18 ನೇ ತಾರೀಕು ಶುಕ್ರವಾರ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದಲ್ಲಿ ನಡೆಯಲಿರುವ ದೇಶಮಂಗಲ ದಿ. ಕೃಷ್ಣ ಕಾರಂತರ ಜನ್ಮ ದಿನೋತ್ಸವ- ಸಂಸ್ಮರಣೆ ಕಾರ್ಯಕ್ರಮದ ಸಂದರ್ಭದಲ್ಲಿ
ಗಡಿನಾಡು ಕಾಸರಗೋಡಿನ ಖ್ಯಾತವೈದ್ಯರೂ, ಯಕ್ಷಗಾನ ತಾಳಮದ್ದಳೆಯ ಪ್ರಬುದ್ಧ ಅರ್ಥದಾರಿಗಳೂ, ಉತ್ತಮ ಸಾಹಿತಿಗಳೂ, ಸಂಶೋಧಕರೂ ಆಗಿದ್ದು, ಕಾಸರಗೋಡಿನ ಕನ್ನಡ ಪರ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದು , ಸಮಾಜಮುಖಿಯಾಗಿ ಕಾರ್ಯಗಳಿಂದ ಜನಪ್ರಿಯರಾಗಿರುವ
ಮುತ್ಸದ್ದಿ ಡಾ.ರಮಾನಂದ ಬನಾರಿ ಯವರಿಗೆ ಗಣ್ಯರ ಉಪಸ್ಥಿತಿಯಲ್ಲಿ ದೇಶಮಂಗಲ ಕೃಷ್ಣ ಕಾರಂತರ ಸಂಸ್ಮರಣೆಯೊಂದಿಗೆ ಗೌರವ ಪುರಸ್ಕಾರ ನೀಡಲಾಗುವುದು ಎಂದು ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಪ್ರಕಟಣೆ ಮೂಲಕ ತಿಳಿಸಿದೆ.
ದೇಶಮಂಗಲ ಕಾರಂತರ ನೂರ ಎಂಟನೇ ಜನ್ಮ ದಿನಾಚರಣೆ ಅಕ್ಟೋಬರ್ 18 ರಂದು.
ಈ ಹಿಂದೆ ಪ್ರತಿಷ್ಠಾನವು ಜನ್ಮ ಶತಮಾನೋತ್ಸವವನ್ನು ವಿಜ್ರಂಭಣೆಯಿಂದ ಒಂದು ವರುಷ ಪೂರ್ತಿ ಆಚರಿಸಿರುತ್ತದೆ.