ದೇರಳಕಟ್ಟೆಯ ಖಾಸಗಿ ವಿಶ್ವವಿದ್ಯಾನಿಲಯದ ಪಿಎಚ್‌ಡಿ ವಿದ್ಯಾರ್ಥಿನಿ ಚೈತ್ರಾ ವಿದೇಶಕ್ಕೆ ಹೋಗಿದ್ದಾರೆ ಎಂದು ಪೋಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ. ಪೊಲೀಸರ ತನಿಖೆಯಲ್ಲಿ ಇಂಥದ್ದೊಂದು ವಿಷಯ ಬೆಳಕಿಗೆ ಬಂದಿದೆ ಎಂಬ ಮಾಹಿತಿ ಲಭ್ಯವಾಗಿದೆ. ಚೈತ್ರಾ ನಾಪತ್ತೆಯಾಗಿ 14 ದಿನಗಳಾಗಿದ್ದು, ತನಿಖೆ ನಡೆಸಿದ ಪೊಲೀಸರಿಗೆ ಈ ಪ್ರಕರಣ ತಲೆನೋವಾಗಿ ಪರಿಣಮಿಸಿದೆ ಎನ್ನಲಾಗಿದೆ.
ದೇರಳಕಟ್ಟೆಯ ಖಾಸಗಿ ಯುನಿರ್ವಸಿಟಿಯಲ್ಲಿ ಪಿಹೆಚ್‌ಡಿ ಮಾಡುತ್ತಿದ್ದ ಪುತ್ತೂರಿನ ಸಮೀಪದ ಮುಕ್ವೆಯ ಚೈತ್ರಾ ಹೆಬ್ಬಾರ್ ಕಾಣೆಯಾಗಿದ್ದಾಳೆ ಎಂದು ಬಗ್ಗೆ ಫೆ. 17 ರಂದು ಉಳ್ಳಾಲ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು.
ಪುತ್ತೂರಿನ ಅನ್ಯ ಕೋಮಿನ ಯುವಕನೊಬ್ಬ ಚೈತ್ರಾ ತಂಗಿದ್ದ ಪಿಜಿಗೆ ಭೇಟಿ ನೀಡುತ್ತಿದ್ದ ಎಂಬ ಬಗ್ಗೆ ಮಾಡೂರಿನ ಬಜರಂಗದಳದ ಮುಖಂಡರು ಮಾಹಿತಿ ಕಲೆಹಾಕಿದ್ದರು. ಇದರ ಹಿಂದೆ ಡ್ರಗ್ ಮಾಫೀಯಾ ಜಾಲ ಇರುವುದರ ಬಗ್ಗೆಯೂ ಅನುಮಾನ ವ್ಯಕ್ತಪಡಿಸಿದ್ದ ಬಜರಂಗದಳದ ಮುಖಂಡರು ಈ ಬಗ್ಗೆ ಎಚ್ಚರ ವಹಿಸುವಂತೆ ಚೈತ್ರಾ ದೊಡ್ಡಪ್ಪನಿಗೆ ಸೂಚನೆ ನೀಡಿದರು.
ಚೈತ್ರಾ ಬೆಂಗಳೂರಿನಿಂದ ಹಿಮಾಚಲ ಪ್ರದೇಶದ ಮನಾಲಿಗೆ ಹೋಗಿ ಅಲ್ಲಿಂದ ದೆಹಲಿಗೆ ಹೋಗಿ ದೆಹಲಿಯಿಂದ ವಿದೇಶಕ್ಕೆ ಹೋಗಿದ್ದಾಳೆ ಎಂಬ ಮಾಹಿತಿ ವಿಚಾರಣೆ ನಡೆಸಿದ ಪೊಲೀಸರಿಗೆ ಸಿಕ್ಕಿದೆ ಎನ್ನಲಾಗಿದೆ.
ನಾಪತ್ತೆಯಾಗಿದ್ದ ಬಂಟ್ವಾಳ ನೇರಳೆಕಟ್ಟ ನಿವಾಸಿ ಚೈತ್ರಾ ಪ್ರಸ್ತುತ ಪುತ್ತೂರಿನಲ್ಲಿ ನೆಲೆಸಿರುವ ಯುವಕನೊಂದಿಗೆ ತೆರಳಿರುವ ಶಂಕೆ ವ್ಯಕ್ತವಾಗಿತ್ತು. ಚೈತ್ರಾ ನಾಪತ್ತೆಯಾಗಿರುವ ಬಗ್ಗೆ ಚೈತ್ರಾ ದೊಡ್ಡಪ್ಪ ಉಳ್ಳಾಲ ಪೊಲೀಸರಿಗೆ ದೂರು ನೀಡಿದ್ದರು.
ಈ ಕುರಿತು ತನಿಖೆ ನಡೆಸಿದ ಪೊಲೀಸರಿಗೆ ಸುರತ್ಕಲ್ ನಲ್ಲಿ ಚೈತ್ರಾ ಅವರ ಸ್ಕೂಟರ್ ಪತ್ತೆಯಾಗಿದ್ದು, ಅಲ್ಲಿನ ಎಟಿಎಂನಿಂದ ಹಣ ಡ್ರಾ ಮಾಡಿರುವುದು ಕೂಡ ಬೆಳಕಿಗೆ ಬಂದಿದೆ.
ಚೈತ್ರಾ ಪುತ್ತೂರಿನ ಶಾರೂಕ್ ಶೇಖ್ ಎಂಬಾತನ ಜೊತೆ ಹೋಗಿರುವ ಸಂಶಯ ವ್ಯಕ್ತವಾಗಿತ್ತು. ಶಾರೂಕ್ ಶೇಖ್ ಈ ಹಿಂದೆ ವಿದೇಶದಲ್ಲಿ ಕೆಲಸ ಮಾಡಿದ್ದು ಕತಾರ್ ಜೈಲಿನಲ್ಲಿ ಒಂದು ವರ್ಷ ಶಿಕ್ಷೆಗೆ ಒಳಗಾಗಿದ್ದ ಎಂದು ತಿಳಿದುಬಂದಿದೆ.. ಚೈತ್ರಾ ಹೆಬ್ಬಾರ್‌ಗೆ ಗಾಂಜಾದ ಅಮಲು ತಲೆಗೆ ಹತ್ತಿಸಿದ್ದ ಶಾರೂಕ್ ಶೇಖ್ ಆಕೆಯನ್ನು ಬುಟ್ಟಿಗೆ ಹಾಕಿಕೊಂಡಿರಬಹುದು ಎಂದು ಹೇಳಲಾಗುತ್ತಿದೆ.
ಚೈತ್ರಾ ನಾಪತ್ತೆ ಹಿಂದೆ ಇದ್ದ ಎನ್ನಲಾದ ಯುವಕನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ಚೈತ್ರಾ ಜೊತೆಗಿದ್ದಕ್ಕೆ ಯಾವುದೇ ಸಾಕ್ಷ್ಯಾಧಾರ ಸಿಗದ ಕಾರಣ ಆತನನ್ನು ಬಿಟ್ಟು ಕಳುಹಿಸಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಅಂತೂ ನಿಗೂಢವಾಗಿ ನಾಪತ್ತೆಯಾದ ಅಥವಾ ಡ್ರಗ್ ಮಾಫಿಯಾ ಜಾಲಕ್ಕೆ ಸಿಲುಕಿ ಬ್ಲಾಕ್ ಮೇಲ್ ಮತ್ತು ಅಪಹೃತಳಾಗಿರುವ ಸಾಧ್ಯತೆ ಇರುವ ಚೈತ್ರಾ ಹೆಬ್ಬಾರ್ ನಾಪತ್ತೆ ಪ್ರಕರಣ ಮತ್ತಷ್ಟು ನಿಗೂಢತೆಗಳನ್ನೇ ಸೃಷ್ಟಿಸುತ್ತಿದೆ.
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions