ಸದಾ ಚಟುವಟಿಕೆಯಿಂದಿರುವ ಬೆಂಗಳೂರಿನ ಯಕ್ಷದೇಗುಲ ತಂಡದವರಿಂದ 12-09-2024ರಂದು ಬೆಂಗಳೂರಿನ ಮಲ್ಲೇಶ್ವರದ ಸೇವಾ ಸದನದಲ್ಲಿ 2ನೇ ಶ್ರೀ ರಾಧಾ ಅಷ್ಟಮಿ ಲಲಿತಾಕಲಾ ಸಾಂಸ್ಕೃತಿಕ ಉತ್ಸವದಲ್ಲಿ ಪ್ರಿಯಾಂಕ ಕೆ. ಮೋಹನ್ ನಿರ್ದೇಶನದಲ್ಲಿ ಯಕ್ಷದೇಗುಲದ ಮಕ್ಕಳ ತಂಡದಿಂದ `ಕಂಸವಧೆ’ ಯಕ್ಷಗಾನ ಪ್ರದರ್ಶನ ನಡೆಯಿತು.
ಈ ಸಂದರ್ಭದಲ್ಲಿ ಗುರು ಪ್ರಿಯಾಂಕ ಕೆ. ಮೋಹನರಿಗೆ “ಗಾಂಧರ್ವಿಕಾ ಪ್ರಶಸ್ತಿ–2024” ನೀಡಿ ಗೌರವಿಸಲಾಯಿತು.



ಹಾಗೆ ಕಂಸವಧೆ ಯಕ್ಷಗಾನ ಪ್ರದರ್ಶನದಲ್ಲಿ ಭಾಗವತರಾಗಿ ಪ್ರಸನ್ನ ಹೆಗಡೆ, ಮದ್ದಲೆಯಲ್ಲಿ ಸಂಪತ್ ಕುಮಾರ್, ಚಂಡೆಯಲ್ಲಿ ಕಾರ್ತಿಕ್ ಧಾರೇಶ್ವರರವರು ಭಾಗವಹಿಸಿದರು.
ಮಕ್ಕಳಾದ ಅನಿಕಾ, ಸರಸ್ವತಿ, ಸುಹಾಸ್ ಹೊಳ್ಳ, ಪ್ರತ್ಯೂಷಾ ಶೆಟ್ಟಿ, ಅನೀಶಾ, ಮಾನ್ಯ, ಶ್ರೀ ಗೌರಿ, ಧನ್ಯ ಮತ್ತು ಶಾಶ್ವತ ಹೊಳ್ಳ ಭಾಗವಹಿಸಿದರು.
ರಂಗದ ಹಿಂದೆ ಸುದರ್ಶನ ಉರಾಳ, ಉದಯ ಬೋವಿ ಶ್ರೀರಾಮ ಹೆಬ್ಬಾರ್ ಸಹಕರಿಸಿದರು.
ಕೋಟ ಸುದರ್ಶನ ಉರಾಳ
ಮೊ: 9448547237