ಸಿರಿಬಾಗಿಲು ಪ್ರತಿಷ್ಠಾನದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ
ಕೆ.ಎಂ .ಸಿ .ಆಸ್ಪತ್ರೆ ಅತ್ತಾವರ ಮಂಗಳೂರು ಇವರಿಂದ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಸಾಂಸ್ಕೃತಿಕ ಭವನದಲ್ಲಿ ದಿನಾಂಕ 14- 09- 2024 ನೇ ಶನಿವಾರದಂದು ಉಚಿತ ವೈದ್ಯಕೀಯ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.
ಸಿರಿಬಾಗಿಲು ಪ್ರತಿಷ್ಠಾನದಿಂದ ಕೆ.ಎಂ.ಸಿ .ಆಸ್ಪತ್ರೆ ಅತ್ತಾವರ ಇವರ ಎರಡನೇ ವೈದ್ಯಕೀಯ ಶಿಬಿರವಾಗಿರುತ್ತದೆ. ಈ ಶಿಬಿರವನ್ನು ಕಾಸರಗೋಡಿನ ಹಿರಿಯ ವೈದ್ಯರಾದಂತಹ ಡಾಕ್ಟರ್ ಬಿ. ಎಸ್. ರಾವ್ ಅವರು ದೀಪ ಪ್ರಜ್ವಲನೆಯ ಮೂಲಕ ಉದ್ಘಾಟಿಸಿದರು .
ಇಂತಹ ಶಿಬಿರಗಳು ಗ್ರಾಮೀಣ ಪ್ರದೇಶದಲ್ಲಿ ನಡೆದು ಬಡಬಗ್ಗರಿಗೆ ಇದರಿಂದ ಉಪಯೋಗವಾಗಬೇಕು. ಈ ಶಿಬಿರದ ಪ್ರಯೋಜನವನ್ನು ಎಲ್ಲರೂ ಪಡೆದುಕೊಳ್ಳಬೇಕು, ಸಿರಿಬಾಗಿಲು ಪ್ರತಿಷ್ಠಾನ ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆ ಇಂತಹ ಚಟುವಟಿಕೆ ನಡೆಸುತ್ತಿರುವುದು ಹೆಮ್ಮೆಯ ವಿಚಾರ ಎಂದರು.
ಕೆ.ಎಂ.ಸಿ.ಆಸ್ಪತ್ರೆಯ ಕ್ಯಾನ್ಸರ್ ತಜ್ಞರಾದಂತಹ ಡಾಕ್ಟರ್ ಅರವಿಂದ ಎನ್. ಅವರು ಕ್ಯಾನ್ಸರ್ ಕಾಯಿಲೆ ಬಗ್ಗೆ ಜಾಗೃತಿಗಾಗಿ ಮಾಹಿತಿಯನ್ನು ನೀಡಿದರು. ಮಧ್ಯಪಾನ ,ಗುಟ್ಕ ಸೇವನೆ, ಸಿಗರೇಟ್ ಸೇವನೆ ಇತ್ಯಾದಿ ದುಶ್ಚಟಗಳಿಂದ ಸಮಾಜದ ಎಲ್ಲರೂ ಮುಕ್ತರಾಗಬೇಕು ಎಂದರು. ಕ್ಯಾನ್ಸರ್ ಇಂದ ಯಾರು ಭಯಭೀತರಾಗಬೇಕಾಗಿಲ್ಲ. ಕ್ಯಾನ್ಸರ್ ಬಂದರೆ ಹೇಗೆ ಗುಣಪಡಿಸಬಹುದು? ಯಾವ ರೀತಿ ಜಾಗೃತಿ ವಹಿಸಬೇಕು ?ಇತ್ಯಾದಿ ವಿಚಾರಗಳನ್ನು ತೆರೆದಿಟ್ಟರು.
ಕಲಾ ವಲಯದ ಶ್ರೇಷ್ಠ ಸಂಸ್ಥೆ ಸಿರಿಬಾಗಿಲು ಪ್ರತಿಷ್ಠಾನ ಇಂತಹ ಚಟುವಟಿಕೆ ನಡೆಸುತ್ತಿರುವುದು ತಂಬಾ ಸಂತಸ ತಂದಿದೆ ಅಂದರು. ಶ್ರೀ ವಾಸುದೇವ ಕಾರಂತ ಉಜಿರೆಕೆರೆ, ಇ. ಕೆ. ನಾಯಿನಾರ್ ಹಾಸ್ಪಿಟಲ್ ನ ಎಲುಬು ತಜ್ಞರಾದ ಡಾ. ಹರಿ ಕಿರಣ ಬಂಗೇರ ಉಪಸ್ಥಿತರಿದ್ದರು.
ಶ್ರೀ ಜಗದೀಶ ಕೆ. ಕೂಡ್ಲು ನಿರೂಪಿಸಿದರೆ, ಚಂದ್ರಕಲಾ ನೀರಾಳ ವಂದಿಸಿದರು. ಪ್ರತಿಷ್ಠಾನದ ಅಧ್ಯಕ್ಷ ರಾಮಕೃಷ್ಣ ಮಯ್ಯ ಅತಿಥಿಗಳನ್ನು ಸ್ವಾಗತಿಸಿದರು. ಆ ಬಳಿಕ ಕೆ.ಎಂ.ಸಿ ಆಸ್ಪತ್ರೆ ಅತ್ತಾವರ ಮಂಗಳೂರು ಇದರ ವೈದ್ಯಕೀಯ ಶಿಬಿರದ ಸಂಘಟಕ ಶ್ರೀ ಉದಯ ಭಟ್ ನೇತೃತ್ವದಲ್ಲಿ ಶಿಬಿರ ನಡೆಯಿತು.
150ಕ್ಕೂ ಹೆಚ್ಚು ಜನರಿಗೆ ಇದರಿಂದ ಪ್ರಯೋಜನ ಪಡೆಯುವಂತಾಯಿತು. ಪ್ರತಿಷ್ಠಾನದ ಟ್ರಸ್ಟಿ ಸುಮಿತ್ರಾ ಮಯ್ಯ, ಶ್ರೀ ಮುಖ ಮಯ್ಯ, ಶ್ರೀರಾಜ್ ಮಯ್ಯ, ಶಿವ ನಾರಾಯಣ ವಾಟ್ಸಾಪ್ ಬಳಗದ ಸದಸ್ಯರು ಸಹಕರಿಸಿದರು.ಊರಿನ ಪ್ರಮುಖರು ಭಾಗವಹಿಸಿದರು.
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions