ಕಾಸರಗೋಡು: ಕಾಸರಗೋಡಿನಲ್ಲಿ 59 ವರ್ಷದ ವ್ಯಕ್ತಿಯೊಬ್ಬನನ್ನು ಲೈಗಿಂಕವಾಗಿ ಚಿತ್ರಗಳನ್ನು ತೆಗೆದು ಸುಲಿಗೆ ಮಾಡಿದ ಆರೋಪದ ಮೇಲೆ ಕೋಝಿಕ್ಕೋಡ್ ಮೂಲದ ದಂಪತಿ ಸೇರಿದಂತೆ ಏಳು ಮಂದಿಯನ್ನು ಮೇಲ್ಪರಂಬ ಪೊಲೀಸರು ಬಂಧಿಸಿದ್ದಾರೆ.
ಎಫ್‌ಐಆರ್ ಪ್ರಕಾರ, ಗ್ಯಾಂಗ್ ದೂರುದಾರರಿಂದ ತನ್ನ ನಗ್ನ ಛಾಯಾಚಿತ್ರಗಳನ್ನು ಕೋಝಿಕ್ಕೋಡ್ ಮಹಿಳೆಯೊಂದಿಗೆ ಅವರ ಕುಟುಂಬ ಮತ್ತು ನೆರೆಹೊರೆಯವರೊಂದಿಗೆ ಹಂಚಿಕೊಳ್ಳುವುದಾಗಿ ಬೆದರಿಸಿ 5 ಲಕ್ಷ ರೂ. ವಸೂಲಿ ಮಾಡಲಾಗಿದೆ.
“ಆದರೆ ಅವರು ಇನ್ನೂ 30 ಲಕ್ಷ ರೂ.ಗೆ ಬೇಡಿಕೆಯಿಟ್ಟಾಗ ನಾನು ಪೊಲೀಸರನ್ನು ಸಂಪರ್ಕಿಸಿದೆ” ಎಂದು ದೂರುದಾರ, ಈಗ ಕೃಷಿ ಮತ್ತು ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಗಲ್ಫ್ ಮಾಜಿ ಉದ್ಯೋಗಿ ತಿಳಿಸಿದರು. ಹೀಗೇ ಮುಂದುವರಿದಿದ್ದರೆ ನನ್ನ ಜೀವನವನ್ನೇ ಕೊನೆಗಾಣಿಸಬೇಕಾಗುತ್ತಿತ್ತು ಎಂದರು.
ಆರೋಪಿಗಳನ್ನು ಕೋಝಿಕ್ಕೋಡ್‌ನ ಕುಟ್ಟಿಕತ್ತೂರಿನ ರುಬೀನಾ ಎಂ ಪಿ (29), ಆಕೆಯ ಪತಿ ಕೋಝಿಕ್ಕೋಡ್‌ನ ಪೆರುಮಣ್ಣ ನಿವಾಸಿ ಫೈಸಲ್ ಪಿ (37), ಅಹಮದ್ ದಿಲ್ಶಾದ್ ಎಂ (40) ಮತ್ತು ಕಾಸರಗೋಡಿನ ಉದ್ಮ ಗ್ರಾಮ ಪಂಚಾಯಿತಿ ನಫೀಸತ್ ಮಿಸಿರಿಯ ಮಂಗಾಡ್ ಗ್ರಾಮದ ಅಬ್ದುಲ್ಲ ಕುಂಞಿ (32), ಕಾಸರಗೋಡಿನ ಮಧೂರು ಗ್ರಾಮ ಪಂಚಾಯತ್‌ನ ಶಿರಿಬಾಗಿಲು ನಿವಾಸಿ ಸಿದ್ದೀಕ್ ಎನ್ (48), ಕಾಞಂಗಾಡ್‌ನ ಪಡನಕ್ಕಾಡ್‌ನ ರಫೀಕ್ ಮುಹಮ್ಮದ್ (50) ಎಂದು ಮೇಲ್ಪರಂಬ ಪೊಲೀಸರು ಗುರುತಿಸಿದ್ದಾರೆ.
ಒತ್ತಡಕ್ಕೆ ಮಣಿದು ಜನವರಿ 26 ರಂದು ಆರೋಪಿಗಳಿಗೆ 10,000 ರೂ.ಗಳನ್ನು ಜಿಪೇ ಮೂಲಕ ವರ್ಗಾಯಿಸಿದ್ದೇನೆ ಎಂದು ದೂರುದಾರರು ಹೇಳಿದರು. ನಂತರ ಅವರಿಗೆ 4,90,000 ರೂ. ನಗದು ನೀಡಿದ್ದೇನೆ ಎಂದು ಅವರು ಹೇಳಿದ್ದಾರೆ.
ಆದರೆ ನಾಲ್ಕು ದಿನಗಳ ನಂತರ 30 ಲಕ್ಷ ರೂ. ಗಳಿಗೆ ಬೇಡಿಕೆ ಇಟ್ಟಾಗ “ನಾನು ಪೊಲೀಸರನ್ನು ಸಂಪರ್ಕಿಸಿದೆ. ಪೋಲೀಸರು ಅವರಿಗೆ 5 ಲಕ್ಷ ರೂಪಾಯಿ ನೀಡಬಾರದು ಎಂದು ಹೇಳಿದರು. ಆದರೆ ನನ್ನ ಗೌರವವನ್ನು ಕಾಪಾಡಲು ನಾನು ಅವರಿಗೆ ಪಾವತಿಸಬೇಕಾಯಿತು” ಎಂದು ಅವರು ಹೇಳಿದರು.