Sunday, January 19, 2025
Homeಸುದ್ದಿಯಕ್ಷಗಾನ ಪ್ರದರ್ಶನ

ಯಕ್ಷಗಾನ ಪ್ರದರ್ಶನ

ಇತ್ತೀಚೆಗೆ (31-03-2024) ತೆಕ್ಕಟ್ಟೆಯ ಹಯಗೀವ ಕಲ್ಯಾಣ ಮಂಟಪದಲ್ಲಿ ಬೆಂಗಳೂರಿನ ಯಕ್ಷಾಂಗಣ ಟ್ರಸ್ಟ್ ಮತ್ತು ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಬೆಂಗಳೂರು ಸಹಯೋಗದಲ್ಲಿ ಆಯೋಜಿಸಿದ ತೆಕ್ಕಟ್ಟೆ ಕೊಮೆಯ ಯಶಸ್ವಿ ಕಲಾವೃಂದದ ಬೆಳ್ಳಿ ಹಬ್ಬ ಶ್ವೇತಯಾನ ಶ್ವೇತ ಸಂಜೆ-13 ಕಾರ್ಯಕ್ರಮ ನಡೆಯಿತು. ಹೆಚ್. ಸುಜಯೀಂದ್ರ ಹಂದೆ ಕಾರ್ಯಕ್ರಮ ಉದ್ಘಾಟಿಸಿದರು.

ಕಾರ್ಯಕ್ರಮ ಶ್ವೇತಾ ಸಂಜೆಯ ಪ್ರಾಯೋಜಕರಾದ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಣೇಶ್ ತೆಕ್ಕಟ್ಟೆ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಯಕ್ಷಾಂಗಣ ಟ್ರಸ್ಟ್ ಸಂಚಾಲಕ ಸುದರ್ಶನ ಉರಾಳ, ಯಶಸ್ವಿ ಕಲಾವೃಂದದ ಅಧ್ಯಕ್ಷ ಮಲ್ಯಾಡಿ ಸೀತಾರಾಮ ಶೆಟ್ಟಿ, ಕಾರ್ಯದರ್ಶಿ ವೆಂಕಟೇಶ ವೈದ್ಯ, ಬೆಳ್ಳಿಹಬ್ಬ ಸಮಿತಿಯ ಉಪಾಧ್ಯಕ್ಷ ಗಣಪತಿ ಶ್ರೀಯಾನ್, ಪ್ರಧಾನ ಕಾರ್ಯದರ್ಶಿ ಹೆರಿಯ ಮಾಸ್ಟರ್ ಉಪಸ್ಥಿತರಿದ್ದರು.

ನಂತರ ಲಂಬೋದರ ಹೆಗಡೆ, ರಾಘವೇಂದ್ರ ಹೆಗಡೆ, ಸುದೀಪ ಉರಾಳ, ದಿನೇಶ್ ಕನ್ನಾರ್, ಸ್ಪೂರ್ತಿ ಭಟ್, ಸತೀಶ್ ಹಾಲಾಡಿ, ರಾಜೇಶ್ ಬೈಕಾಡಿ, ರಾಘವೇಂದ್ರ ತುಂಗ, ಪ್ರಶಾಂತ್ ಆಚಾರ್, ರಾಜು ಪೂಜಾರಿ ಇನ್ನೀತರರನ್ನು ಒಳಗೊಂಡ “ಕೃಷ್ಣಲೀಲೆ” ಯಕ್ಷಗಾನ ಪ್ರದರ್ಶನಗೊಂಡಿತು.

ಕೋಟ ಸುದರ್ಶನ ಉರಾಳ
ಮೊ: 9448547237

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments