Thursday, September 19, 2024
Homeಸುದ್ದಿಯಕ್ಷಗಾನ ಪ್ರಾತ್ಯಕ್ಷಿಕೆ, ಪ್ರಶಸ್ತಿ ಪ್ರದಾನ, ಶರಸೇತು ಬಂಧನ ತಾಳಮದ್ದಳೆ, ಭಕ್ತ ಪ್ರಹ್ಲಾದ ಯಕ್ಷಗಾನ ಪ್ರದರ್ಶನ

ಯಕ್ಷಗಾನ ಪ್ರಾತ್ಯಕ್ಷಿಕೆ, ಪ್ರಶಸ್ತಿ ಪ್ರದಾನ, ಶರಸೇತು ಬಂಧನ ತಾಳಮದ್ದಳೆ, ಭಕ್ತ ಪ್ರಹ್ಲಾದ ಯಕ್ಷಗಾನ ಪ್ರದರ್ಶನ

ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಇವರ ಪ್ರಾಯೋಜಕತ್ವದಲ್ಲಿ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ ಇವರ ಸಹಯೋಗದೊಂದಿಗೆ ಗಡಿನಾಡು ಕಾಸರಗೋಡಿನ ಸಿರಿಬಾಗಿಲಿನ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನದಲ್ಲಿ ನಡೆದ ಎರಡು ದಿನಗಳ ತೆಂಕುತಿಟ್ಟು ಯಕ್ಷ ಮಾರ್ಗ- ಶಿಬಿರ- ಯಕ್ಷಗಾನ ಪ್ರದರ್ಶನ ಇಂದು ಸಂಪನ್ನಗೊಂಡಿತು.

ತೆಂಕುತಿಟ್ಟು ಶಾಸ್ತ್ರೀಯ ನಾಟ್ಯ ಗುರುಗಳಾದ ಕರ್ಗಲ್ಲು ವಿಶ್ವೇಶ್ವರ ಭಟ್ ಇವರಿಂದ ಎರಡು ದಿನಗಳು ಪ್ರಾತ್ಯಕ್ಷಿಕೆಗಳು ನಡೆದವು. 50ಕ್ಕೂ ಹೆಚ್ಚು ಶಿಬಿರಾರ್ಥಿಗಳು ಭಾಗವಹಿಸಿ ಸದುಪಯೋಗ ಪಡೆದರು. ಯಕ್ಷಗಾನದ ಸಭಾ ವಂದನೆ -ಸಭಾ ಕಲಸು ತ್ತಿತ್ತಿತೈಯ ನಾಟ್ಯ ಕುಣಿತ ಇತ್ಯಾದಿಗಳ ಕುರಿತಾಗಿ ಮಾರ್ಗದರ್ಶನ ನೀಡಿದರು. ಜೊತೆಯಲ್ಲಿ ವಿದ್ಯಾರ್ಥಿಗಳನ್ನು ಪ್ರಾತ್ಯಕ್ಷಿಕೆಯಲ್ಲಿ ತೊಡಗಿಸಿಕೊಂಡಿದ್ದು ವಿಶೇಷವಾಗಿತ್ತು..

ಸಮಾರೋಪ ಸಮಾರಂಭಕ್ಕೆ ಮೊದಲು ಸಿರಿಬಾಗಿಲು ವೆಂಕಪ್ಪಯ್ಯ ಪ್ರಶಸ್ತಿಯನ್ನು ಯಕ್ಷಗಾನ ವಿದ್ವಾಂಸ, ಪ್ರಸಂಗ ಕರ್ತ , ಪಾರ್ತಿಸುಬ್ಬ ಪ್ರಶಸ್ತಿ ಪುರಸ್ಕೃತರಾದ ಶ್ರೀಧರ ಡಿಎಸ್ ರವರಿಗೆ ನೀಡಿ ಗೌರವಿಸಲಾಯಿತು.

ಸದಸ್ಯತ್ವ ನೋಂದಾವಣಾ ಅಭಿಯಾನದ ಅಂಗವಾಗಿ ಯಚ್. ಕೃಷ್ಣ ಭಟ್ ಮಂಗಳೂರು ಇವರಿಗೆ ಪೋಷಕರು ಗೌರವ ನೀಡಲಾಯಿತು.

ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಕಾಸರಗೋಡು ವಿಧಾನಸಭಾ ಕ್ಷೇತ್ರದ ಸದಸ್ಯರಾದ ಶ್ರೀ ಎನ್.ಎ .ನೆಲ್ಲಿಕುನ್ನು ಅವರು ಭಾಗವಹಿಸಿದರು .ಯಕ್ಷಗಾನ ಕ್ಷೇತ್ರಕ್ಕೆ ಸಿರಿಬಾಗಿಲು ಪ್ರತಿಷ್ಠಾನದ ಕೊಡು ಅಪಾರವಾದುದು. ಕೇರಳ ಸರ್ಕಾರದಿಂದಲೂ ಪ್ರತಿಷ್ಠಾನಕ್ಕೆ ಆರ್ಥಿಕ ಸಹಕಾರ ಸಿಗುವಂತೆ ವಿಧಾನಸಭೆಯಲ್ಲಿ ಪ್ರಸ್ಥಾಪಿಸಿ ತಾನು ಪ್ರಯತ್ನಿಸುತ್ತೇನೆ. ಎಂದು ನುಡಿದರು.

ಪ್ರತಿಷ್ಠಾನಕ್ಕೆ ಬರುವ ರಸ್ತೆಯನ್ನು ದುರಸ್ತಿಗೊಳಿಸುವಲ್ಲಿ ಸಹಕರಿಸುತ್ತೇನೆ ಎಂದು ಆಶ್ವಾಸನೆಯಿತ್ತರು. ಸಿರಿಬಾಗಿಲು ಪ್ರತಿಷ್ಠಾನದಲ್ಲಿ ಯಕ್ಷಗಾನ ಅಕಾಡೆಮಿಯ ಕಾರ್ಯಕ್ರಮವು ಗಮನಾರ್ಹವಾಗಿದೆ, ಔಚಿತ್ಯಪೂರ್ಣವಾಗಿದೆ ಎಂದರು.


ಸಭೆಯ ಅಧ್ಯಕ್ಷತೆಯನ್ನು ಯಕ್ಷಗಾನ ಅಕಾಡೆಮಿಯ ರಿಜಿಸ್ಟರ್ ಶ್ರೀಮತಿ ನಮ್ರತಾ ಅವರು ವಹಿಸಿ ,ಗಡಿನಾಡು ಕಾಸರಗೋಡಿನಲ್ಲಿ ಇಂತಹ ಚಟುವಟಿಕೆಗೆ ಅಕಾಡೆಮಿ ಯಾವತ್ತೂ ನಿಮ್ಮ ಜೊತೆ ಇದೆ ಎಂದು ಭರವಸೆ ಕೊಟ್ಟರು. ಮುಖ್ಯ ಅತಿಥಿಗಳಾಗಿ ಕೃಷ್ಣಪ್ಪ ಕೀನ್ಯಾ ಸದಸ್ಯರು ಯಕ್ಷಗಾನ ಅಕಾಡೆಮಿ ಭಾಗವಹಿಸಿದ್ದರು. ಗಡಿನಾಡು ಕಾಸರಗೋಡಿನ ಏಕೈಕ ಅಕಾಡೆಮಿಯ ಸದಸ್ಯರಾದ ಶ್ರೀ ಸತೀಶ ಅಡಪ ಸಂಕಬೈಲು ಅವರು ನಿರೂಪಿಸಿದರು .ಜಗದೀಶ್ ಕೆ ಕೂಡ್ಲು ಮುಂತಾದವರು ಸಭಾ ಕಾರ್ಯಕ್ರಮದಲ್ಲಿ ಸಹಕರಿಸಿದರು.

ಅದಕ್ಕೂ ಮೊದಲು ಯಕ್ಷ ಬಳಗ ಹೊಸಂಗಡಿಯವರಿಂದ ಶರಸೇತುಬಂಧನ ಯಕ್ಷಗಾನ ತಾಳಮದಲಿ ನಡೆಯಿತು. ಸಮರೋಪ ಸಮಾರಂಭದ ಬಳಿಕ ಸಿರಿಬಾಗಿಲು ಪ್ರತಿಷ್ಠಾನದ ನೇತೃತ್ವದಲ್ಲಿ ಪ್ರಸಿದ್ಧ ಕಲಾವಿದರಿಂದ ಭಕ್ತ ಪ್ರಹ್ಲಾದ ಯಕ್ಷಗಾನ ಪ್ರದರ್ಶನ ನಡೆದು ಜನ ಮೆಚ್ಚುಗೆ ಗಳಿಸಿತು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments