Saturday, January 18, 2025
Homeಸುದ್ದಿಅರಿವು ಕೇಂದ್ರದ ಗ್ರಂಥಪಾಲಕರಿಗೆ ಇಂಗ್ಲಿಷ್‌ ತರಬೇತಿ

ಅರಿವು ಕೇಂದ್ರದ ಗ್ರಂಥಪಾಲಕರಿಗೆ ಇಂಗ್ಲಿಷ್‌ ತರಬೇತಿ

ಪುತ್ತೂರು: ಆಕಾಂಕ್ಷಾ ಚಾರಿಟೆಬಲ್‌ ಟ್ರಸ್ಟ್‌, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌ ಮತ್ತು  ಕೋಡ್‌ಕ್ರಾಫ್ಟ್‌ ಟೆಕ್ನಾಲಜೀಸ್‌ ಅವರ ಸಂಯುಕ್ತ ಆಶ್ರಯದಲ್ಲಿ ‘ಅರಿವು ಕೇಂದ್ರ’ಗಳ ಗ್ರಂಥಪಾಲಕರಿಗಾಗಿ ಇಂಗ್ಲಿಷ್ ತರಬೇತಿ ಕಾರ್ಯಕ್ರಮವು ಪುತ್ತೂರಿನಲ್ಲಿ ನಡೆಯಿತು.

ಈ ಕಾರ್ಯಕ್ರಮದ ಮೊದಲ ಹಂತದಲ್ಲಿ 25 ಗಂಟೆಗಳ ಆನ್‌ಲೈನ್‌ ತರಗತಿಗಳನ್ನು ನಡೆಸಲಾಯಿತು.  ಅಂತಿಮ ಹಂತವಾಗಿ, ಪುತ್ತೂರು, ಕಡಬ ಮತ್ತು ಸುಳ್ಯ ತಾಲ್ಲೂಕಿನ ಗ್ರಂಥಪಾಲಕರಿಗಾಗಿ ಕಾರ್ಯಾಗಾರವನ್ನು ಪುತ್ತೂರು ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಲಾಯಿತು.

ಆಗಸ್ಟ್ 17 ಮತ್ತು 18, 2024 ರಂದು ನಡೆದ ಈ ಕಾರ್ಯಾಗಾರದಲ್ಲಿ 65 ಕ್ಕೂ ಹೆಚ್ಚು ಗ್ರಂಥಪಾಲಕರು ಭಾಗವಹಿಸಿದರು. ಪುತ್ತೂರು ತಾಲ್ಲೂಕು ಪಂಚಾಯತ್‌ ಕಾರ್ಯನಿರ್ವಹಣಾಧಿಕಾರಿ ಶ್ರೀ ನವೀನ್‌ ಭಂಡಾರಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಗ್ರಂಥಪಾಲಕರಿಗೆ ಡಿಜಿಟಲ್‌ ಸಂಪನ್ಮೂಲಗಳನ್ನು ಬಳಸಿಕೊಂಡು ಇಂಗ್ಲಿಷ್‌ ಪಠ್ಯಶಕ್ತಿ ಅಭಿವೃದ್ದಿಪಡಿಸಲು ಸೂಚಿಸಿದರು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಇಂಗ್ಲಿಷ್‌ ಭಾಷೆಯ ಮಹತ್ವವನ್ನು ಅವರು ಪ್ರಸ್ತಾಪಿಸಿದರು.

ಇದೇ ಸಂದರ್ಭದಲ್ಲಿ ಬೇರೆ ತಾಲೂಕುಗಳ ಗ್ರಂಥಪಾಲಕರಿಗಾಗಿ ಮಂಗಳೂರು ಮತ್ತು ಬೆಳ್ತಂಗಡಿ ತಾಲೂಕು ಪಂಚಾಯತ್‌ಗಳ ಸಭಾಭವನಗಳಲ್ಲಿ ಕಾರ್ಯಾಗಾರಗಳನ್ನು ನಡೆಸಲಾಯಿತು.

ಈ ಕಾರ್ಯಾಗಾರವು ಮಂಗಳೂರಿನ ಕೋಡ್‌ಕ್ರಾಫ್ಟ್‌ ಟೆಕ್ನಾಲಜೀಸ್‌ ಕಂಪನಿಯ ಸಿಎಸ್ ರ್ ನಿಧಿಯ  ಸಹಾಯದಿಂದ ನಡೆಯಿತು. ಆಕಾಂಕ್ಷಾ ಚಾರಿಟೆಬಲ್‌ ಟ್ರಸ್ಟ್‌ನ ವ್ಯವಸ್ಥಾಪಕ ಟ್ರಸ್ಟಿ ಡಾ. ಶ್ರೀಶ ಬೈಪದವು  ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಗ್ರಂಥಪಾಲಕರಿಗೆ ಸಂಧ್ಯಾ ಸಾವಿತ್ರಿ, ನವ್ಯಶ್ರೀ, ಕೌಶಿಕ್‌, ಸೀಮಾ ಲಹರಿ ಮತ್ತು ಸ್ಪೂರ್ತಿ ಲಕ್ಷ್ಮಿ ಇವರುಗಳು ತರಬೇತಿ ನೀಡಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments