ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಗ್ರಾಹಕರಿಗೆ ಹಣ್ಣಿನ ರಸದಲ್ಲಿ ಮೂತ್ರ ಬೆರೆಸಿ ವಿತರಿಸುತ್ತಿದ್ದ ಅಂಗಡಿಯವನ ಮೇಲೆ ಕೋಪಗೊಂಡ ಸ್ಥಳೀಯರು ಅಂಗಡಿಯವನೊಬ್ಬನನ್ನು ಥಳಿಸಿದ್ದಾರೆ.
ನಂತರ ಪೊಲೀಸರು ಖುಷಿ ಜ್ಯೂಸ್ ಕಾರ್ನರ್ ಮಾಲೀಕ ಅಮೀರ್ ಖಾನ್ ನನ್ನು ಬಂಧಿಸಿ ಆತನ ಅಪ್ರಾಪ್ತ ಸಹಾಯಕನನ್ನು ವಶಕ್ಕೆ ಪಡೆದಿದ್ದಾರೆ.
ಅಂಗಡಿಯವರು ಹಣ್ಣಿನ ರಸಕ್ಕೆ ಹಳದಿ ಮಿಶ್ರಿತ ದ್ರವವನ್ನು ಬೆರೆಸುವುದನ್ನು ಕೆಲವರು ಗಮನಿಸಿದ ನಂತರ ವಿಷಯ ಬೆಳಕಿಗೆ ಬಂದಿದೆ. ಅಷ್ಟರಲ್ಲಾಗಲೇ ಭಾರೀ ಸಂಖ್ಯೆಯಲ್ಲಿ ಜಮಾಯಿಸಿದ ಜನರು ಅಂಗಡಿ ಮಾಲೀಕರನ್ನು ಥಳಿಸಿದ್ದಾರೆ.
ಪೊಲೀಸರಿಗೆ ಮಾಹಿತಿ ಬಂದ ನಂತರ ಜ್ಯೂಸ್ ಸ್ಟಾಲ್ ನಲ್ಲಿ ತಪಾಸಣೆ ನಡೆಸಿದಾಗ ಮೂತ್ರ ತುಂಬಿದ ಪ್ಲಾಸ್ಟಿಕ್ ಡಬ್ಬ ಪತ್ತೆಯಾಗಿದೆ
ಈ ಕೃತ್ಯದ ಹಿಂದಿನ ಉದ್ದೇಶವನ್ನು ಪತ್ತೆ ಹಚ್ಚಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಭಾಸ್ಕರ್ ವರ್ಮಾ ಹೇಳಿದ್ದಾರೆ.
ಅಂಗಡಿಯಲ್ಲಿ ಮೂತ್ರ ಇದ್ದ ಬಗ್ಗೆ ಅಂಗಡಿಯವ ಯಾವುದೇ ತೃಪ್ತಿಕರ ಉತ್ತರವನ್ನು ನೀಡದ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ ಎಂದು ವರ್ಮಾ ಹೇಳಿದ್ದಾರೆ.
“ಸೆಪ್ಟೆಂಬರ್ 13 ರಂದು ಮಾಹಿತಿ ಬಂದ ನಂತರ, ಪೊಲೀಸರು ತಕ್ಷಣ ಸ್ಥಳಕ್ಕೆ ಆಗಮಿಸಿದರು ಮತ್ತು ಅಂಗಡಿಯಲ್ಲಿನ ಡಬ್ಬದಲ್ಲಿ ಸುಮಾರು 1 ಲೀಟರ್ ಅನುಮಾನಾಸ್ಪದ ಮೂತ್ರ ಪತ್ತೆಯಾಗಿದೆ. ಪೊಲೀಸರು ಅಮೀರ್ ಖಾನ್ ನನ್ನು ಬಂಧಿಸಿದ್ದಾರೆ.
ಎಫ್ಐಆರ್ ದಾಖಲಿಸಲಾಗಿದೆ ಮತ್ತು ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ. ನಡೆಯುತ್ತಿದೆ” ಎಂದು ವರ್ಮಾ ಹೇಳಿದರು.