ಕರ್ನಾಟಕ ರಾಜ್ಯ ವಿರೋಧ ಪಕ್ಷ ಬಿಜೆಪಿ ಗಾಢವಾದ ಮಂಪರಿನಲ್ಲಿ ಇದೆಯೋ ಎಂಬ ಸಂಶಯ ಕಾಡುತ್ತಿದೆ. ಇದು ನಾನು ನೀವು ಹೇಳುತ್ತಿರುವ ಮಾತಲ್ಲ. ಬದಲಾಗಿ ಹಲವಾರು ವರ್ಷಗಳಿಂದ ಪಕ್ಷಕ್ಕಾಗಿ ದುಡಿಯುತ್ತಿರುವ ಕಾರ್ಯಕರ್ತರೇ ಆಡುತ್ತಿರುವ ಮಾತುಗಳು.
ಯಾವಾಗ ಕಾಂಗ್ರೆಸ್ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂತೋ ಆಗಿನಿಂದಲೂ ತನ್ನ ಒಂದಲ್ಲ ಒಂದು ನಿರ್ಧಾರಗಳಿಂದ ಹಿಂದೂಗಳ ಕೆಂಗಣ್ಣಿಗೆ ಗುರಿಯಾಗುತ್ತಿದೆ. ಈಗಾಗಲೇ ಎಲ್ಲರೂ ತಿಳಿದಿರುವಂತೆ ಮುಸ್ಲಿಂ ವಕ್ಫ್ ಬೋರ್ಡ್ ನೂರಾರು ಬಡ ಮುಗ್ಧ ರೈತರ ಆಸ್ತಿಗಳ ಮೇಲೆ ಹಕ್ಕುಸ್ವಾಮ್ಯ ಸಾಧಿಸಿ ನೋಟೀಸ್ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದೆ.
ಅದಲ್ಲದೆ ಹಲವಾರು ಪ್ರವಾಸೀ ತಾಣಗಳನ್ನೂ ಕೂಡ ತನ್ನದೆಂದು ಸಾಧಿಸುತ್ತಾ ನೋಟೀಸ್ ನೀಡಿದೆ ಎಂದು ತಿಳಿದುಬಂದಿದೆ.
ನಿಜವಾಗಿಯೂ ಇದೊಂದು ದೊಡ್ಡ ಆಘಾತಕಾರಿ ಸಂಗತಿಯಾಗಿದೆ.
ಹಾಗಾದರೆ ವಕ್ಫ್ ಬೋರ್ಡ್ ಗೆ ಈ ಅಧಿಕಾರ ಕೊಟ್ಟವರು ಯಾರು? ಅವರ ಯಾರ ಆಸ್ತಿಯ ಮೇಲೂ ತನ್ನ ಹಕ್ಕುಸ್ವಾಮ್ಯ ಸ್ಥಾಪಿಸಬಹುದೇ? ನಿಜವಾಗಿಯೂ ಕಾನೂನಿನಲ್ಲಿ ಏನು ಹೇಳಲಾಗಿದೆ. ಈ ಕಾನೂನನ್ನು ಜಾರಿಗೆ ತಂದವರು ಯಾರು?
ಇದಕ್ಕೆಲ್ಲಾ ಅವರು ಉತ್ತರಿಸಬೇಕು. ಅದು ಹೌದೆಂದಾದರೆ ಬಡ ಹಿಂದೂ ರೈತರ ಪಾಡೇನು? ಈ ಅನ್ಯಾಯದಿಂದ ಬೀದಿ ಪಾಲಾಗುವ ಕುಟುಂಬಗಳೆಷ್ಟೋ? ಕಾನೂನು ತಜ್ಞರೇ ಹೇಳಬೇಕು.
ಮುಸ್ಲಿಂ ವಕ್ಫ್ ಬೋರ್ಡ್ ಇಷ್ಟರವರೆಗೆ ಯಾರ್ಯಾರ ಆಸ್ತಿಯನ್ನು ತನ್ನದೆಂದು ಹೇಳಿದೆ? ಕೇವಲ ಹಿಂದೂ, ಕ್ರೈಸ್ತರ ಆಸ್ತಿಯನ್ನು ಮಾತ್ರ ತನ್ನದೆಂದು ಸಾಧಿಸುತ್ತಿದೆಯೋ ಅಥವಾ ಮುಸ್ಲಿಂ ಸಮುದಾಯದ ಜನರ ಆಸ್ತಿಯನ್ನು ಕೂಡ ತನ್ನದೆಂದು ಹೇಳಿದೆಯೇ? ಈ ಪ್ರಶ್ನೆಗೆ ಉತ್ತರ ಸಿಕ್ಕಿದರೆ ಇದೊಂದು ವಿಶೇಷ ಪ್ರಕರಣವಾಗಿ ಕಾಣಿಸಬಹುದು.
ಏನೇ ಇರಲಿ ಈ ಅನ್ಯಾಯದ ವಿರುದ್ಧ ಹೇಳುವಂತಹಾ ಮಟ್ಟದ ಹೋರಾಟಗಳು ಸಂಘಟಿತವಾಗಿಲ್ಲ. ಭಾರತೀಯ ಜನತಾ ಪಕ್ಷದ ಒಂದೆರಡು ಹೇಳಿಕೆಗಳು, ಇನ್ನೊಂದೆರಡು ಪತ್ರಿಕಾಗೋಷ್ಠಿಗಳನ್ನು ಬಿಟ್ಟರೆ ಬೇರೇನೂ ಬೆಳವಣಿಗೆಗಳನ್ನು ಕಾಣಲು ಸಾಧ್ಯವಾಗಿಲ್ಲ. ವಿರೋಧ ಪಕ್ಷವು ನಿದ್ರೆಯ ಮಂಪರಿನಿಂದ ಮೈಕೊಡವಿ ಏಳಬೇಕಾಗಿದೆ.
ನಿಜವಾಗಿ ಈ ಬಗ್ಗೆ ಕೂಡಲೇ ವ್ಯಾಪಕವಾದ ಪ್ರತಿಭಟನೆಗಳು ಜನರಿಗೆ ಎದ್ದು ಕಾಣುವಂತೆ ಸಂಘಟಿಸಬೇಕಿತ್ತು. ರಾಜ್ಯದಾದ್ಯಂತ ಸಭೆ, ಪ್ರತಿಭಟನೆಗಳು ನಡೆಯಬೇಕಿತ್ತು. ಆದರೆ ದುರಾದೃಷ್ಟ ನೋಡಿ. ರಾಜ್ಯದ ಬಿಜೆಪಿ ತನ್ನದೇ ತಣ್ಣಗೆ ಕಾಣಿಸುತ್ತಿರುವ ಒಳಜಗಳದಿಂದ ನಲುಗುತ್ತಿದೆ.
ಅದನ್ನು ಸರಿಪಡಿಸುವ ಪ್ರಯತ್ನದಲ್ಲಿಯೇ ಮಗ್ನವಾಗಿರುವಂತೆ ಕಾಣಿಸುತ್ತಿದೆ. ಯಡಿಯೂರಪ್ಪ, ವಿಜಯೇಂದ್ರ, ಯತ್ನಾಳ್ ಮತ್ತು ಇನ್ನು ಕೆಲವರು ರಾಜ್ಯ ಬಿಜೆಪಿಯನ್ನು ಶುದ್ಧೀಕರಣ ಮಾಡುವ ಬಗ್ಗೆ ಮೂದಲಿಕೆಯ ಹೇಳಿಕೆಗಳನ್ನು ಕೊಡುವುದರಲ್ಲಿ ನಿರತರಾಗಿದ್ದಾರೆ. ಹಾಗಾಗಿ ಮುಸ್ಲಿಂ ವಕ್ಫ್ ಬೋರ್ಡ್ ನ ಈ ಪಹಣಿಪತ್ರ ಮತ್ತು ಆಸ್ತಿಯ ಮೇಲಿನ ತನ್ನ ಹೆಸರನ್ನು ಸಂಚಿನ ವಿರುದ್ಧ ಹೋರಾಡಲು ಅವರು ಇನ್ನಾದರೂ ಯೋಚಿಸಬೇಕಾಗಿದೆ.
ಆದರೆ ಬಿಜೆಪಿಗಿಂತ ಮೊದಲೇ ಮುಖ್ಯಮಂತ್ರಿ ಸಿದ್ಧರಾಮಯ್ಯ ಎಚ್ಚೆತ್ತುಕೊಂಡ ಹಾಗೆ ಮೇಲ್ನೋಟಕ್ಕೆ ಭಾಸವಾಗುತ್ತದೆ. ಪಹಣಿ ಪತ್ರದ ಮೇಲಿನ ವಕ್ಫ್ ಹಕ್ಕನ್ನು ಸ್ಥಾಪಿಸುವ ಮೊಹರನ್ನು ಮತ್ತು ರೈತರಿಗೆ ನೀಡಿರುವ ನೋಟೀಸನ್ನು ರದ್ದುಗೊಳಿಸಿ ಸಿದ್ಧಾರಾಮಯ್ಯ ಅವರು ಆದೇಶ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಆದರೆ ಕೇವಲ ಕಣ್ಣೊರೆಸುವ ತಂತ್ರವೋ ಅಥವಾ ಕಾಳಜಿಯೋ ಎಂದು ಕಾದು ನೋಡಬೇಕು. ಏಕೆಂದರೆ ಕಾಂಗ್ರೆಸ್ ಪಕ್ಷ ಮೊದಲಿನಿಂದಲೂ ಮುಸ್ಲಿಂ ಸಮುದಾಯದ ತುಷ್ಟೀಕರಣ ಎಲ್ಲರಿಗೂ ತಿಳಿದದ್ದೇ ಆಗಿದೆ.
ವಕ್ಫ್ ಕಾನೂನಿಗೆ ತಿದ್ದುಪಡಿ ತರುವ ಪ್ರಸ್ತಾಪ ಕೇಂದ್ರ ಸರಕಾರದ ಮುಂದೆ ಇದೆ. ಈ ಕಾನೂನಿನ ತಿದ್ದುಪಡಿ ಜಾರಿಗೆ ಬರುವ ಮೊದಲೇ ಆದಷ್ಟು ಆಸ್ತಿಯನ್ನು ವಶಪಡಿಸುವ ಪ್ರಯತ್ನವನ್ನು ತಡೆಯಬೇಕು ಎಂದು ಜನರ ಆಗ್ರಹ.
ಏನೇ ಆಗಲಿ ಸಾಮಾನ್ಯ ಜನರ ಆಸ್ತಿಯನ್ನು ಕಬಳಿಸಿ ಅವರ ಜೀವನವನ್ನು ಬೀದಿಗೆ ತಳ್ಳುವ ಈ ಹುನ್ನಾರದ ಬಗ್ಗೆ ರಾಷ್ಟ್ರಮಟ್ಟದಲ್ಲಿ ತೀವ್ರವಾದ ಹೋರಾಟ ಸಂಘಟಿಸಬೇಕು. ಇಲ್ಲದಿದ್ದರೆ ಎಲ್ಲವೂ ಪರರ ಪಾಲಾದೀತು.