Saturday, January 18, 2025
Homeಸುದ್ದಿಕೂಡುಮನೆ - ಕಿರು ಕಾದಂಬರಿ 

ಕೂಡುಮನೆ – ಕಿರು ಕಾದಂಬರಿ 

‘ಕೂಡುಮನೆ’ (ಕಿರು ಕಾದಂಬರಿ) ಎಂಬ ಈ ಕೃತಿಯು ಮೊದಲು ಪ್ರಕಟಗೊಂಡು ಓದುಗರ ಕೈ ಸೇರಿದ್ದು 1994ರಲ್ಲಿ. 2023ರಲ್ಲಿ ಈ ಪುಸ್ತಕವು ಮರು ಮುದ್ರಣಗೊಂಡು ಸಾಹಿತ್ಯಾಸಕ್ತರಿಗೆ ದೊರಕಿದೆ ಎಂಬುದು ಸಂತೋಷದ ವಿಚಾರ.

ನಿವೃತ್ತ ಉಪಾನ್ಯಾಸಕರೂ ಲೇಖಕರೂ, ತಾಳಮದ್ದಳೆ ಕ್ಷೇತ್ರದ ಹಿರಿಯ ಅರ್ಥಧಾರಿಗಳೂ ಆಗಿರುವ ಶ್ರೀ ರಾಧಾಕೃಷ್ಣ ಕಲ್ಚಾರ್ ಅವರು ಬರೆದ ಹೊತ್ತಗೆಯಿದು. ಕೂಡುಮನೆ ಎಂಬ ಈ ಕಿರು ಕಾದಂಬರಿಯು ಇಪ್ಪತ್ತೆಂಟು ವರ್ಷಗಳ ಹಿಂದೆ ಅನಂತ ಪ್ರಕಾಶ ಸಂಸ್ಥೆಯು ರಾಜ್ಯಮಟ್ಟದಲ್ಲಿ ಏರ್ಪಡಿಸಿದ ಕಾದಂಬರಿ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಗಳಿಸಿತ್ತು.

ಮೊದಲ ಮುದ್ರಣದ ಪ್ರತಿಗಳೆಲ್ಲಾ ಬಹುಬೇಗನೆ ಓದುಗರ ಕೈಸೇರಿತ್ತು. ಸಾಹಿತ್ಯಾಸಕ್ತರ ಅಪೇಕ್ಷೆಯಂತೆ ಈಗ ಮರು ಮುದ್ರಣಗೊಂಡಿದೆ. ‘ವಿಜ್ಞಾಪನೆ’ ಎಂಬ ಶೀರ್ಷಿಕೆಯಡಿಯಲ್ಲಿ ಲೇಖಕ ಶ್ರೀ ರಾಧಾಕೃಷ್ಣ ಕಲ್ಚಾರ್ ಇವರು ತಮ್ಮ ಅನಿಸಿಕೆಗಳನ್ನು ತಿಳಿಸಿರುತ್ತಾರೆ.

‘ಕೂಡುಮನೆ’ಲಿ  ನಾಂದಿ’ ಎಂಬ ಶೀರ್ಷಿಕೆಯಡಿಯಲ್ಲಿ ಶ್ರೀ ಮುರಳೀಧರ ಉಪಾಧ್ಯ ಹಿರಿಯಡಕ ಅವರು ಮುನ್ನುಡಿಯನ್ನು ಬರೆದಿರುತ್ತಾರೆ. ಪ್ರಕಾಶಕ ಶ್ರೀ ಸಚ್ಚಿದಾನಂದ ಉಡುಪರು ತಮ್ಮ ಅನಿಸಿಕೆಗಳನ್ನು ತಿಳಿಸಿರುತ್ತಾರೆ.

ಇದು ಒಟ್ಟು ಎಪ್ಪತ್ತು ಪುಟಗಳನ್ನು ಹೊಂದಿದ ಕೃತಿ. ಈ ಪುಸ್ತಕದ ಮುದ್ರಕರು ಅನಂತ ಪ್ರಕಾಶ ಮುದ್ರಣಾಲಯ ಕಿನ್ನಿಗೋಳಿ. ಬೆಲೆ ರೂಪಾಯಿ ಎಪ್ಪತ್ತು ಮಾತ್ರ. ಮುಖಪುಟ ವಿನ್ಯಾಸಕರು ಶ್ರೀ ದಿನೇಶ ಹೊಳ್ಳ ಮಂಗಳೂರು. ಈ ಕೃತಿಯು ಐದು ಅಧ್ಯಾಯವನ್ನು ಒಳಗೊಂಡಿದೆ. ಲೇಖಾಕರಿಗೆ ಯಕ್ಷದೀಪ ವತಿಯಿಂದ ಅಭಿನಂದನೆಗಳು. 

ಶ್ರೀ ರಾಧಾಕೃಷ್ಣ ಕಲ್ಚಾರ್ ಅವರ ಇತರ ಕೃತಿಗಳು. 

೧. ಅವರವರ ದಾರಿ ಮತ್ತು ಇತರ ಕಥೆಗಳು (ಕಥಾ ಸಂಕಲನ)

೨. ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ (ವ್ಯಕ್ತಿ ಚಿತ್ರ)

೩. ಪರಕಾಯ ಪ್ರವೇಶ (ಪುರಾಣ ಪಾತ್ರ ಕಥನ)

೪. ಪರಕಾಯ ಪ್ರವೇಶ  – ಭಾಗ ೨

೫. ಆ ಲೋಚನ (ಅಂಕಣ ಲೇಖನಗಳು)

೬. ಅರ್ಥಾಲೋಕ (ತಾಳಮದ್ದಳೆಯೆಂಬ ರಂಗಭೂಮಿಯ ಕುರಿತು)

೭. ಉಲಿಯ ಉಯ್ಯಾಲೆ (ತಾಳಮದ್ದಳೆಯ ಅನುಭವ ಕಥನ)

೮. ಪೀಠಿಕಾ ಪ್ರಕರಣ (ಪುರಾಣ ಪಾತ್ರಗಳ ಆತ್ಮನಿವೇದನೆ)

೯. ತಲ್ಲಣಿಸದಿರು ಮನವೆ (ನೆಮ್ಮದಿಯ ಓದಿಗಾಗಿ ಲೇಖನಗಳು)

ರಾಧಾಕೃಷ್ಣ ಕಲ್ಚಾರ್ , ‘ನಿವೇಶ’, 4/27, ಶಿವಾಜಿನಗರ, ಅಂಚೆ ವಿಟ್ಲ, – 54143, ಬಂಟ್ವಾಳ ತಾಲೂಕು, ದ.ಕ, ಮೊಬೈಲ್ : 9449086653

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments