23 ವರ್ಷದ ಅಫ್ಸಾನಾ ಅವರು ಜನವರಿ 30 ರ ರಾತ್ರಿಯಿಂದ ವಂಡ್ಸೆಯಲ್ಲಿರುವ ತನ್ನ ನಿವಾಸದಿಂದ ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ.
5 ಅಡಿ ನಾಲ್ಕು ಇಂಚು ಎತ್ತರ, ಉದ್ದನೆಯ ಮುಖ, ಗೋಧಿ ಮೈಬಣ್ಣ ಮತ್ತು ಸಾಧಾರಣ ಮೈಕಟ್ಟು ಹೊಂದಿರುವ ಅಫ್ಸಾನಾ ಕಣ್ಮರೆಯಾಗುವ ಸಮಯದಲ್ಲಿ ಕಪ್ಪು ಬುರ್ಖಾವನ್ನು ಧರಿಸಿದ್ದರು.
ಹಿಂದಿ ಮತ್ತು ಕನ್ನಡ ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡುತ್ತಾಳೆ.
ಅಫ್ಸಾನಾ ಜನವರಿ ಎಂದಿನಂತೆ ಜನವರಿ 30 ರಂದು ರಾತ್ರಿ 11 ಗಂಟೆಗೆ ಅವಳ ಕೋಣೆಯಲ್ಲಿ, ಮಲಗಿದ್ದರು. ಆದರೆ ಮರುದಿನ ಬೆಳಿಗ್ಗೆ ಅವಳು ಕಾಣಿಸಿರಲಿಲ್ಲ.
ಕೋಣೆಯಲ್ಲಿ ಒಂದು ಪತ್ರ ದೊರಕಿದ್ದು ಅದರಲ್ಲಿ ಅಫ್ಸಾನಾ ಅವರು ತನ್ನನ್ನು ಯಾರೂ ಹುಡುಕದಂತೆ ಮನವಿ ಮಾಡಿದ್ದರು.
ಈಕೆಯನ್ನು ಕಂಡವರು ಅಥವಾ ಗುರುತು ಹಿಡಿದವರು ಕೊಲ್ಲೂರು ಪೊಲೀಸ್ ಠಾಣೆಯನ್ನು ಸಂಪರ್ಕಿಸಲು ಕೋರಲಾಗಿದೆ.