

ಮಾರ್ಚ್ 16, 2024 ರಿಂದ ಮಾರ್ಚ್ 20, 2024ರ ವರೆಗೆ ಒಟ್ಟಾರೆ ಐದು ದಿನಗಳ ಕಾಲ ನಡೆಯುವ “ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ – 14” ರ ಮೊದಲ ದಿನ, ಶನಿವಾರ ಸಂಜೆ 4.30 ಕ್ಕೆ ಪ್ರಸ್ತುತ ಆವೃತ್ತಿಯ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಸನ್ಮಾನ್ಯ ಶ್ರೀ ಮಂಕಾಳು. ಎಸ್. ವೈದ್ಯ, ಮಾನ್ಯ ಸಚಿವರು ಮೀನುಗಾರಿಕೆ ಹಾಗೂ ಬಂದರು ಇಲಾಖೆ, ಮತ್ತು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು ಕರ್ನಾಟಕ ಸರಕಾರ, ಬೆಂಗಳೂರು ಇವರು ಉತ್ಸವದ ಉದ್ಘಾಟನೆ ನೆರವೇರಿಸಲಿದ್ದಾರೆ.
ಚಲನಚಿತ್ರ ಹಾಗೂ ರಂಗಭೂಮಿ ಹಿರಿಯ ಕಲಾವಿದರಾದ ನಮ್ಮ ನಿಮ್ಮೆಲ್ಲರ ಸನ್ಮಾನ್ಯ ಶ್ರೀ ಶತಾವಧಾನಿ ಡಾ. ಆರ್. ಗಣೇಶ, ಬೆಂಗಳೂರು. ಅವರಿಗೆ “ಕೆರೆಮನೆ ಶಿವರಾಮ ಹೆಗಡೆ ರಾಷ್ಟ್ರೀಯ ಪ್ರಶಸ್ತಿ-2022″ ಪ್ರದಾನ ಮಾಡಲಾಗುತ್ತಿದ್ದು ಸನ್ಮಾನ್ಯ ಶ್ರೀ ದಿವಾಕರ ಹೆಗಡೆ ಕೆರೆಹೊಂಡ, ರ‍್ಥದಾರಿ. ಕಲಾಚಿಂತಕರು. ಇವರು ಅಭಿನಂದನೆ ಸಲ್ಲಿಸಲಿದ್ದಾರೆ. ಸನ್ಮಾನ್ಯ ಶ್ರೀ ಬಸವರಾಜ ಹೊರಟ್ಟಿ, ಮಾನ್ಯ ಸಭಾಧ್ಯಕ್ಷರು ರ‍್ನಾಟಕ ವಿಧಾನ ಪರಿಷತ್ತು, ರ‍್ನಾಟಕ ಸರಕಾರ, ಬೆಂಗಳೂರು ಇವರು ಉತ್ಸವದ ಅಧ್ಯಕ್ಷತೆ ವಹಿಸಲಿದ್ದು ಶ್ರೀ ಲಕ್ಷ್ಮೀನಾರಾಯಣ ಕಾಶಿ, ಶಿವಮೊಗ್ಗ, ಕರ‍್ಯಾಧ್ಯಕ್ಷರು, ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಮ್ಮೋತ್ಸವ ಸಮಿತಿ ಇವರು ಉತ್ಸವಕ್ಕೆ ಸ್ವಾಗತ ಕೋರಲಿದ್ದಾರೆ ಮತ್ತು ಶ್ರೀ ನಾರಾಯಣ ಯಾಜಿ ಸಾಲೇಬೈಲು, ಖ್ಯಾತ ಅಂಕಣಕಾರರು ಹಾಗೂ ಕಲಾಚಿಂತಕರು ಇವರು ಆಶಯ ನುಡಿ ತಿಳಿಸಲಿದ್ದಾರೆ.
ನಾಡೋಜ ಡಾ. ಮಹೇಶ ಜೋಶಿ, ಮಾನ್ಯ ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು. ಡಾ. ಜಯರಾಜನ್, ಅಧ್ಯಕ್ಷರು ಫೋಕ್ ಲ್ಯಾಂಡ್. ಕೇರಳ. ಶ್ರೀ ಉಪೇಂದ್ರ ಪೈ, ಸಿರಸಿ, ಯಕ್ಷಗಾನ ಕಲಾ ಪೋಷಕರು, ಉದ್ಯಮಿಗಳು. ಡಾ. ಸಂಜಯ. ಎಚ್.ಆರ್. ಬರಹಗಾರರು, ಹಿರಿಯ ಸರ್ಜನ್, ರಾಜಶೇಖರ ಆಸ್ಪತ್ರೆ ಮೈಸೂರು. ಇವರುಗಳು ಮುಖ್ಯ ಅಭ್ಯಾಗತರುಗಳಾಗಿ ನಮ್ಮ ಜೊತೆಯಿರಲಿದ್ದಾರೆ.

ಉದ್ಘಾಟನಾ ದಿನದಂದು ಸಂಜೆ 6.30 ರಿಂದ ಸಾಂಸ್ಕೃತಿಕ ಕರ‍್ಯಕ್ರಮ ನಡೆಯಲಿದ್ದು ಶ್ರೀಮತಿ ಸುಕನ್ಯಾ ರಾಂ ಗೋಪಾಲ ತಂಡ ಇವರಿಂದ ‘’ಸ್ತ್ರೀ ತಾಳ ಘಟ ತರಂಗ” ನಡೆಯಲಿದೆ.
ಫೋಕ್ ಲ್ಯಾಂಡ್ ಕೇರಳ ಇವರು ಪ್ರಸ್ತುತ ಪಡಿಸಲಿರುವ ಕೇರಳ ನಟನಂ ಮತ್ತು ಮೋಹಿನಿ ಆಟ್ಟಂ ನೃತ್ಯಗಳು ನಾಟ್ಯೋತ್ಸವದ ಕಳೆಗಟ್ಟಲಿದೆ.
ಶ್ರೀ ಲಿಂಗಯ್ಯ ಮತ್ತು ತಂಡ, ಬೆಂಗಳೂರು ಇವರ ಬೀಸು ಕಂಸಾಳೆ ಪ್ರಸ್ತುತಿ ಮೊದಲ ದಿನದ ಪ್ರೇಕ್ಷಕರ ಮನಸೂರೆಗೊಳ್ಳಲಿದೆ.

ನಾಟ್ಯೋತ್ಸವದ ಎರಡನೇ ದಿನವಾದ 17.03.2024 ರವಿವಾರದಂದು ಸಂಜೆ 4.30 ರಿಂದ ಕಾರ್ಯಕ್ರಮ ಪ್ರಾರಂಭವಾಗಲಿದ್ದು ಶ್ರೀ ಎಂ. ಎಲ್. ಸಾಮಗ ಮಲ್ಪೆ, ಹಿರಿಯ ಯಕ್ಷಗಾನ ಕಲಾವಿದರು, ಚಿಂತಕರು ಹಾಗೂ ಬರಹಗಾರರು ಇವರಿಗೆ “ಕೆರೆಮನೆ ಗಜಾನನ ಹೆಗಡೆ ಪ್ರಶಸ್ತಿ – 2022″ ಪ್ರದಾನ ಮಾಡಲಿದ್ದು ಶ್ರೀ ನಾರಾಯಣ ಹೆಗಡೆ, ಹಿಂಡ್ನನೆ. ಉಪನ್ಯಾಸಕರು, ಉಡುಪಿ ಇವರು ಅಭಿನಂದನೆ ಸಲ್ಲಿಸಲಿದ್ದಾರೆ. ಡಾ. ಎಂ. ಪ್ರಭಾಕರ ಜೋಶಿ, ಕಲಾವಿದರು, ವಿಮರ್ಶಕರು, ಮಂಗಳೂರು ಇವರು ಉತ್ಸವದ ಅಧ್ಯಕ್ಷತೆ ವಹಿಸಲಿದ್ದಾರೆ.

