ಬಂಟ್ವಾಳ ತಾಲೂಕಿನ ಶಂಭೂರಿನ ಬೊಂಡಾಲ ಎಂಬಲ್ಲಿ ಶ್ರೀ ದುರ್ಗಾಪರಮೇಶ್ವರಿ ಬಯಲಾಟ ಸೇವಾ ಸಮಿತಿಯ ಸುವರ್ಣ ಸಂಭ್ರಮದ ಕಾರ್ಯಕ್ರಮವು ದಿನಾಂಕ 14, 15, 16 ಫೆಬ್ರವರಿ 2024 ರಂದು ನಡೆಯಲಿದೆ.
ಆ ಪ್ರಯುಕ್ತ ಮೂರೂ ದಿನಗಳಲ್ಲಿ ಯಕ್ಷಗಾನ ಬಯಲಾಟ ಪ್ರದರ್ಶನ ನಡೆಯಲಿದೆ.
ಮೊದಲನೆಯ ದಿನ ಅಂದರೆ ದಿನಾಂಕ 14-02-2024ರಂದು ಬೊಂಡಾಲದ ದುರ್ಗಾಪರಮೇಶ್ವರಿ ಬಯಲಾಟ ಸೇವಾ ಸಮಿತಿಯ ಸುವರ್ಣ ಸಂಭ್ರಮದ ಪ್ರಯುಕ್ತ ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯವರಿಂದ ಶ್ರೀ ಕಟೀಲು ಕ್ಷೇತ್ರ ಮಹಾತ್ಮೆ ಎಂಬ ಪ್ರಸಂಗದ ಪ್ರದರ್ಶನ ನೆರವೇರಲಿದೆ.
ಸಭಾ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಕಟೀಲಿನ ಆನುವಂಶಿಕ ಅರ್ಚಕರಾದ ವೇದಮೂರ್ತಿ ಶ್ರೀ ಲಕ್ಷ್ಮೀನಾರಾಯಣ ಆಸ್ರಣ್ಣರು ಆಶೀರ್ವಚನ ನೀಡಲಿರುವರು. ಆದಿನ ವಿವಿಧ ಮಹನೀಯರಿಗೆ ಗೌರವಾರ್ಪಣೆ ನಡೆಯಲಿದೆ.
ಎರಡನೇ ದಿನದಲ್ಲಿ ಅಂದರೆ ದಿನಾಂಕ. 15-02-2024ರಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯವರಿಂದ ಶ್ರೀ ದೇವಿ ಲಲಿತೋಪಾಖ್ಯಾನ ಎಂಬ ಪ್ರಸಂಗದ ಪ್ರದರ್ಶನ ನೆರವೇರಲಿದೆ.
ಶ್ರೀ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ ಮತ್ತು ಶ್ರೀ ಪಳ್ಳಿ ಕಿಶನ್ ಹೆಗ್ಡೆಯವರಿಗೆ ಸುವರ್ಣ ಸಂಭ್ರಮದ ಗೌರವಾರ್ಪಣೆ ಸಲ್ಲಿಸಲಾಗುತ್ತದೆ. ಆ ಬಳಿಕ ಕಲಾವಿದ ಶ್ರೀ ಮೋಹನ್ ಕುಮಾರ್ ಅಮ್ಮುಂಜೆಯವರಿಗೆ ಪ್ರತಿಷ್ಠಿತ ಬೊಂಡಾಲ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ.
ಕೊನೆಯ ದಿನ ಅಂದರೆ ದಿನಾಂಕ 16.02.2024ರಂದು ಕಟೀಲು ಮೇಳದವರಿಂದ ಶ್ರೀ ದೇವಿ ಮಹಾತ್ಮೆ ಎಂಬ ಯಕ್ಷಗಾನ ಬಯಲಾಟ ಪ್ರದರ್ಶನ ನಡೆಯಲಿದೆ. ಕಾರ್ಯಕ್ರಮದ ಎಲ್ಲಾ ವಿವರಗಳಿಗೆ ಚಿತ್ರಗಳನ್ನು ನೋಡಿ.



