ಇಬ್ಬರು ಹದಿಹರೆಯದವರು ಆಸ್ಪತ್ರೆಯಲ್ಲಿ ವೈದ್ಯರನ್ನು ಗುಂಡಿಕ್ಕಿ ಕೊಂದಿದ್ದಾರೆ,
ಇಬ್ಬರು ಹದಿಹರೆಯದವರು ಆಸ್ಪತ್ರೆಗೆ ನುಗ್ಗಿ ವೈದ್ಯರನ್ನು ಗುಂಡಿಕ್ಕಿ ಕೊಂದ ಆಘಾತಕಾರಿ ಘಟನೆ ದೆಹಲಿಯಲ್ಲಿ ನಡೆದಿದೆ. ಹದಿಹರೆಯದವರು ವೈದ್ಯನನ್ನು ಗುಂಡಿಕ್ಕಿ ಕೊಂದಿದ್ದು, ಮೃತ 55 ವರ್ಷದ ಡಾಕ್ಟರ್ ಜಾವೇದ್ ಅಖ್ತರ್, ಯುನಾನಿ ಔಷಧದ ಚಿಕಿತ್ಸೆ ಮಾಡುತ್ತಿದ್ದರು.
ಅಖ್ತರ್‌ನನ್ನು 16 ಮತ್ತು 17 ವರ್ಷ ವಯಸ್ಸಿನ ಇಬ್ಬರು ಹದಿಹರೆಯದವರು ಕೊಂದಿದ್ದಾರೆ. ನಿಮಾ ಆಸ್ಪತ್ರೆಯ ಸಿಬ್ಬಂದಿ ಪ್ರಕಾರ, ಇಬ್ಬರು ಆಸ್ಪತ್ರೆಯನ್ನು ತಲುಪಿದರು ಮತ್ತು ಅವರಲ್ಲಿ ಒಬ್ಬರು ಗಾಯಗೊಂಡ ಕಾಲ್ಬೆರಳಿಗೆ ಡ್ರೆಸ್ಸಿಂಗ್ ಬದಲಾಯಿಸಲು ಕೇಳಿದರು.
ಹಿಂದಿನ ರಾತ್ರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಡ್ರೆಸ್ಸಿಂಗ್ ನಂತರ, ಇಬ್ಬರು ತಮಗೆ ಪ್ರಿಸ್ಕ್ರಿಪ್ಷನ್ ಬೇಕು ಎಂದು ಹೇಳಿದರು ಮತ್ತು ವೈದ್ಯರ ಕ್ಯಾಬಿನ್‌ಗೆ ಹೋದರು.
ಕೆಲವು ನಿಮಿಷಗಳ ನಂತರ, ಸಿಬ್ಬಂದಿ ಗುಂಡೇಟಿನ ಶಬ್ದವನ್ನು ಕೇಳಿದರು ಮತ್ತು ಅವರ ಕ್ಯಾಬಿನ್‌ಗೆ ಧಾವಿಸಿದರು ಮತ್ತು ಡಾಕ್ಟರ್ ತಲೆಯಿಂದ ರಕ್ತಸ್ರಾವ ಆಗುತ್ತಿರುವುದನ್ನು ನೋಡಿದರು. ಆತನ ಜೀವ ಉಳಿಸಲು ಯತ್ನಿಸಿದರಾದರೂ ಸಫಲವಾಗಲಿಲ್ಲ.
ಘಟನೆ ಬಳಿಕ ಪರಾರಿಯಾಗಿರುವ ಇಬ್ಬರಿಗಾಗಿ ಶೋಧ ಕಾರ್ಯ ತೀವ್ರಗೊಂಡಿದೆ. ಇದೊಂದು ಯೋಜಿತ ಕೊಲೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳು ಹಿಂದಿನ ದಿನವೇ ಆಸ್ಪತ್ರೆಗೆ ಬಂದು ಪರಿಶೀಲನೆ ನಡೆಸಿದ್ದರು ಎಂದು ಪೊಲೀಸರು ಶಂಕಿಸಿದ್ದಾರೆ. ಇದೀಗ ಪೊಲೀಸರು ಆಸ್ಪತ್ರೆಯ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ.