ಮನೆಯೊಂದರಲ್ಲಿ ಒಂದೇ ಕುಟುಂಬದ ಐವರು ಶವವಾಗಿ ಪತ್ತೆಯಾಗಿದ್ದಾರೆ. ಕೊಟ್ಟಾಯಂನ ಪಾಲಾದ ಪೂವರಾಣಿ ಎಂಬಲ್ಲಿ ಇಂದು ಬೆಳಗ್ಗೆ ಈ ಘಟನೆ ನಡೆದಿದೆ.
ಮೃತರು ಅಕಲೆಕ್ಕುನ್ನಂ ನಂಜಂದುಪಾರ ಮೂಲದ ಜೈಸನ್ ಥಾಮಸ್, ಅವರ ಪತ್ನಿ ಮರೀನಾ (28) ಮತ್ತು ಮಕ್ಕಳಾದ ಜೆರಾಲ್ಡ್ (4), ಜೆರಿನಾ (2) ಮತ್ತು ಜೆರಿಲ್ (ಏಳು ತಿಂಗಳು).
ಜೈಸನ್ ತನ್ನ ಹೆಂಡತಿ ಮತ್ತು ಮಕ್ಕಳನ್ನು ಕೊಂದ ನಂತರ ನೇಣು ಬಿಗಿದುಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಮನೆಯೊಳಗೆ ರಕ್ತದ ಮಡುವಿನಲ್ಲಿ ಬಿದ್ದಿದ್ದ ಪತ್ನಿ ಮತ್ತು ಮಕ್ಕಳು ಪತ್ತೆಯಾಗಿದ್ದಾರೆ.
ಸಮೀಪದಲ್ಲೇ ನೇಣು ಬಿಗಿದ ಸ್ಥಿತಿಯಲ್ಲಿ ಜೈಸನ್ ಶವ ಪತ್ತೆಯಾಗಿದೆ. ಜೈಸನ್ ರಬ್ಬರ್ ತೋಟದಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ.
ಒಂದು ವರ್ಷದ ಹಿಂದೆ ಕುಟುಂಬ ಪೂವರಣಿಗೆ ತೆರಳಿತ್ತು. ಹೀಗಾಗಿ ಸ್ಥಳೀಯರಿಗೆ ಈ ಕುಟುಂಬದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ.
ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.