ಇತಿಹಾಸ ಪ್ರಸಿದ್ಧ ಕುಕ್ಕೆ ಸುಬ್ರಹ್ಮಣ್ಯದ ಕುಮಾರ ಪರ್ವತ ಚಾರಣಕ್ಕೆ ನಾಳೆಯಿಂದ (ಫೆಬ್ರವರಿ 1) ತಾತ್ಕಾಲಿಕ ನಿರ್ಬಂಧ ವಿಧಿಸಲಾಗಿದೆ ಎಂದು ತಿಳಿದುಬಂದಿದೆ.
ಇತ್ತೀಚೆಗೆ ಕೆಲವು ದಿನಗಳಲ್ಲಿ ದಿನವೊಂದಕ್ಕೆ ಸಾವಿರಕ್ಕೂ ಹೆಚ್ಚು ಮಂದಿ ಟ್ರೆಕ್ಕಿಂಗ್ ಹಾಗೂ ಪ್ರವಾಸಕ್ಕಾಗಿ ಕುಮಾರ ಪರ್ವತಕ್ಕೆ ಆಗಮಿಸಿದ್ದರು.
ಇದರಿಂದಾಗಿ ಆಸುಪಾಸಿನ ಪ್ರದೇಶದಲ್ಲಿ ತೀವ್ರವಾದ ಪರಿಸರ ಮಾಲಿನ್ಯ ಉಂಟಾಗುತ್ತಿರುವ ಬಗ್ಗೆ ಜನರಿಂದ ವ್ಯಾಪಕ ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಬಂಧ ವಿಧಿಸಲಾಗಿದೆ ಎಂದು ತಿಳಿದುಬಂದಿದೆ.
ಅದೂ ಅಲ್ಲದೆ ಚಾರಣದ ಉದ್ದೇಶದಿಂದಲೂ ಹೆಚ್ಚಾಗಿ ಮೋಜಿನ ಉದ್ದೇಶದೊಂದಿಗೆ ಬರುವ ಕೆಲವು ಪ್ರವಾಸಿಗರು ಇರುವುದರಿಂದಾಗಿ ಮತ್ತು ಅವರಿಗೆ ಪರಿಸರದ ಬಗ್ಗೆ ಕಾಳಜಿ ಇಲ್ಲವೇ ಇರುವುದು ಇಲ್ಲಿಯ ಜನರ ಕೆಂಗಣ್ಣಿಗೆ ಗುರಿಯಾಗಿದೆ. ಕೆಲವೊಂದು ಚಾರಣದ ತಂಡದಲ್ಲಿ ಹುಡುಗ ಹುಡುಗಿಯರ ಜೋಡಿಗಳು ಮಾತ್ರವೇ ಇರುತ್ತಿದ್ದು, ಇದು ಚಾರಣದ ಹಿಂದಿನ ಉದ್ದೇಶದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ನಿರ್ಬಂಧದ ಬಳಿಕ ಅಥವಾ ಮುಂದಿನ ಆದೇಶದ ಬಳಿಕ ಆರಂಭವಾಗುವ ಚಾರಣಕ್ಕೆ ಬರಬೇಕಾದರೆ ಟ್ರೆಕ್ಕಿಂಗ್ ಮಾಡುವವರು ಸಂಪೂರ್ಣ ಆನ್ಲೈನ್ ಬುಕ್ಕಿಂಗ್ ಮೂಲಕವೇ ಪ್ರವಾಸಕ್ಕೆ ವ್ಯವಸ್ಥೆ ಮಾಡಿಕೊಂಡು ಬರಬೇಕು. ಈ ರೀತಿಯ ವ್ಯವಸ್ಥೆ ರೂಪಿಸುವ ಬಗ್ಗೆ ಅರಣ್ಯ ಇಲಾಖೆ ಯೋಜನೆ ಮತ್ತು ಚಿಂತನೆ ನಡೆಸಿದೆ.
ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಅರಣ್ಯಾಧಿಕಾರಿಗಳು ಹೇಳಿದ್ದಾರೆ.
ಇಷ್ಟೊಂದು ಸಂಖ್ಯೆಯ ಚಾರಣಿಗರ ಆಗಮನದಿಂದ ಪ್ರವಾಸಿಗರ ನಿಯಂತ್ರಣ ಹಾಗೂ ಅರಣ್ಯ ಇಲಾಖೆ ಸಿಬಂದಿಗೆ ತಪಾಸಣೆ ಮಾಡಿ ಬಿಡುವುದು ಕಷ್ಟವಾಗುತ್ತದೆ ಎನ್ನುವುದು ಇನ್ನೊಂದು ಕಾರಣ ಎಂದು ಹೇಳಲಾಗುತ್ತದೆ.
ಈ ಕಾರಣದಿಂದಾಗಿ ಯಾತ್ರಾ ಪ್ರಸಿದ್ಧ ಕುಕ್ಕೆ ಸುಬ್ರಹ್ಮಣ್ಯದ ಕುಮಾರ ಪರ್ವತ ಚಾರಣವನ್ನು ಮುಂದಿನ ಅವಧಿಯಿಂದ ಮೊದಲ್ಗೊಂಡು ಆನ್ಲೈನ್ ಬುಕ್ಕಿಂಗ್ ಮಾಡಲಾಗುತ್ತಿದೆ ಎನ್ನಲಾಗಿದೆ.
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions