ಉಡುಪಿ ತಾಲೂಕು ಕೋಟ ಪ್ರೌಢಶಾಲೆ ಹತ್ತಿರದಲ್ಲಿ ಹಂದಟ್ಟು ಕೋಟತಟ್ಟು ಗ್ರಾಮದಲ್ಲಿ ವಿರಾಜಮಾನವಾಗಿರುವ ಹಂದೆ ಶ್ರೀ ಮಹಾವಿಷ್ಣು ಶ್ರೀ ಮಹಾಗಣಪತಿ ದೇವಸ್ಥಾನವು 600ಕ್ಕೂ ಹೆಚ್ಚು ವರ್ಷಗಳಷ್ಟು ಹಳೆಯದು. ಇಲ್ಲಿನ ಶಿಲಾ ಶಾಸನ ಹಾಗೂ ಇತರ ಉಲ್ಲೇಖಗಳಿಂದ ಈ ದೇವಸ್ಥಾನಕ್ಕೆ 600ಕ್ಕೂ ಹೆಚ್ಚು ವರ್ಷಗಳಷ್ಟು ಇತಿಹಾಸ ಇರುವುದು ಕಂಡುಬರುತ್ತದೆ. ಕೋಟ ಮಹಾ ಜಗತ್ತಿನ ಪ್ರಮುಖ ಮನೆತನದವರಾದ ಹಂದೆ ಅವರ ಕುಟುಂಬದ ಪಾರಂಪರಿಕ ಪರಮಾರಾಧ್ಯ ದೇವರಾದ್ದರಿಂದಲೂ ಆಡಳಿತವನ್ನು ಅವರೇ ನಿರ್ವಹಿಸುತ್ತಾ ಬಂದ ಕಾರಣದಿಂದ ಹಂದೆ ದೇವಸ್ಥಾನ ಎಂಬ ಹೆಸರು ವಾಡಿಕೆಯಲ್ಲಿದೆ.
ಪ್ರಸ್ತುತ 10-05-2024ರ ಅಕ್ಷಯ ತೃತೀಯಾದಂದು ರಥೋತ್ಸವ ನಡೆಯಲಿದ್ದು, ದಿನಾಂಕ 05-05-2024ರಿಂದ ದೇವಸ್ಥಾನದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ ಹಾಗೂ ಸಭಾಕಾರ್ಯಕ್ರಮ, ಸನ್ಮಾನ ಮತ್ತು ಸಾಂಸ್ಕೃತಿಕ ಕಾರ್ಯಗಳು ದಿನಾಂಕ 09-05-2024ರಂದು ದೇವಸ್ಥಾನದ ಶ್ರೀ ನಾಗಪ್ಪಯ್ಯ ಹಂದೆ ರಂಗಮಂಟಪದಲ್ಲಿ ನಡೆಯಲಿದೆ.
ದಿನಾಂಕ 09-05-2024ರಂದು ಸಂಜೆ 5.00ರಿಂದ ಸಭಾಕಾರ್ಯಕ್ರಮ ಮತ್ತು ಸ್ಥಳೀಯ ವಿಶೇಷ ಸಾಧಕರಿಗೆ ಸನ್ಮಾನ ಮತ್ತು ಅಭಿನಂದನೆ ಕಾರ್ಯಕ್ರಮ ಹಾಗೂ ಗಂಟೆ 7.30ರಿಂದ ಯಕ್ಷದೇಗುಲ ಬೆಂಗಳೂರು ತಂಡ ಮತ್ತು ಅತಿಥಿಕಲಾವಿದರ ಕೂಡುವಿಕೆಯಲ್ಲಿ “ಸುದರ್ಶನ ಗರ್ವಭಂಗ” ಯಕ್ಷಗಾನ ಪ್ರದರ್ಶನ ನಡೆಯಲಿದೆ.
ಈ ಸಂದರ್ಭದಲ್ಲಿ ಯಕ್ಷಗಾನದ ಆರು ಜನ ಹಾಸ್ಯ ಕಲಾವಿದರಿಗೆ ನಿವೃತ್ತ ಶಿಕ್ಷಕರಾದ ಹೆಚ್. ಸೂರ್ಯನಾರಾಯಣ ಹಂದೆ ವಿಶೇಷ ಪುರಸ್ಕಾರ ನೀಡಲಿದ್ದಾರೆ. ದಿನಾಂಕ 10-05-2024ರಂದು ಸಂಜೆ 7.00ರಿಂದ ಶ್ರೀ ನಂದಿಕೇಶ್ವರ ಪ್ರಸಾದಿತ ಯಕ್ಷಗಾನ ಮಂಡಳಿ ಶ್ರೀ ಕ್ಷೇತ್ರ ಮೆಕ್ಕೆಕಟ್ಟು ಅವರಿಂದ ಯಕ್ಷಗಾನ “ಗದಾಯುದ್ಧ ಮತ್ತು ಚಂದ್ರಾವಳಿ ವಿಲಾಸ” ಯಕ್ಷಗಾನ ಪ್ರದರ್ಶನ ನಡೆಯಲಿದೆ.
11-05-2024ರಂದು ಸಂಜೆ 6.00ರಿಂದ ಸ್ಥಳೀಯ ಪ್ರತಿಭೆಗಳಿಂದ ‘ನೃತ್ಯಾಂಜಲಿ’, ನಂತರ 7.00ರಿಂದ ಅರೆಹೊಳೆ ಪತ್ರಿಷ್ಠಾನ ‘ನಂದಗೋಕುಲ’ ಸಾಂಸ್ಕೃತಿಕ ತಂಡದವರಿಂದ ‘ನೃತ್ಯ ವೈಭವ’. ರಾತ್ರಿ 9.30ರಿಂದ ತ್ರೀನೇತ್ರ ಕಲಾತಂಡ ಉಪ್ಲಾಡಿ ಇವರಿಂದ ‘ಗಗ್ಗರ ದೈವದನಿ’ ನಗೆನಾಟಕ ಪ್ರದರ್ಶನ ನಡೆಯಲಿದೆ.
ಇದಲ್ಲದೆ 09-05-2024 ಗುರುವಾರ ಸಂಜೆ 4.00ರಿಂದ ಶ್ರೀ ಮಹಾಗಣಪತಿ ಮಹಿಳಾ ಭಜನಾ ಮಂಡಳಿ ಕಾರ್ಕಡ, 10-05-2024ರ ಶುಕ್ರವಾರ ಬೆಳಿಗ್ಗೆ 10ರಿಂದ ಪಂಚವರ್ಣ ಮಹಿಳಾ ಮಂಡಲ ಕೋಟ ಇದರ ಸದಸ್ಯರಿಂದ, ಸಂಜೆ 4.00ರಿಂದ ಶ್ರೀ ರಾಮ ಮಹಿಳಾ ಭಜನಾ ಮಂಡಳಿ ಮಣೂರು, 11-05-2024 ಶನಿವಾರ ಸಂಜೆ 4.00ರಿಂದ ಶ್ರೀ ರಾಮ ಭಜನಾ ಮಂಡಳಿ, ಸಾಲಿಗ್ರಾಮ ಈ ಎಲ್ಲಾ ತಂಡದವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.
ಅಲ್ಲದೇ 10-05-2024 ಭಾನುವಾರ ಬೆಳಿಗ್ಗೆ 10.30ರಿಂದ ಶ್ರೀ ಮಹಾಗಣಪತಿ ಮಹಿಳಾ ವೇದಿಕೆ, ಹಂದೆ ದೇವಸ್ಥಾನ ಕೋಟ ಇವರಿಂದ ಲಲಿತಾ ಸಹಸ್ರನಾಮ ಮತ್ತು ವಿಷ್ಣು ಸಹಸ್ರನಾಮ ಪಠಣ ನಡೆಯಲಿದೆ. ಅಲ್ಲದೇ 11-05-2024ರಂದು ವಿಶೇಷವಾಗಿ ರಾತ್ರಿ ತೆಪ್ಪೋತ್ಸವ ನಡೆಯಲಿದೆ ಎಂದು ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಶ್ರೀ ಅಮರ್ ಹಂದೆಯವರು ಸುದ್ಧಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೋಟ ಸುದರ್ಶನ ಉರಾಳ
ಮೊ: 9448547237
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions