ಹೈದರಾಬಾದ್‌ನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಮೇಲೆ ಆಕೆಯ ಬಾಲ್ಯ ಸ್ನೇಹಿತ ಸೇರಿದಂತೆ ಇಬ್ಬರು ಅತ್ಯಾಚಾರವೆಸಗಿದ್ದಾರೆ.
ಸೋಮವಾರ ತಡರಾತ್ರಿ ನಡೆದ ಪಾರ್ಟಿಯೊಂದರಲ್ಲಿ 24 ವರ್ಷದ ಸಾಫ್ಟ್‌ವೇರ್ ಉದ್ಯೋಗಿಯೊಬ್ಬಳ ಮೇಲೆ ಆಕೆಯ ಬಾಲ್ಯದ ಗೆಳೆಯ ಸೇರಿದಂತೆ ಇಬ್ಬರು ವ್ಯಕ್ತಿಗಳು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ವನಸ್ಥಲಿಪುರಂ ಪೊಲೀಸರು ಪ್ರಮುಖ ಆರೋಪಿ ಗೌತಮ್ ರೆಡ್ಡಿಯನ್ನು ಮಂಗಳವಾರ ಬಂಧಿಸಿದ್ದಾರೆ.
ಪೊಲೀಸರ ಪ್ರಕಾರ, ಸೋಮವಾರ ರಾತ್ರಿ ಈ ಘಟನೆ ಸಂಭವಿಸಿದ್ದು, ಇತ್ತೀಚೆಗೆ ಹೊಸ ಸಾಫ್ಟ್‌ವೇರ್ ಉದ್ಯೋಗವನ್ನು ಪಡೆದ ಮಹಿಳೆ, ವನಸ್ಥಲಿಪುರಂನ ಬಾರ್ ಮತ್ತು ರೆಸ್ಟೋರೆಂಟ್‌ನಲ್ಲಿ ತನ್ನ ಖುಷಿಯನ್ನು ಆಚರಿಸಲು ತನ್ನ ಸ್ನೇಹಿತನನ್ನು ಆಹ್ವಾನಿಸಿದಳು.
ತನ್ನ ಹೊಸ ಸಾಫ್ಟ್‌ವೇರ್ ಉದ್ಯೋಗ ಸಿಕ್ಕಿದ ಸಂತೋಷವನ್ನು ಆಚರಿಸಲು ಭೇಟಿಯಾದ ವನಸ್ಥಲಿಪುರಂನ ರೆಸ್ಟೋರೆಂಟ್-ಕಮ್-ಬಾರ್‌ನಲ್ಲಿ ತನ್ನ ಬಾಲ್ಯದ ಸ್ನೇಹಿತ ಮತ್ತು ಆತನ ಸಂಬಂಧಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಸಂತ್ರಸ್ತೆಯ ದೂರಿನ ನಂತರ ಈ ಘಟನೆ ಬೆಳಕಿಗೆ ಬಂದಿದೆ.
ರೆಸ್ಟೋರೆಂಟ್ ಆವರಣದ ಕೆಳಗಿರುವ ಹೋಟೆಲ್ ಕೋಣೆಗೆ ತೆರಳುವ ಮೊದಲು ರೆಸ್ಟೋರೆಂಟ್‌ನಲ್ಲಿ ತಾನು ಮತ್ತು ತನ್ನ ಸ್ನೇಹಿತ ಮದ್ಯ ಸೇವಿಸಿದ್ದೆವು ಎಂದು ಮಹಿಳೆ ತನ್ನ ದೂರಿನಲ್ಲಿ ತಿಳಿಸಿದ್ದಾರೆ.
ಅಲ್ಲಿಯೇ ಆಕೆಯ ಸ್ನೇಹಿತ ಕುಡಿದ ಅಮಲಿನಲ್ಲಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ ಎನ್ನಲಾಗಿದೆ. ಆಕೆಯ ಸ್ನೇಹಿತನ ಸೋದರಸಂಬಂಧಿ ನಂತರ ಹೋಟೆಲ್ ಕೋಣೆಯಲ್ಲಿ ಅವರೊಂದಿಗೆ ಸೇರಿಕೊಂಡರು ಮತ್ತು ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಪೊಲೀಸ್ ವರದಿ ತಿಳಿಸಿದೆ.
ಅತ್ಯಾಚಾರದ ನಂತರ, ಇಬ್ಬರು ವ್ಯಕ್ತಿಗಳು ಸ್ಥಳದಿಂದ ತೆರಳಿದರು.
ನಂತರ ಮಹಿಳೆ ತನ್ನ ಸಹೋದರನನ್ನು ಸಂಪರ್ಕಿಸಿ ಘಟನೆಯ ಬಗ್ಗೆ ತಿಳಿಸಿದ್ದಾಳೆ.
ಮಹಿಳೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆಕೆಯನ್ನು ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಯುವತಿಯ ಸ್ನೇಹಿತನನ್ನು ಬಂಧಿಸಲಾಗಿದೆ. ಇನ್ನೊಬ್ಬನಿಗಾಗಿ ಶೋಧಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.