Sunday, January 19, 2025
Homeಸುದ್ದಿಗಂಡನ ಬೆಟ್ಟಿಂಗ್ ನಿಂದ ಸಾಲ - ಸಾಲಗಾರರ ಕಿರುಕುಳ ತಾಳಲಾರದೆ ಯುವ ಪತ್ನಿ ಆತ್ಮಹತ್ಯೆ

ಗಂಡನ ಬೆಟ್ಟಿಂಗ್ ನಿಂದ ಸಾಲ – ಸಾಲಗಾರರ ಕಿರುಕುಳ ತಾಳಲಾರದೆ ಯುವ ಪತ್ನಿ ಆತ್ಮಹತ್ಯೆ

ಗಂಡ ಸರಕಾರಿ ನೌಕರ. ಸರಕಾರಿ ಇಂಜಿನಿಯರ್ ಒಬ್ಬ ಐಪಿಎಲ್‌ ಬೆಟ್ಟಿಂಗ್ ದಂಧೆಯಿಂದ ಸಿಕ್ಕಾಪಟ್ಟೆ ಸಾಲ ಮಾಡಿಕೊಂಡ. ಸಾಲಗಾರರು ಸುಮ್ಮನೆ ಬಿಡತ್ತಾರೆಯೇ? ಸಾಲಗಾರರ ಕಿರುಕುಳ ತಾಳಲಾರದೇ ಇಂಜಿನ್‌ನ ಗಂಡನ ನವವಿವಾಹಿತೆ ಯುವ ಪತ್ನಿ ನೇಣು ಹಾಕಿಕೊಂಡು ಸಾವನ್ನಪ್ಪಿದ್ದಾಳೆ.

ಸಾಲಗಾರರ ಕಿರುಕುಳ ತಾಳಲಾರದೆ ಯುವ ಗೃಹಿಣಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಎಂಬಲ್ಲಿ ನಡೆದಿದೆ.

ಸಹಾಯಕ ಇಂಜಿನಿಯರ್ ದರ್ಶನ್ ಸಾಲ ಮಾಡಿ ಬೆಟ್ಟಿಂಗ್ ಆಡಿದ್ದಾರೆ ಎಂದು ತಿಳಿದುಬಂದಿದೆ. ಸರ್ಕಾರಿನೌಕರನಾದರೂ ದರ್ಶನ್‌ ಖಾಲಿ ಚೆಕ್‌ ನೀಡಿ ಬೆಟ್ಟಿಂಗ್ ದಂಧೆ ನಡೆಸುವವರಿಂದ ದುಬಾರಿ ಬಡ್ಡಿದರಕ್ಕೆ ಸಾಲವನ್ನು ಪಡೆದು ಎಲ್ಲವನ್ನೂ ಸೋತಿದ್ದಾರೆ. ದರ್ಶನ್ ಕೆಲಸಕ್ಕೆ ಹೋದಾಗ ಸಾಲ ಕೊಟ್ಟವರು ಮನೆಯ ಸಮೀಪ ಕುಳಿತು ಅವನ ಪತ್ನಿ ರಂಜಿತಾಗೆ ಕಿರುಕುಳ ನೀಡಿದ್ದಾರೆ ಎಂದು ಹೇಳಲಾಗುತ್ತದೆ.

ಮನೆಯಲ್ಲಿ ಒಬ್ಬಳೇ ಸಣ್ಣ ಪ್ರಾಯದ ಯುವತಿ ಹೆಂಡತಿ ಮನೆಯಲ್ಲಿದ್ದರೂ, ಸಾಲಗಾರರನ್ನು ಎದುರಿಸುವ ಧೈರ್ಯ, ಪರಿಸ್ಥಿತಿ ದರ್ಶನ್‌ಗೆ ಇರಲಿಲ್ಲ.

ಗಂಡನ‌ ಈ ರೀತಿಯ ವ್ಯವಹಾರಕ್ಕೆ ಹಾಗೂ ವರ್ತನೆಗೆ ಜಿಗುಪ್ಸೆ ಹೊಂದಿದ ರಂಜಿತಾ ಮನನೊಂದು ನೇಣಿಗೆ ಶರಣಾಗಿದ್ದಾಳೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಗೃಹಿಣಿ ರಂಜಿತಾ ತಂದೆ ವೆಂಕಟೇಶ್ ಅವರು ಬೆಟ್ಟಿಂಗ್ ದಂಧೆಕೋರರ ಈ ಅಮಾನವೀಯ ವರ್ತನೆಯ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಹೊಳಲ್ಕೆರೆ ಠಾಣೆಗೆ ದೂರು ನೀಡಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments