ಕೋಲಾರ: ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ದಾಖಲಾಗಿದ್ದ ಯುವತಿ ಸಾವನ್ನಪ್ಪಿರುವ ಘಟನೆ ನಡೆದಿದೆ. ನಂಬಿಗಾನಹಳ್ಳಿ ಗ್ರಾಮದ ನಿವಾಸಿ 22 ವರ್ಷದ ದೀಪ್ತಿ ಸಾವನ್ನಪ್ಪಿದ ಯುವತಿ. ಇದು ನಡೆದದ್ದು ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ನಂಬಿಗಾನಹಳ್ಳಿ ಗ್ರಾಮದಲ್ಲಿ.
ಕೋಲಾರದ ಶ್ರೇಯ ಆಸ್ಪತ್ರೆಯಲ್ಲಿ ಮಾಲೂರು ತಾಲೂಕಿನ ನಂಬಿಗಾನಹಳ್ಳಿ ಗ್ರಾಮದ ದೀಪ್ತಿ (22) ಮೃತಪಟ್ಟ ಯುವತಿ. ಕಿಡ್ನಿ ಸ್ಟೋನ್ ಕಾರಣ ಬುಧವಾರ ಲ್ಯಾಪ್ರೋಸ್ಕೋಪಿ ಶಸ್ತ್ರಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಗುರುವಾರ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು.
ಕಿಡ್ನಿ ಸ್ಟೋನ್ ಕಾರಣ ಯುವತಿ ಲ್ಯಾಪ್ರೋಸ್ಕೋಪಿ ಶಸ್ತ್ರಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಗುರುವಾರ ಆಪರೇಶನ್ ಮಾಡುವುದಾಗಿ ವೈದ್ಯರು ತಿಳಿಸಿದ್ದರು.
ಆದರೆ ವೈದ್ಯರು ಸಂಜೆ 5 ಗಂಟೆ ಸುಮಾರಿನಲ್ಲಿ ಯುವತಿ ಹೃದಯಾಘಾತದಿಂದ ಮೃತಪಟ್ಟಿದ್ದಾಳೆ ಎಂದು ಹೆತ್ತವರಿಗೆ ತಿಳಿಸಿದ್ದಾರೆ.
ಆಸ್ಪತ್ರೆಯ ಡಾಕ್ಟರ್ ವಿರುದ್ಧ ಪೋಷಕರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದ್ದು, ವೈದ್ಯರ ನಿರ್ಲಕ್ಷ್ಯವೇ ದೀಪ್ತಿಯ ಸಾವಿಗೆ ಕಾರಣ ಎಂದಿದ್ದಾರೆ. ಡಾಕ್ಟರ್ ನೀಡಿದ್ದ ಅನಸ್ತೇಶಿಯಾ ಡೋಸ್ ಹೆಚ್ಚಾಗಿ ಆಕೆ ಸಾವಿಗೀಡಾಗಿದ್ದಾಳೆ ಎಂದು ಪೋಷಕರು ಆರೋಪಿಸಿದ್ದಾರೆ. ಸ್ಥಳಕ್ಕೆ ಕೋಲಾರ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ.