ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನವು ಯಕ್ಷಗಾನ-ಸಾಹಿತ್ಯ, ಪುಸ್ತಕ ಪ್ರಕಾಶ, ಸಾಂಸ್ಕೃತಿಕ ಭವನ, ಯಕ್ಷಗಾನ ಮ್ಯೂಸಿಯಂ, ಪುಸ್ತಕ ಭಂಡಾರ,
ಕೀರ್ತಿಶೇಷ ಕಲಾವಿದರ ಭಾವಚಿತ್ರ ಅನಾವರಣ, ಯಕ್ಷಗಾನದ ಹಲವು ದಾಖಲೀಕರಣ, ಶಿಬಿರ ಮುಂತಾಗಿ ಸಾಂಸ್ಕೃತಿಕ ವಲಯದಲ್ಲಿ ಮಹತ್ತರ ಸಾಧನೆ ಗೈದು ಸಂಸ್ಥೆಯಾಗಿದೆ.
ಕಲೆ- ಸಂಸ್ಕೃತಿಯ ಸಮಗ್ರ ಅದ್ಯಯನ, ಮುಂದಿನ ಪೀಳಿಗೆಗೆ ಪರಿಚಯಿಸಲು ಪ್ರಯತ್ನಿಸುವ ಗಡಿನಾಡು ಕಾಸರಗೋಡಿನ ಪ್ರತಿಷ್ಠಿತ ಸಂಸ್ಥೆಯಾದ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನಕ್ಕೆ
ಪಂಜದ ಸಹಸ್ರಾರು ಕಲಾಭಿಮಾನಿಗಳಿಂದ ಇಂದು ಪೆಬ್ರವರಿ 5ರಂದು ಪಂಜ ಶ್ರೀ ಪಂಚಲಿಂಗೇಶ್ವರ ದೇವರ ಸಾನಿಧ್ಯದಲ್ಲಿ ಶ್ರೀ ಧರ್ಮಸ್ಥಳ ಮೇಳದ ಬಯಲಾಟ ಸಂದರ್ಭದಲ್ಲಿ ಗೌರವಾರ್ಪಣೆ ಸಲ್ಲಿಸಲಾಗುತ್ತದೆ.