ಸ್ಪೇನ್ ನ ಯುವತಿ ಬೈಕ್ ಮೂಲಕ ಭಾರತ ಪ್ರವಾಸದಲ್ಲಿದ್ದು, ಪತಿಯೊಂದಿಗೆ ಜಾರ್ಖಂಡ್‌ನ ದುಮ್ಕಾ ಮೂಲಕ ಹಾದು ಹೋಗುತ್ತಿದ್ದರು. ಆಕೆಯ ಮೇಲೆ ಏಳು ಮಂದಿ ಸಾಮೂಹಿಕ ಅತ್ಯಾಚಾರ ನಡೆಸಿದ್ದು, ಈ ಪೈಕಿ ಮೂವರನ್ನು ಬಂಧಿಸಲಾಗಿದ್ದು, ಉಳಿದ ನಾಲ್ವರನ್ನು ಗುರುತಿಸುವ ಪ್ರಯತ್ನ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶುಕ್ರವಾರ ತಡರಾತ್ರಿ ಜಾರ್ಖಂಡ್‌ನ ದುಮ್ಕಾದಲ್ಲಿ ಸ್ಪೇನ್ ಮಹಿಳೆಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂದು ತಿಳಿದುಬಂದಿದೆ.
ಮಹಿಳೆ ಮತ್ತು ಆಕೆಯ ಪತಿ ಬೈಕರ್‌ಗಳಾಗಿದ್ದು, ಪಶ್ಚಿಮ ಬಂಗಾಳದಿಂದ ಬಂದು ನೇಪಾಳದ ಕಡೆಗೆ ಜಾರ್ಖಂಡ್‌ನ ಪ್ರದೇಶದ ಮೂಲಕ ಹಾದು ಹೋಗುತ್ತಿದ್ದರು ಎಂದು ದುಮ್ಕಾ ಪೊಲೀಸ್ ವರಿಷ್ಠಾಧಿಕಾರಿ ಪಿತಾಂಬರ್ ಸಿಂಗ್ ಖೈರ್ವಾರ್ ತಿಳಿಸಿದ್ದಾರೆ. ಖೈರ್ವಾರ್ ಶುಕ್ರವಾರ ರಾತ್ರಿ ಅಪರಾಧ ಸ್ಥಳಕ್ಕೆ ತೆರಳಿದ್ದು, ಅಲ್ಲಿಂದ ಅಲ್ಲಿಯೇ ಮೊಕ್ಕಾಂ ಹೂಡಿದ್ದಾರೆ.
ಸಂಜೆಯ ವೇಳೆಯಲ್ಲಿ, ದಂಪತಿಗಳು ವಿಶ್ರಾಂತಿ ಪಡೆಯಲು ನಿಲ್ಲಿಸಿದರು ಮತ್ತು ದುಮ್ಕಾದ ಕುಂಜಿ ಗ್ರಾಮದಲ್ಲಿ ತಾತ್ಕಾಲಿಕ ಟೆಂಟ್ ಹಾಕಿದರು. ಆಗ ಏಳು ಮಂದಿ ಅವರ ಟೆಂಟ್ ಗೆ ನುಗ್ಗಿ ಯುವತಿಯ ಮೇಲೆ ಸರದಿ ಅತ್ಯಾಚಾರ ನಡೆಸಿದರು.
ಸ್ಪ್ಯಾನಿಷ್ ಮಹಿಳೆ ಪ್ರಸ್ತುತ ಸರೈಯಾಹತ್ ಸಮುದಾಯ ಆರೋಗ್ಯ ಕೇಂದ್ರದ (CHC) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನಂತರ ರಾತ್ರಿ ಗಸ್ತು ತಿರುಗುತ್ತಿದ್ದ ಪೊಲೀಸರಿಗೆ ಮಹಿಳೆ ಹಾಗೂ ಆಕೆಯ ಪತಿ ಇಬ್ಬರೂ ಮುಖ್ಯರಸ್ತೆಯಲ್ಲಿ ಅಸ್ವಸ್ಥತೆಯಿಂದ ಬಿದ್ದಿರುವುದು ಕಂಡುಬಂದಿದೆ.
ಮಹಿಳೆಯ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ ಎಂದು ಖೈರ್ವಾರ್ ಹೇಳಿದ್ದಾರೆ. ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲಾಗಿದ್ದು, ವಿಧಿವಿಜ್ಞಾನ ತಜ್ಞರನ್ನೂ ನಿಯೋಜಿಸಲಾಗಿದೆ.