ಜರ್ಮನಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದ ಉಜಿರೆಯ ಯುವಕ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.
ಜರ್ಮನಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ಉಜಿರೆ ಸಮೀಪದ ನಿವಾಸಿ ಆದಿತ್ಯ ಭಟ್ ನಿನ್ನೆ ತನ್ನ ಸ್ವಗೃಹದಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಉಜಿರೆಯ ಅತ್ತಾಜೆಯ ಅವರ ಮನೆಯಲ್ಲಿ ನಿನ್ನೆ ಅಕ್ಟೋಬರ್ 11ರಂದು ಆಯುಧ ಪೂಜೆಯ ಕಾರ್ಯಕ್ರಮ ಇತ್ತು. ಆ ಕೆಲಸದಲ್ಲಿ ಇರುವಾಗಲೇ ಅವರಿಗೆ ಒಮ್ಮೆಲೇ ಎದೆ ನೋವು ಕಾಣಿಸಿಕೊಂಡ ಕಾರಣ ಅವರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತು.
ಆದರೆ ಆಸ್ಪತ್ರೆಗೆ ತಲುಪುವ ಮೊದಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಅತ್ತಾಜೆಯಲ್ಲಿ ವಾಸವಾಗಿರುವ ರಮೇಶ್ ಭಟ್ ಮತ್ತು ಶಾರದಾ ದಂಪತಿಯ ಪುತ್ರರಾದ ಆದಿತ್ಯ ಭಟ್(29) ಅವರು ತಂದೆ, ತಾಯಿ ಮತ್ತು ಸಹೋದರಿಯನ್ನು ಅಗಲಿದ್ದಾರೆ.