ದ್ವಿತೀಯ ದಿನದಂದು ಡಾ. ಧರಣಿದೇವಿ, ಮಾನ್ಯ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು. ಶ್ರೀ ಕೃಷ್ಣಮೂರ್ತಿ ಮಂಜರು, ಮಾರಣಕಟ್ಟೆ, ಉದ್ಯಮಿಗಳು, ಕಲಾಪೋಷಕರು, ಹೈದರಾಬಾದ್. ಶ್ರೀ ವೆಂಕಟರಮಣ ಹೆಗಡೆ, ಕವಲಕ್ಕಿ, ಉದ್ಯಮಿಗಳು ಹಾಗೂ ಕಲಾಪೋಷಕರು. ಡಾ. ನಾರಾಯಣ ಹೆಗಡೆ, ಮೈಸೂರು, ಹಿರಿಯ ಸರ್ಜನ್, ಅಪೋಲೋ ಆಸ್ಪತ್ರೆ ಮೈಸೂರು.
ಶ್ರೀ ಗಣಪಯ್ಯ ಗೌಡರು, ಮುಗಳಿ, ಅಧ್ಯಕ್ಷರು ವ್ಯ.ಸೇ.ಸ.ಸಂ. ಕೆಳಗಿನೂರು ಇವರುಗಳು ಮುಖ್ಯ ಅಭ್ಯಾಗತರುಗಳಾಗಿ ಭಾಗವಹಿಸಲಿದ್ದಾರೆ.
ಸಂಜೆ 06.30 ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು ಅನುಪಮಾ ಹೊಸಕೆರೆ, ಬೆಂಗಳೂರು ನಿರ್ದೇಶನದ ಗೊಂಬೆಯಾಟ “ಅಷ್ಟಾವಕ್ರ” ಧಾತು ಗೊಂಬೆಯಾಟ ತಂಡ, ಬೆಂಗಳೂರು, ಇವರಿಂದ.
ಡಾ. ಮುಖ್ಯಮಂತ್ರಿ ಚಂದ್ರು ಅವರು ಪ್ರಧಾನ ಪಾತ್ರದಲ್ಲಿ ನಟಿಸುವ, ಶ್ರೀ ಟಿ.ಎಸ್ ಲೋಹಿತಾಶ್ವರಿಂದ ಕನ್ನಡ ರೂಪಾಂತರಗೊಂಡ, ಡಾ. ಬಿ. ವಿ ರಾಜಾರಾಂ, ಬೆಂಗಳೂರು ಇವರ ನಿರ್ದೇಶನದ ನಾಟಕ – ಮುಖ್ಯಮಂತ್ರಿ’ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಲಿದೆ.
ಉತ್ಸವದ ಮೂರನೇ ದಿನದ ಅಂಗವಾಗಿ 18.03.2024 ಸೋಮವಾರದಂದು ಬೆಳಗ್ಗೆ 11 ರಿಂದ ಮಂತ್ರಮುಗ್ದಗೊಳಿಸಲಿರುವ – ಎಚ್. ಕೆ. ರಾಮಚಂದ್ರ ಅವರಿಂದ ನಾಟಕ ರೂಪವಾದ, ಸಾಲಿಯಾನ್ ಉಮೇಶ ನಾರಾಯಣ್ ನಿರ್ದೇಶಿಸಿದ ಶಾಲಾ ಮಕ್ಕಳಿಗಾಗಿ ಪ್ರಚುರ ಪಡಿಸಲಿರುವ ನಾಟಕ’ ಅನ್ಯಾಳ ಡೈರಿ’ ಕಿನ್ನರ ಮೇಳ ತುಮರಿ ಇವರಿಂದ.
ಡಾ. ನಿರಂಜನ ವಾನಳ್ಳಿ, ಮಾನ್ಯ ಉಪಕುಲಪತಿಗಳು, ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಇವರು ಮೂರನೇ ದಿನದ ಉತ್ಸವದ ಅಧ್ಯಕ್ಷತೆ ವಹಿಸಲಿದ್ದು
ಸನ್ಮಾನ್ಯ ಡಾ. ಕೆ.ಎಂ.ರಾಮಚಂದ್ರಪ್ಪ, ಸಹಾಯಕ ನರ‍್ದೇಶಕರು (ಕನ್ನಡ ಮತ್ತು ಸಂಸ್ಕೃತಿ ಶ್ರೀ ಎಚ್.ಎನ್.ಸುರೇಶ, ಮಾನ್ಯ ಅಧ್ಯಕ್ಷರು, ಭಾರತೀಯ ವಿದ್ಯಾಭವನ ಬೆಂಗಳೂರು. ಶ್ರೀ ರಾಜು ಅಡಕಳ್ಳಿ, ಬೆಂಗಳೂರು, ಅಂಕಣಕಾರರು, ಕಲಾ ಚಿಂತಕರು ಇವರುಗಳು ಉತ್ಸವದ ಮೂರನೇ ದಿನದ ಮುಖ್ಯ ಅಭ್ಯಾಗತರುಗಳಾಗಿರಲಿದ್ದಾರೆ.
ಸಾಂಸ್ಕೃತಿಕ ಕರ‍್ಯಕ್ರಮಗಳು ಸಂಜೆ 6.30 ರಿಂದ ನಡೆಯಲಿದ್ದು ಕಲಾಶ್ರೀ ಪಂ. ಮುದ್ದು ಮೋಹನ್, ಐ.ಎ.ಎಸ್(ನಿ.) ಇವರಿಂದ ಹಿಂದೂಸ್ಥಾನಿ ಶಾಸ್ತ್ರೀಯ ಗಾಯನ ನಡೆಯಲಿದ್ದು ಗಾಯನ ಕಿವಿಗಿಂಪುಗಯ್ಯಲಿದ್ದು: ಪ್ರೋ. ಗೋಪಾಲಕೃಷ್ಣ ಹೆಗಡೆ, ಕೆಲಭಾಗ ಮತ್ತು ಶ್ರೀ ಭರತ ಹೆಗಡೆ ಕ್ರಮವಾಗಿ ತಬಲಾದಲ್ಲಿ ಮತ್ತು ಹರ‍್ಮೋನಿಯಂನಲ್ಲಿ ಸಹಕಾರ ನೀಡಲಿದ್ದಾರೆ.
ಗುರು ಡಾ. ಲಲಿತಾ ಶ್ರೀನಿವಾಸನ್, ಬೆಂಗಳೂರು. ನಿರ್ದೇಶನದ ಮೈನವಿರೇಳಿಸುವ ಭರತನಾಟ್ಯ ಪ್ರದರ್ಶನ ನೂಪುರ ಸಂಸ್ಥೆ ಬೆಂಗಳೂರು ಇವರಿಂದ.
ಉತ್ಸವದ 4ನೇ ದಿನ 19.03.2024ರಂದು
ಶ್ರೀ ಆರ್.ಎಂ. ಹೆಗಡೆ, ಬಾಳೇಸರ. ಮಾನ್ಯ ಅಧ್ಯಕ್ಷರು, ಟಿ.ಎಂ.ಎಸ್.ಸಿದ್ದಾಪುರ. ವಿದ್ವಾನ್ ಗ. ನಾ. ಭಟ್ಟ, ಮೈಸೂರು, ಬರಹಗಾರರು, ವಿಮರ್ಶಕರು. ಶ್ರೀಮತಿ ಚಿತ್ರಾಕ್ಷಿ ಗೌಡ, ನಾಜಗಾರ. ಮಾನ್ಯ ಅಧ್ಯಕ್ಷರು, ಕೆಳಗಿನೂರು ಪಂಚಾಯತ. ಶ್ರೀ ನಾಗರಾಜ ಭಟ್ಟ ಬೇಂದ್ರೆ, ಉದ್ಯಮಿಗಳು. ಕಲಾ ಪೋಷಕರು ಇವರುಗಳು ಮುಖ್ಯ ಅಭ್ಯಾಗತರುಗಳಾಗಿರಲಿದ್ದು ಶ್ರೀ ಬಿ.ಎನ್.ವಾಸರೆ, ಮಾನ್ಯ ಅಧ್ಯಕ್ಷರು ಉತ್ತರ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತು.ಇವರು ಅಧ್ಯಕ್ಷತೆ ವಹಿಸಲಿದ್ದಾರೆ.
ಸಾಂಸ್ಕೃತಿಕ ಕಾರ್ಯಕ್ರಮ ಸಂಜೆ 6.30 ರಿಂದ ಜರುಗಲಿದ್ದು ಅಮೃತಾ ಸಿಂಗ್, ಹೈದ್ರಾಬಾದ್ ಇವರಿಂದ ಕುಚಿಪುಡಿ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಬಾರ್ತಿಕೆರೆ ರಾಘಣ್ಣ ಇವರ ತಂಡದಿಂದ ಸುಗಮ ಸಂಗೀತ ಮತ್ತು ಸೋನಾಲಿಕಾ ನೃತ್ಯ ತಂಡ, ಬೆಂಗಳೂರು ಇವರಿಂದ ಓಡಿಸ್ಸಿ ನೃತ್ಯ ಮನಗೆಲ್ಲಲಿದೆ.
ನಾಟ್ಯೋತ್ಸವದ ಸಮಾರೋಪ ಸಮಾರಂಭವು ದಿನಾಂಕ 20.03.2024 ಬುಧವಾರದಂದು ಸಂಜೆ 4.30 ರಿಂದ ಜರುಗಲಿದ್ದು ವಿದ್ವಾನ್ ಗ. ನಾ. ಭಟ್ಟ. ಮೈಸೂರು, ಬರಹಗಾರರು, ಸಂಸ್ಕೃತಿ ಚಿಂತಕರು. ಇವರು 14 ನೇ ನಾಟ್ಯೋತ್ಸವದ ಸಮಗ್ರ ಅವಲೋಕನ ಪ್ರಸ್ತುತಪಡಿಸಲಿದ್ದಾರೆ. ಶ್ರೀ ಜಿ. ಎಸ್. ಭಟ್ಟ ಮೈಸೂರು. ಖ್ಯಾತ ಸಾಹಿತಿಗಳು, ಕಲಾಪೋಷಕರು ಇವರು ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು ಶ್ರೀ ಸುನೀಲ್ ನಾಯ್ಕ, ಮಾಜಿ ಶಾಸಕರು ಭಟ್ಕಳ ಕ್ಷೇತ್ರ ಶ್ರೀ ಎನ್. ಎಸ್. ಹೆಗಡೆ, ಬಿಜೆಪಿ ಜಿಲ್ಲಾಧ್ಯಕ್ಷರು.ಉತ್ತರ ಕನ್ನಡ ಡಾ. ಶ್ರೀಧರ ಹೆಗಡೆ ಪ್ರಾಧ್ಯಾಪಕರು, ಫೀಲ್ಡ್ ಮರ‍್ಷಲ್ ಕರ‍್ಯಪ್ಪ ಕಾಲೇಜು, ಮಡಿಕೇರಿ ಮುಖ್ಯ ಅಭ್ಯಾಗತರುಗಳಾಗಿ ಭಾಗಿಯಾಗಲಿದ್ದಾರೆ.
ಮುಕ್ತಿಶ್ರೀ ಹೈದ್ರಾಬಾದ್ ಇವರಿಂದ ಕಥಕ್ ನೃತ್ಯ ಪ್ರದರ್ಶನ ನಡೆಯಲಿದ್ದು ಗಾಯಕರಾಗಿ ನಾಗೇಶ ಅಡಗಾಂವಕರ್, ಪಡಂತದಲ್ಲಿ ಆಯುಶಿ ದೀಕ್ಷಿತ, ತಬಲಾದಲ್ಲಿ ಆಶಯ ಕುಲಕರ್ಣಿ, ಹರ‍್ಮೋನಿಯಂನಲ್ಲಿ ಅಭಿಷೇಕ ಕುಲಕರ್ಣಿ ಪಕಾವಾಜ್ ನಲ್ಲಿ ಕೃಷ್ಣ ಸಾಲುಂಬೆ ಸಹಕಾರ ನೀಡಲಿದ್ದಾರೆ ಎಂದು ಇಂದು ನಡೆದ ಪತ್ರಿಕಾ ಗೋಷ್ಠಿಯಲ್ಲಿ ಶ್ರೀ ಇಡಗುಂಜಿ ಮಹಾಗಣಪತಿಯ ಯಕ್ಷಗಾನ ಮಂಡಳಿಯ ನಿರ್ದೇಶಕರಾದ ಶ್ರೀ ಶಿವಾನಂದ ಹೆಗಡೆ ತಿಳಿಸಿದರು.
14ನೆಯ ರಾಷ್ಟ್ರೀಯ ನಾಟ್ಯೋತ್ಸವನ್ನು ಸಂಭ್ರಮದಿಂದ ಸಂಘಟಿಸುತ್ತಿರುವ ಈ ಸಂದರ್ಭದಲ್ಲಿ ಕಲಾಭಿಮಾನಿಗಳು ಊರಿನ ನಾಗರೀಕರು, ಹಿತೈಷಿಗಳು ಸಹಕಾರದೊಂದಿಗೆ ಉಪಸ್ಥಿತರಿರಲು ವಿನಂತಿಸಿರುತ್ತಾರೆ. ಈ ಸಂದರ್ಭದಲ್ಲಿ ಶ್ರೀ ಶ್ರೀಧರ ಹೆಗಡೆ ಕೆರೆಮನೆ, ಶ್ರೀಮತಿ ಸುಹಾಸಿನಿ, ಶ್ರೀ ಕೆ. ಈ. ಹೆಗಡೆ ಹಣ್ಣುಹಿತ್ತಲು, ಶ್ರೀ ಎಮ್ . ಎಲ್ ಹೆಗಡೆ ಕೆರೆಮನೆ, ಶ್ರೀಮತಿ ರಾಜೇಶ್ವರಿ ಹೆಗಡೆ ಉಪಸ್ಥಿತರಿದ್ದರು.
ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ, ಕೆರೆಮನೆ (ರಿ.)
ಭಾರತೀಯ ರಂಗ ಪರಂಪರೆಯಲ್ಲಿ ಒಂದು ವಿಶಿಷ್ಟ ಕಲಾಪ್ರಕಾರವಾದ ಯಕ್ಷಗಾನಕ್ಕೆ ಸುಧೋರಣೆಯನ್ನು ನೀಡುವುದರಲ್ಲಿ ಮಂಡಳಿ ಅಗ್ರ ಪಂಕ್ತಿಯಲ್ಲಿದೆ. 1934ರಲ್ಲಿ ನಟಶ್ರೇಷ್ಠ ಕೆರೆಮನೆ ಶಿವರಾಮ ಹೆಗಡೆಯವರಿಂದ ಪ್ರಾರಂಭಿಸಲ್ಪಟ್ಟ ಈ ಮಂಡಳಿ, ಕೆರೆಮನೆ ಶಂಭು ಹೆಗಡೆ, ಮಹಾಬಲ ಹೆಗಡೆ, ಗಜಾನನ ಹೆಗಡೆಯವರಿಂದ ವಿಸ್ತಾರಗೊಂಡಿತು.
ಈಗ ಐದನೇ ತಲೆಮಾರಿನಲ್ಲಿ ಕೆರೆಮನೆ ಶಿವಾನಂದ ಹೆಗಡೆಯವರ ನಿರ್ದೇಶನದಲ್ಲಿ ಸಾಂಪ್ರದಾಯಿಕ ಶೈಲಿ, ಪೌರಾಣಿಕ ಚೌಕಟ್ಟುಗಳನ್ನು ಉಳಿಸಿಕೊಂಡು ಹೊಸ ಆವಿಷ್ಕಾರದೊಂದಿಗೆ ಮುನ್ನಡೆಯುತ್ತಿದೆ.ಅಲ್ಲದೆ ಶಿವಾನಂದ ಹೆಗಡೆಯವರ ಪುತ್ರ ಕೆರೆಮನೆ ಶ್ರೀಧರ ಹೆಗಡೆ ಕೂಡಾ ಕಲಾವಿದರಾಗಿ ಸಂಘಟಕರಾಗಿ ಮುಂದುವರಿದಿದ್ದಾರೆ. ಮಂಡಳಿಯ ವಿಸ್ತರಣಾ ಕಾರ್ಯವಾಗಿ ಅಮೃತ ಮಹೋತ್ಸವ ಆಚರಣೆ, ಶಂಭು ಹೆಗಡೆ ಸ್ಮಾರಕ ಬಯಲು ರಂಗಮಂದಿರ, ಕಲಾ ಸಾಧಕರಿಗೆ ‘ಕೆರೆಮನೆ ಶಿವರಾಮ ಹೆಗಡೆ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮತ್ತು ಕೆರೆಮನೆ ಗಜಾನನ ಹೆಗಡೆ ಪ್ರಶಸ್ತಿ ಪ್ರದಾನ, ಯಕ್ಷಗಾನ ಶಿಲ್ಪ ನಿರ‍್ಮಾಣ, ಕೆರೆಮನೆ ಶಂಭು ಹೆಗಡೆ * ರಾಷ್ಟ್ರೀಯ ನಾಟೋತ್ಸವ, ಯಕ್ಷಗಾನ ಭಾಗವತಿಕೆ ಅಧ್ಯಯನ ಹಾಗೂ ಸಂಶೋಧನಾ ಕಾರ್ಯಾಗಾರ, ಶಾಲಾ ಮಕ್ಕಳಿಗೆ ಆಟವೇ ಪಾಠ ಯೋಜನೆ, ಶ್ರೀಮಯ ಯಕ್ಷಗಾನ ರಂಗಶಿಕ್ಷಣ ಕೇಂದ್ರದ ಮೂಲಕ ‘ಯಕ್ಷಗಾನ ಗುರುಕುಲ ತರಬೇತಿ, ಮುಂತಾದವನ್ನು ನಡೆಸಿಕೊಂಡು ಬರುತ್ತಿದೆ.
ಈ ಸಂಸ್ಥೆ ಹಲವು ಪ್ರಥಮಗಳನ್ನು ಯಕ್ಷಗಾನದಲ್ಲಿ ದಾಖಲಿಸಿದೆ. ಸುಸಂಸ್ಕೃತ ಪ್ರೇಕ್ಷಕರನ್ನು ತನ್ನೆಡೆಗೆ ಸೆಳೆದಿದೆ. ಪ್ರತಿ ತಿಂಗಳು ಯಕ್ಷಾಂಗಣದಲ್ಲಿ ಒಂದು ಯಕ್ಷಗಾನ ಪ್ರದರ್ಶನ ನೀಡುವ ” ‘ಮಾಸದ ಆಟ’, ಹಿರಿಯ ಕಲಾ ಸಾಧಕರ ನೆನಪಿಸುವ’ ‘ಅಪರ‍್ವಪರ‍್ವಸ್ಮರಣೆ’ ಮುಂತಾದ ಯೋಜನೆ ನಿರಂತರ ನಡೆಸಿಕೊಂಡು ಬರುತ್ತಿದೆ. 2024-25 ನೇ ಸಾಲಿನಲ್ಲಿ ಸಂಸ್ಥೆ 90ನೇ ವರ್ಷಾಚರಣೆಗೆ ಸಿದ್ಧವಾಗಿದೆ.