ಕೇರಳದ ಅಲಪ್ಪುಳದಲ್ಲಿ ಬಿಜೆಪಿ ಮುಖಂಡ ರಂಜಿತ್ ಶ್ರೀನಿವಾಸನ್ ಹತ್ಯೆ ಪ್ರಕರಣದ ಆರೋಪಿಗಳಿಗೆ ಮಾವೇಲಿಕ್ಕರ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ಗಲ್ಲು ಶಿಕ್ಷೆ ವಿಧಿಸಿ ಐತಿಹಾಸಿಕ ತೀರ್ಪು ನೀಡಿದೆ.
ನ್ಯಾಯಾಲಯವು ಎಲ್ಲಾ 15 SDPI (ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ) – PFI (ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ) ಕಾರ್ಯಕರ್ತರಿಗೆ ದಂಡ ಮತ್ತು ಕಠಿಣ ಸೆರೆವಾಸವನ್ನು ಶಿಕ್ಷೆಯ ಭಾಗವಾಗಿ ವಿಧಿಸಿದೆ.
ಮಾವೇಲಿಕ್ಕರ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾದ ವಿ.ಜಿ.ಶ್ರೀದೇವಿ ಅವರು ಶಿಕ್ಷೆಯನ್ನು ಪ್ರಕಟಿಸಿದರು.
ತೀರ್ಪಿನಿಂದ ಮೃತರ ಕುಟುಂಬ ಸಂತಸ ವ್ಯಕ್ತಪಡಿಸಿದ್ದು, ತಮಗಾದ ನಷ್ಟವು ದೊಡ್ಡದಾದರೂ, ಆರೋಪಿಗಳಿಗೆ ಗರಿಷ್ಠ ಶಿಕ್ಷೆ ವಿಧಿಸಿದ್ದಕ್ಕಾಗಿ ನ್ಯಾಯಾಲಯಕ್ಕೆ ತಾವು ತುಂಬ ಋಣಿಯಾಗಿದ್ದೇವೆ ಎಂದು ರೆಂಜಿತ್ ಅವರ ಪತ್ನಿ ಹೇಳಿದ್ದಾರೆ.
“ಈ ಅಪರಾಧ ನಡೆದು 770 ದಿನಗಳು ಕಳೆದಿವೆ ಮತ್ತು ತೀರ್ಪನ್ನು ಕೇಳಿದ ನಂತರ, ನಮ್ಮ ಕಾಯುವಿಕೆ ಸಾರ್ಥಕವಾಗಿದೆ ಎಂದು ನಾವು ಭಾವಿಸುತ್ತೇವೆ. ನಮ್ಮೊಂದಿಗೆ ನಿಂತ ಪ್ರಾಸಿಕ್ಯೂಷನ್ ಮತ್ತು ಪೊಲೀಸರಿಗೆ ವಿಶೇಷ ಧನ್ಯವಾದಗಳು, ”ಎಂದು ರೆಂಜಿತ್ ಅವರ ಪತ್ನಿ ಹೇಳಿದರು.
ಬಿಜೆಪಿ ರಾಜ್ಯ ಸಮಿತಿ ಸದಸ್ಯ ಮತ್ತು ಒಬಿಸಿ ಮೋರ್ಚಾ ರಾಜ್ಯ ಕಾರ್ಯದರ್ಶಿಯಾಗಿದ್ದ ರಂಜಿತ್ ಅವರನ್ನು ಡಿಸೆಂಬರ್ 19, 2021 ರಂದು ಕೊಂದರು. ಶಸ್ತ್ರಸಜ್ಜಿತ ವ್ಯಕ್ತಿಗಳ ಗುಂಪೊಂದು ಅವರ ಮನೆಗೆ ನುಗ್ಗಿ ಅವರ ಪತ್ನಿ, ತಾಯಿ ಮತ್ತು ಕಿರಿಯ ಮಗಳ ಎದುರೇ ಅವರನ್ನು ಕೊಂದರು.
ನೈಝಮ್, ಅಜ್ಮಲ್, ಅನೂಪ್, ಮಹಮ್ಮದ್ ಅಸ್ಲಾಂ, ಸಲಾಂ ಪೊನ್ನಾಡ್, ಅಬ್ದುಲ್ ಕಲಾಂ, ಸಫರುದ್ದೀನ್, ಮುನ್ಶಾದ್, ಜಸೀಬ್ ರಾಜಾ, ನವಾಸ್, ಶೆಮೀರ್, ನಾಸೀರ್, ಜಾಕೀರ್ ಹುಸೇನ್, ಶಾಜಿ ಪೂವತುಂಗಲ್ ಮತ್ತು ಶಮ್ನಾಸ್ ಅಶ್ರಫ್ ಶಿಕ್ಷೆಗೊಳಗಾದವರು.