ಅಪ್ರಾಪ್ತ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸಂಗೀತಾ (17) ಆತ್ಮಹತ್ಯೆ ಮಾಡಿಕೊಂಡ ಅಪ್ರಾಪ್ತ ಬಾಲಕಿ. ಘಟನೆ ನಡೆದದ್ದು ರಾಯಚೂರು ಜಿಲ್ಲೆ ಮಾನ್ವಿ ಪಟ್ಟಣದಲ್ಲಿ.
ಸಂಗೀತಾಗೆ ಕಾರ್ ಡ್ರೈವರ್ ಕೃಷ್ಣ ಎನ್ನುವ ಪುರುಷನ ಜೊತೆಗೆ ಪ್ರೀತಿ ಬೆಳೆದಿತ್ತು. ಈ ಹಿಂದೆ ಎರಡು ಸಂದರ್ಭದಲ್ಲಿ ಕೃಷ್ಣನ ಜೊತೆಗೆ ಸಂಗೀತಾ ಮನೆಬಿಟ್ಟು ಓಡಿ ಹೋಗಿದ್ದಳು.
ಆಗ ಹೆತ್ತವರು ಮನಃ ಪರಿವರ್ತನೆ ಮಾಡಿ ಮನೆಗೆ ಕರೆತಂದಿದ್ದರು. ಆದರೆ ಇದೀಗ ದುಡುಕಿ ಮನೆಯಲ್ಲಿಯೇ ಸಂಗೀತಾ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಸೀರೆಯಿಂದ ನೇಣುಬಿಗಿದುಕೊಂಡು ಸಂಗೀತಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಡ್ರೈವರ್ ಕೃಷ್ಣನೊಂದಿಗೆ ಅಪ್ರಾಪ್ತ ವಯಸ್ಸಿನ ಆಕೆಗೆ ಇದ್ದ ಪ್ರೀತಿಗೆ ಪೋಷಕರು ವಿರೋಧ ಮಾಡುತ್ತಿದ್ದಾರೆ ಎಂದು ಅವಳು ತಪ್ಪಾಗಿ ತಿಳಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಯಚೂರಿನಲ್ಲಿ ನಡೆದಿದೆ.
ಸಂಗೀತಾ ಮೃತದೇಹವನ್ನು ಮಾನ್ವಿಯಲ್ಲಿರುವ ಆಸ್ಪತ್ರೆಗೆ ಸಾಗಿಸಲಾಗಿದೆ. ಅಪ್ರಾಪ್ತ ಹುಡುಗಿಯ ಅತ್ಯಾಚಾರ ಆರೋಪದ ಪ್ರಕರಣ ದಾಖಲಿಸಿದ ಆರೋಪಿ ಕೃಷ್ಣನನ್ನು ಪೊಲೀಸರು ಬಂಧಿಸಿದ್ದಾರೆ.