಸ್ಥಾನದ ಪ್ರವೇಶ ದ್ವಾರದಲ್ಲಿ ಈ ಬಗ್ಗೆ ಸೂಚನಾ ಫಲಕ ಅಳವಡಿಸಲಾಗಿದೆ ಎಂದು ತಿಳಿದುಬಂದಿದೆ.
ದೇವರ ದರ್ಶನವನ್ನು ಪಡೆಯಲು ಬರುವ ಭಕ್ತರು ಶುಭ್ರ, ಸ್ವಚ್ಛ ಹಾಗೂ ಸಭ್ಯ ರೀತಿಯ ವಸ್ತ್ರಗಳನ್ನು ಧರಿಸಲು ಕೋರಲಾಗಿದೆ. ಆದರೆ ಈ ಬಗ್ಗೆ ಅಧಿಕೃತವಾಗಿ ಆದೇಶವನ್ನು ಹೊರಡಿಸಲಾಗಿದೆಯೇ ಎಂದು ತಿಳಿದುಬಂದಿಲ್ಲ.
ಸೂಚನಾ ಫಲಕದ ಪ್ರಕಾರ ಪುರುಷರು ಪಂಚೆ – ಅಂಗಿ ಅಥವಾ ಪ್ಯಾಂಟ್- ಅಂಗಿ, ಮಹಿಳೆಯರು ಸೀರೆ ಅಥವಾ ಚೂಡಿದಾರ್ ಧರಿಸಿಯೇ ದೇವಳವನ್ನು ಪ್ರವೇಶಿಸಲು ವಿನಂತಿಸಲಾಗಿದೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ ಕೆಲವಾರು ಬಾರಿ ಪುರುಷರು ಶಾರ್ಟ್ಸ್ (ಬರ್ಮುಡಾ) ಗಳಲ್ಲಿ ದೇವಾಲಯದ ಆವರಣದಲ್ಲಿ ಕಾಣಿಸಿಕೊಂಡ ನಿದರ್ಶನಗಳಿವೆ. ತಾಯಿಯೊಬ್ಬಳು ಹೆಮ್ಮೆಯಿಂದ ತನ್ನ ಮಗಳಿಗೆ (ಸಣ್ಣವಳಲ್ಲ) ಶಾರ್ಟ್ಸ್ ತೊಡಿಸಿ ಕರೆದುಕೊಂಡು ಬಂದದ್ದೂ ಉಂಟು. ಇನ್ನು ಮುಂದೆ ದೇವಸ್ಥಾನವನ್ನು ಪ್ರವೇಶಿಸಲು ಇಂತಹಾ ಅವಕಾಶಗಳಿರುವುದಿಲ್ಲ ಎಂದು ನಿರೀಕ್ಷಿಸಲಾಗಿದೆ.
ಹಿಂದಿನ ಆಡಳಿತ ಮಂಡಳಿಯು ಶ್ರೀ ಕೇಶವ ಪ್ರಸಾದ್ ಮುಳಿಯ ಅವರು ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಈ ಬಗ್ಗೆ ನಿಯಮವೊಂದನ್ನು ರೂಪಿಸಲು ಯೋಜಿಸಿತ್ತು. ಅಲ್ಲದೆ ಸೂಚನಾ ಫಲಕವೊಂದನ್ನು ಆ ಸಂದರ್ಭದಲ್ಲಿ ಅಳವಡಿಸಲಾಗಿತ್ತು.
ಈಗ ಆಡಳಿತ ಸಮಿತಿ ಇಲ್ಲದಿರುವುದರಿಂದ ಹಾಗೂ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಧಿಕಾರ ಆಡಳಿತಾಧಿಕಾರಿಗೇ ಇರುವುದರಿಂದ ವಸ್ತ್ರ ಸಂಹಿತೆಯ ಬಗ್ಗೆ ಅಧಿಕೃತ ಆದೇಶ ಹಾಗೂ ನಿಯಮ ರೂಪಿಸುವಂತೆ ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions