Sunday, September 29, 2024
Homeಸುದ್ದಿಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಸಿರಿಬಾಗಿಲು ಪ್ರತಿಷ್ಠಾನಕ್ಕೆ 15 ಲಕ್ಷ ರೂಪಾಯಿಗಳ ಕೊಡುಗೆ

ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಸಿರಿಬಾಗಿಲು ಪ್ರತಿಷ್ಠಾನಕ್ಕೆ 15 ಲಕ್ಷ ರೂಪಾಯಿಗಳ ಕೊಡುಗೆ

ರಾಜರ್ಷಿ, ಪದ್ಮವಿಭೂಷಣ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಗಡಿನಾಡು ಕಾಸರಗೋಡಿನ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಸಾಂಸ್ಕೃತಿಕ ಭವನದ ಹಾಗು ತೆಂಕು ತಿಟ್ಟು ಯಕ್ಷಗಾನದ ಬೃಹತ್ ಮ್ಯೂಸಿಯಂ ನ ಯೋಜನೆಯನ್ನು ಮೆಚ್ಚಿ.ಆರಂಭದಲ್ಲಿ ಸಾಂಸ್ಕೃತಿಕ ಭವನ ನಿರ್ಮಾಣ ಕ್ಕೆ 10 ಲಕ್ಷ ರೂಪಾಯಿಗಳನ್ನು ನೀಡಿದ್ದರು

ಇದೀಗ ಪುನಃ ಶ್ರೀ ಮಂಜುನಾಥೇಶ್ವರ ಸ್ವಾಮಿಯ ಪ್ರಸಾದ ರೂಪವಾಗಿ 15 ಲಕ್ಷ ರೂಪಾಯಿಗಳ ಧನಸಹಾಯ ನೀಡಿ ಹರಸಿರುತ್ತಾರೆ.

ಕಳೆದ ಡಿಸೆಂಬರ್ ತಿಂಗಳಲ್ಲಿ ಸಾಂಸ್ಕೃತಿಕ ಭವನ, ಮ್ಯೂಸಿಯಂ ಲೋಕಾರ್ಪಣೆಗೊಳಿಸಿದ ಪೂಜ್ಯ ಖಾವಂದರು, ಯಕ್ಷಗಾನ ಕ್ಷೇತ್ರದಲ್ಲಿ ಮುಂದಿನ ದಿನಗಳಲ್ಲಿ ಅಧ್ಯಯನಕ್ಕೆ ಇದೊಂದು ದೊಡ್ಡ ಕೊಡುಗೆಯಾಗಲಿದೆ ಎಂದು ಶುಭ ಹಾರೈಸಿದ್ದರು.

ಇತ್ತೀಚೆಗೆ ಶ್ರೀ ಧರ್ಮಸ್ಥಳದ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ, ಶ್ರೀ ಧರ್ಮಸ್ಥಳ ಮೇಳದ ಯಜಮಾನರಾದ ಶ್ರೀ ಡಿ. ಹರ್ಷೇಂದ್ರ ಕುಮಾರ್ ಭೇಟಿ ನೀಡಿ ಇದೊಂದು ಕಲಾ ವಲಯದ ಅದ್ಬತ ಎಂದಿದ್ದರು.

ಪ್ರತಿಷ್ಠಾನದ ಅದ್ಯಕ್ಷ, ಶ್ರೀ ಧರ್ಮಸ್ಥಳ ಮೇಳದ ಪ್ರಧಾನ ಭಾಗವತ ಶ್ರೀ ರಾಮಕೃಷ್ಣ ಮಯ್ಯ ಅವರು ಪೂಜ್ಯರು ನೀಡಿದ ಆರ್ಥಿಕ ಸಹಕಾರವನ್ನು ಸ್ವೀಕರಿಸಿದರು.

ಪ್ರತಿಷ್ಠಾನದ ಕಾರ್ಯಕರ್ತರಾದ ಶ್ರೀ ಪ್ರಸನ್ನ ಕಾರಂತ ದೇಶಮಂಗಲ, ಶ್ರೀ ಶ್ರೀಮುಖ ಮಯ್ಯ, ಸಿರಿಬಾಗಿಲು ಜತೆಗಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments