ನಾಳೆ ರವಿವಾರ ದಿನಾಂಕ 4-2-2024 ರಂದು ಆನಂದ ರಾವ್ ವೃತ್ತದ ಬಳಿಯಿರುವ ಕ.ವಿ.ಪ್ರ.ನಿ.ನಿ., ಲೆಕ್ಕಾಧಿಕಾರಿಗಳ ಸಂಘದಲ್ಲಿ
ಸನ್ಮಾನ-ತಾಳಮದ್ದಳೆ ಕಾರ್ಯಕ್ರಮ ನಡೆಯಲಿದೆ.
ಸಾಹಿತಿ, ವಿಮರ್ಶಕ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ
ಮುಖ್ಯ ಅತಿಥಿಗಳು: ಮೈಸೂರು ಆಕಾಶವಾಣಿಯ ಕಾರ್ಯಕ್ರಮ ನಿರ್ವಹಣಾಧಿಕಾರಿ ಶ್ರೀ ದಿವಾಕರ ಹೆಗಡೆ,ಕೆರೆಹೊಂಡ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ಮಹಿಳಾ ಯಕ್ಷಗಾನ- ತಾಳಮದ್ದಳೆ ಕ್ಷೇತ್ರದಲ್ಲಿ ತರಬೇತಿ ನೀಡಿ, ಹೊಸ ತಲೆಮಾರನ್ನೇ ಸೃಷ್ಟಿಸುತ್ತಿರುವ ಶ್ರೀಮತಿಯರಾದ ಡಾ.ವಿಜಯನಳಿನಿ ರಮೇಶ, ಶಿರಸಿ, ನಿರ್ಮಲಾ ಹೆಗಡೆ,ಗೋಳಿಕೊಪ್ಪ ಸುಮಾ ಹೆಗಡೆ, ಗಡಿಗೆಹೊಳೆ ಇವರಿಗೆ ಸನ್ಮಾನ ಕಾರ್ಯಕ್ರಮ ಜರಗಲಿದೆ.
ಸಾಹಿತಿ ಶ್ರೀಮತಿ ರಜನಿ ನರಹಳ್ಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ನಂತರ ತಾಳಮದ್ದಳೆ- ಸೀತಾಪರಿತ್ಯಾಗ ನಡೆಯಲಿದೆ.
ಹಿಮ್ಮೇಳದಲ್ಲಿ : ಕುಮಾರಿ ಚಿತ್ಕಲಾ ಕೆ ತುಂಗಾ.
ಕುಮಾರ್ ಚಿನ್ಮಯ ಹೆಗಡೆ ಅಂಬಾರಗೋಡ್ಲು ಮುಮ್ಮೇಳದಲ್ಲಿ : ಶ್ರೀಮತಿಯರಾದ ಡಾ. ವಿಜಯನಳಿನಿ ರಮೇಶ, ನಿರ್ಮಲಾ ಹೆಗಡೆ, ಗೋಳಿಕೊಪ್ಪ, ಸುಮಾ ಹೆಗಡೆ, ಗಡಿಗೆಹೊಳೆ, ಭವಾನಿ ಭಟ್ಟ ಶಿರಸಿ ಭಾಗವಹಿಸಲಿದ್ದಾರೆ. ಹೆಚ್ಚಿನ ವಿವರಗಳಿಗೆ ಚಿತ್ರ ನೋಡಿ.

ವರದಿ: ವಿಶ್ವೇಶ್ವರ ಗಾಯತ್ರಿ