37 ವರ್ಷದ ಉಜ್ಬೆಕಿಸ್ತಾನದ ಯುವತಿ ಬೆಂಗಳೂರಿನ ತಮ್ಮ ಹೋಟೆಲ್ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಆಕೆಯನ್ನು ಕೊಚ್ಚಿ ಕೊಲೆ ಮಾಡಿರುವ ಶಂಕೆ ವ್ಯಕ್ತಪಡಿಸಿದ ಪೊಲೀಸರು ನಿಗೂಢ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಉಜ್ಬೇಕಿಸ್ತಾನ್ ಮೂಲದ 37 ವರ್ಷದ ಮಹಿಳೆಯೊಬ್ಬರು ಬೆಂಗಳೂರಿನ ತಮ್ಮ ಹೋಟೆಲ್ ಕೋಣೆಯಲ್ಲಿ ಬುಧವಾರ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಜರೀನ್ ಎಂಬ ಮಹಿಳೆ ಮಾರ್ಚ್ 5 ರಂದು ಬೆಂಗಳೂರಿಗೆ ಬಂದಿದ್ದರು, ಅವರು ನಗರದ ಶೇಷಾದ್ರಿಪುರಂನಲ್ಲಿರುವ ಹೋಟೆಲ್‌ನಲ್ಲಿ ತಂಗಿದ್ದರು.
ಸಂಜೆ 4:30ಕ್ಕೆ ಹೋಟೆಲ್ ಸಿಬ್ಬಂದಿ ಬಾಗಿಲು ಬಡಿದರೂ ಯಾವುದೇ ಪ್ರತಿಕ್ರಿಯೆ ಬರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ನಂತರ ಸಿಬ್ಬಂದಿ ಮಾಸ್ಟರ್ ಕೀ ಬಳಸಿ ಬಾಗಿಲು ತೆರೆದಾಗ ಜರೀನ್ ಮೃತಪಟ್ಟಿರುವುದು ಕಂಡುಬಂದಿದೆ.
ಆಕೆಯನ್ನು ಥಳಿಸಿರುವ ಶಂಕೆ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ ಎಂದು ತಿಳಿಸಿದ ಬೆಂಗಳೂರು ಕೇಂದ್ರದ ಡಿಸಿಪಿ ಶೇಖರ್ ಎಚ್.ಟಿ. ಸಂತ್ರಸ್ತೆಯ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಬೌರಿಂಗ್ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಹೇಳಿದರು.
“ಹೋಟೆಲ್‌ನ ಕೊಠಡಿಯಲ್ಲಿ ಜರೀನ್ ಶವವಾಗಿ ಪತ್ತೆಯಾಗಿದ್ದಾಳೆ. ಆಕೆ ಬಹುಶಃ ಉಸಿರುಗಟ್ಟಿಸಲ್ಪಟ್ಟಿದ್ದಾಳೆ.” ಎಂದು ಡಿಸಿಪಿ ಹೇಳಿದರು.
ಫೋರೆನ್ಸಿಕ್ ತಂಡ, ಪೊಲೀಸರು ಮತ್ತು ಶ್ವಾನ ದಳ ತನಿಖೆಗಾಗಿ ಜರೀನ್ ಅವರ ಕೋಣೆಗೆ ಆಗಮಿಸಿದೆ.