ಫೆಬ್ರವರಿ 13, ಮಂಗಳವಾರದಂದು ಕ್ಯಾಲಿಫೋರ್ನಿಯಾದ ಸ್ಯಾನ್ ಮಾಟಿಯೊ ನಗರದಲ್ಲಿ ಕೇರಳದ ಒಂದೇ ಕುಟುಂಬದ ನಾಲ್ವರ ಸದಸ್ಯರು ಅವರ ಮನೆಯೊಳಗೆ ಶವವಾಗಿ ಪತ್ತೆಯಾಗಿದ್ದಾರೆ.
ತನಿಖೆ ನಡೆಸುತ್ತಿರುವ ಪೊಲೀಸರು ಇದು ಕೊಲೆ ಮತ್ತು ಆತ್ಮಹತ್ಯೆ ಎಂದು ತಿಳಿಸಿದ್ದಾರೆ.
ವರದಿಯ ಪ್ರಕಾರ, ಮೃತರನ್ನು ಆನಂದ್ ಸುಜಿತ್ ಹೆನ್ರಿ (42), ಅವರ ಪತ್ನಿ ಆಲಿಸ್ ಪ್ರಿಯಾಂಕಾ ಬೆಂಜಿಗರ್ (40) ಮತ್ತು ಅವರ 4 ವರ್ಷದ ಅವಳಿ ಗಂಡು ಮಕ್ಕಳು ಎಂದು ಗುರುತಿಸಲಾಗಿದೆ.
ಮನೆಯೊಳಗಿನಿಂದ ಯಾವುದೇ ಪ್ರತಿಕ್ರಿಯೆ, ಚಲನವಲನಗಳು ಬಾರದ ಹಿನ್ನೆಲೆಯಲ್ಲಿ, ಪರಿಶೀಲನೆಗಾಗಿ ಸೋಮವಾರ ಬೆಳಿಗ್ಗೆ ಅಲಮೇಡಾ ಡೆ ಲಾಸ್ ಪುಲ್ಗಾಸ್‌ನ 4100 ಬ್ಲಾಕ್‌ನಲ್ಲಿರುವ ಕುಟುಂಬದ ಮನೆಗೆ ಪೊಲೀಸ್ ಅಧಿಕಾರಿಗಳನ್ನು ಕಳುಹಿಸಲಾಯಿತು.
ಆಗಮನದ ನಂತರ, ಅಧಿಕಾರಿಗಳು ಮನೆಯ ಒಳ ಪ್ರವೇಶಿಸಲು ಅನ್ಲಾಕ್ ಮಾಡಿದ ಕಿಟಕಿಯನ್ನು ಪತ್ತೆಹಚ್ಚಿದರು. ಒಳಗೆ, ಅವರು ಬಾತ್ರೂಮ್ನಲ್ಲಿ ಇಬ್ಬರು ವಯಸ್ಕರ ದೇಹಗಳನ್ನು ಕಂಡರು, ಇಬ್ಬರಿಗೂ ಗುಂಡಿನ ಗಾಯಗಳಾಗಿತ್ತು. ಘಟನಾ ಸ್ಥಳದಲ್ಲಿ 9 ಎಂಎಂ ಪಿಸ್ತೂಲ್ ಮತ್ತು ಲೋಡೆಡ್ ಮ್ಯಾಗಜೀನ್ ಕೂಡ ಪತ್ತೆಯಾಗಿದೆ.
ಐಟಿ ವೃತ್ತಿಪರರಾದ ಆನಂದ್ ಮತ್ತು ಆಲಿಸ್ ಕಳೆದ ಒಂಬತ್ತು ವರ್ಷಗಳಿಂದ ಯುನೈಟೆಡ್ ಸ್ಟೇಟ್ಸ್‌ನಲ್ಲಿ ವಾಸಿಸುತ್ತಿದ್ದರು. ಆನಂದ್ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರೆ, ಆಲಿಸ್ ಹಿರಿಯ ವಿಶ್ಲೇಷಕ ಹುದ್ದೆಯಲ್ಲಿದ್ದರು.
ಅವಳಿ ಮಕ್ಕಳು ಮಲಗುವ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಮತ್ತು ಅವರ ಸಾವಿಗೆ ನಿಖರವಾದ ಕಾರಣ ಇನ್ನೂ ತನಿಖೆಯಲ್ಲಿದೆ, ಅವರು ದೈಹಿಕ ಬಾಹ್ಯ ಗಾಯಗಳ ಯಾವುದೇ ಲಕ್ಷಣಗಳನ್ನು ತೋರಿಸದ ಕಾರಣ ಅವರನ್ನು ಉಸಿರುಗಟ್ಟಿಸಿರಬಹುದು, ಕತ್ತು ಹಿಸುಕಿರಬಹುದು ಅಥವಾ ವಿಷ ಕೊಟ್ಟಿರಬಹುದು ಎಂದು ಪೊಲೀಸರು ತಿಳಿಸಿದರು.
2016ರ ಡಿಸೆಂಬರ್‌ನಲ್ಲಿ ಆನಂದ್ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು ಎಂದು ನ್ಯಾಯಾಲಯದ ದಾಖಲೆಗಳು ಸೂಚಿಸುತ್ತವೆ, ಆದರೆ ಪ್ರಕ್ರಿಯೆಗಳು ಅಂತಿಮಗೊಂಡಿರಲಿಲ್ಲ. ಈ ಹಿಂದೆ ಮೊಬೈಲ್ ಗಳಿಗೆ ಬಂದ ಕರೆಗಳನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ಆದರೂ ಆ ಘಟನೆಗಳ ವಿವರಗಳನ್ನು ಬಹಿರಂಗಪಡಿಸಲಾಗಿಲ್ಲ.
ಯಾವುದೇ ಸೂಸೈಡ್ ನೋಟ್ ಪತ್ತೆಯಾಗಿಲ್ಲ, ಮತ್ತು ತನಿಖಾಧಿಕಾರಿಗಳು ಇನ್ನೂ ಸಾವಿಗೆ ಕಾರಣವನ್ನು ತನಿಖೆ ನಡೆಸುತ್ತಿದ್ದಾರೆ.
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions