ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿವೇಕಾನಂದ ಕಾಲೇಜಿನ ಬಿಸಿಎ ವಿಭಾಗದಿಂದ “ಆರ್ಡಿನೋ” ಕಾರ್ಯಗಾರ.
ಪುತ್ತೂರು: ದಿನಾಂಕ 28-10-2024ನೇ ಸೋಮವಾರದಂದು ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿವೇಕಾನಂದ ಕಲಾವಾಣಿಜ್ಯ ಹಾಗೂ ವಿಜ್ಞಾನ (ಸ್ವಾಯತ್ತ) ಕಾಲೇಜಿನ ಬಿಸಿಎ ವಿಭಾಗದ ವಿದ್ಯಾರ್ಥಿಗಳಿಂದ ಶಾಲೆಯ ವಿದ್ಯಾರ್ಥಿಗಳಿಗೆ “ಆರ್ಡಿನೋ” ಎನ್ನುವ ಕಾರ್ಯಾಗಾರವು ನಡೆಯಿತು.
ವಿವೇಕಾನಂದ ಕಲಾವಾಣಿಜ್ಯ ಹಾಗೂ ವಿಜ್ಞಾನ (ಸ್ವಾಯತ್ತ ) ಕಾಲೇಜಿನ ಬಿಸಿಎ ವಿಭಾಗದ ಮುಖ್ಯಸ್ಥ ಪ್ರಕಾಶ್ ಕುಮಾರ್ ಪಿ ಹಾಗೂ ಉಪನ್ಯಾಸಕ ಕೀರ್ತನ್ ಕುಮಾರ್ ಇವರ ಮಾರ್ಗದರ್ಶನದಲ್ಲಿ ಕಾರ್ಯಾಗಾರವನ್ನು ವಿದ್ಯಾರ್ಥಿಗಳು ನಡೆಸಿಕೊಟ್ಟರು.






ಈ ಒಂದು ದಿನದ ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳಿಗೆ ಪ್ರೋಗ್ರಾಮಿಂಗ್, ಡಿಸಿಷನ್ ಮೇಕಿಂಗ್ ಸ್ಟೇಟ್ ಮೆಂಟ್ಸ್ ಮತ್ತು ಲೂಪಿಂಗ್ ಸ್ಟೇಟ್ ಮೆಂಟ್ಸ್ ಗಳ ಬಗೆಗೆ ಅರಿವು ಮೂಡಿಸಿದರು.
8ನೇ ಮತ್ತು 9ನೇ ತರಗತಿಯ ಆಸಕ್ತ 40 ವಿದ್ಯಾರ್ಥಿಗಳ ತಂಡ ಭಾಗವಹಿಸಿದ್ದು, ಉಳಿದ ವಿದ್ಯಾರ್ಥಿಗಳಿಗೆ ಮುಂದಿನ ದಿನಗಳಲ್ಲಿ ತರಬೇತಿಯನ್ನು ಆಯೋಜಿಸಲಾಗುವುದು.
ಶಾಲಾ ವಿಜ್ಞಾನ ವಿಭಾಗದ ಶಿಕ್ಷಕ-ಶಿಕ್ಷಕಿಯರು ಸಹಕರಿಸಿದರು.