ಇಂದು ಸುಳ್ಯದಲ್ಲಿ ಸುನಾದ ಸಂಗೀತೋತ್ಸವ ಕಾರ್ಯಕ್ರಮ ನಡೆಯಲಿದೆ.
ಆ ಪ್ರಯುಕ್ತ ಇಂದು ದಿನಾಂಕ 28.01.2024 ಆದಿತ್ಯವಾರ ಸಂಜೆ ಘಂಟೆ 6ರಿಂದ ವಿದ್ವಾನ್ ಕೆ. ಎಸ್. ವಿಷ್ಣುದೇವ ನಂಬೂದಿರಿ ಅವರಿಂದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಜರಗಲಿರುವುದು.ಖ್ಯಾತ ಸಂಗೀತ ವಿದ್ವಾನ್ ಕಾಂಚನ ಎ. ಈಶ್ವರ ಭಟ್ ಅವರು ಮೃದಂಗ ಸಾಥ್ ನೀಡಲಿದ್ದಾರೆ.
ವಯೊಲಿನ್ ನಲ್ಲಿ ವಿದ್ವಾನ್ ಎಡಪ್ಪಳ್ಳಿ ಅಜಿತ್ ಹಾಗೂ ಮೋರ್ಸಿಂಗ್ ನಲ್ಲಿ ವಿದ್ವಾನ್ ಪಯ್ಯನ್ನೂರ್ ಗೋವಿಂದ ಪ್ರಸಾದ್ ಸಹಕರಿಸಲಿದ್ದಾರೆ.
ಸುನಾದ ಸಂಗೀತೋತ್ಸವ ಬೆಳಗ್ಗೆ 10 ಗಂಟೆಗೆ ದೀಪೋಜ್ವಲನದೊಂದಿಗೆ ಆರಂಭವಾಗಲಿದ್ದು ಅಮೇಲೆ ಗುರುವಂದನೆ ನಡೆಯಲಿದೆ.
ನಂತರ ಸುನಾದ ಕಲಾ ಶಾಲೆಯ ವಿದ್ಯಾರ್ಥಿಗಳಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನ ನಡೆಯಲಿದೆ. ಕಾರ್ಯಕ್ರಮದ ಎಲ್ಲಾ ವಿವರಗಳಿಗೆ ಚಿತ್ರ ಚಿತ್ರವನ್ನು ನೋಡಿ.
