Sunday, January 19, 2025
Homeಸುದ್ದಿಆನ್‌ಲೈನ್‌ನಲ್ಲಿ ವಂಚನೆ: ಶಿಕ್ಷಕನ ಖಾತೆಯಿಂದ 91 ಲಕ್ಷ ರೂ. ವರ್ಗಾವಣೆ ಮಾಡಿಸಿಕೊಂಡ ಅಪಾಯಕಾರಿ ವಂಚಕರು

ಆನ್‌ಲೈನ್‌ನಲ್ಲಿ ವಂಚನೆ: ಶಿಕ್ಷಕನ ಖಾತೆಯಿಂದ 91 ಲಕ್ಷ ರೂ. ವರ್ಗಾವಣೆ ಮಾಡಿಸಿಕೊಂಡ ಅಪಾಯಕಾರಿ ವಂಚಕರು


ಆನ್‌ಲೈನ್‌ನಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಹಣ ಕೊಡುತ್ತೇವೆ ಎಂದು ಶಿಕ್ಷಕರಿಗೆ ನಂಬಿಸಿ, ಆಸೆ ತೋರಿಸಿ 91.90 ಲಕ್ಷ ರೂ. ವಂಚಿಸಿರುವ ಘಟನೆ ದಾವಣಗೆರೆ ಸಮೀಪ ನಡೆದಿದೆ.

ಶಿಕ್ಷಕ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯನಾಗಿದ್ದ. ಎನ್ ಜಿ ಸಿ (ನ್ಯೂಮೌಂಟ್ ಗೋಲ್ಡ್ ಕ್ಯಾಪಿಟಲ್) ವೆಬ್ ಸೈಟ್ ಲಿಂಕ್ ಕ್ಲಿಕ್ ಮಾಡಿದಾಗ ಇದು ಅಮೆರಿಕದ ಟ್ರೇಡಿಂಗ್ ಮತ್ತು ಮೈನಿಂಗ್ ಕಂಪನಿ ಎಂದು ತಿಳಿಸಿ ಶಿಕ್ಷಕನಿಂದ ದಾಖಲೆಗಳನ್ನು ಪಡೆದು ರಿಜಿಸ್ಟರ್ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ನಂತರ ಖಾತೆ ತೆರೆಯಲು ಸೂಚನೆ ಬಂತು. ಶಿಕ್ಷಕರು ಲಾಭದ ಆಸೆಯಿಂದ ಸೂಚನೆಗಳನ್ನು ಪಾಲಿಸತೊಡಗಿದರು. ಲಾಭಾಂಶದ ಆಸೆ ತೋರಿಸಿ ವಂಚಕರು ಹಂತ ಹಂತವಾಗಿ ಹಣ ವರ್ಗಾವಣೆ ಮಾಡಿಸಿದ್ದರು.

ಶಿಕ್ಷಕ ತನ್ನ ಖಾತೆಯಿಂದ 27.40 ಲಕ್ಷ ರೂ. ಹಣವನ್ನು ಬಿಡಿಸಲು ಪ್ರಯತ್ನಿಸಿದಾಗ ನಿಮ್ಮ ಖಾತೆ ಲಾಕ್ ಆಗಿದೆ ಎಂದು ಹೇಳಿದ್ದಾರೆ.

ಅದನ್ನು ಅನ್ ಲಾಕ್ ಮಾಡಬೇಕಾದರೆ ಸ್ವಲ್ಪ ಹಣವನ್ನು ವರ್ಗಾವಣೆ ಮಾಡಲು ಹೇಳಿದರು
ನಿಮ್ಮ ಅಕೌಂಟ್‌ನಲ್ಲಿ ಲಾಭಾಂಶ ಸೇರಿ ಇರುವ ಒಟ್ಟು 2 ಕೋಟಿ ರೂ. ಹಣ ಇದ್ದು, ಪಡೆಯಲು ಮತ್ತೆ 47.29 ಲಕ್ಷ ರೂ. ಹಣವನ್ನು ವರ್ಗಾವಣೆ ಮಾಡಿ ಎಂದು ವಂಚಕರು ಸಂದೇಶ ಕಳುಹಿಸಿದರು.

ಇಷ್ಟೆಲ್ಲಾ ಆದರೂ ಶಿಕ್ಷಕನಿಗೆ ಸಂಶಯ ಬರಲಿಲ್ಲ. ಶಿಕ್ಷಕ 2 ಕೋಟಿ ರೂ ಹಣ ಬರುತ್ತದೆ ಎಂದು ನಂಬಿ 47.29 ಲಕ್ಷ ವರ್ಗಾವಣೆ ಮಾಡಿದ್ದಾರೆ.. ಹಣ ಬಾರದೇ ಮೋಸ ಹೋಗಿರುವುದು ಆಮೇಲೆ ಅರಿವಿಗೆ ಬಂತು.


“ಅಪರಿಚಿತ ವ್ಯಕ್ತಿಗಳು ಎನ್‌ಜಿಸಿ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದರೆ ಅತ್ಯಧಿಕ ಲಾಭ ಕೊಡುತ್ತೇನೆಂದು ನಂಬಿಸಿದ್ದಾರೆ. ನನ್ನ ಖಾತೆಯಿಂದ ಆನ್‌ಲೈನ್ ಮೂಲಕ ಒಟ್ಟು 91 ಲಕ್ಷ ರೂ. ಹಣವನ್ನು ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಯಾವುದೇ ಕಮಿಷನ್ ಹಣ ನೀಡಿದೆ ಮೋಸ ಮಾಡಲಾಗಿದೆ” ಎಂದು ವಂಚನೆಗೆ ಒಳಗಾದ ದಾವಣಗೆರೆ ನಗರದ ನಿಟ್ಟುವಳ್ಳಿ ನಿವಾಸಿ ಖಾಸಗಿ ಶಾಲೆಯ ಶಿಕ್ಷಕ ಸಿಇಎನ್ ಕ್ರೈಮ್ ಠಾಣೆಯಲ್ಲಿ ದೂರು ನೀಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments