Friday, November 22, 2024
Homeಸುದ್ದಿಯಕ್ಷಗಾನದ ಮೂಲ ಸತ್ವ ತಿಳಿದುಕೊಳ್ಳಲು ಯಕ್ಷದೇಗುಲಕ್ಕೆ ಆಗಮಿಸಿದ ಡಾ. ಮಾರ್ಷಲ್ ಗಂಜ್

ಯಕ್ಷಗಾನದ ಮೂಲ ಸತ್ವ ತಿಳಿದುಕೊಳ್ಳಲು ಯಕ್ಷದೇಗುಲಕ್ಕೆ ಆಗಮಿಸಿದ ಡಾ. ಮಾರ್ಷಲ್ ಗಂಜ್

ಆಮೇರಿಕದ ಹಾರ್ವರ್ಡ್ ವಿಶ್ವವಿದ್ಯಾನಿಲಯದಲ್ಲಿ ಕೆನಡಿ ಸ್ಕೂಲ್ ಗವರ್ನ್ಮೆಂಟ್‌ನಲ್ಲಿ ನಾಯಕತ್ವ, ಸಂಘಟನೆ ಮತ್ತು ನಾಗರಿಕ ಸಮಾಜದಲ್ಲಿ ರೀಟಾ ಈ ಹೌಸರ್ ಹಿರಿಯ ಉಪನ್ಯಾಸಕ, 16 ವರ್ಷಗಳ ಕಾಲ ಯುನೈಟೆಡ್ ಫಾರ್ಮ್ವರ್ಕಸ್‌ನಲ್ಲಿ ಕೆಲಸ ಮಾಡಿದ್ದು, ಸಮಾಜ ಶಾಸ್ತçದಲ್ಲಿ ಪಿ.ಎಚ್.ಡಿ. ಪಡೆದ ಮಾರ್ಷಲ್ ಗಂಜ್ ರವರು

23-01-2024ರಂದು ಕಳೆದ 45 ವರ್ಷದಿಂದ ಯಕ್ಷಗಾನ ಪ್ರದರ್ಶನ, ಕಮ್ಮಟ, ತರಬೇತಿ, ಕಾರ್ಯಗಾರ, ವಿಚಾರ ಸಂಕಿರಣ, ಪುಸ್ತಕ ಬಿಡುಗಡೆ ಹೀಗೆ ಗುಣಾತ್ಮಕ ಪ್ರದರ್ಶನ ನೀಡುತ್ತಾ ಬಂದಿರುವ ಕೆ. ಮೋಹನ್ ನಿರ್ದೇಶನದ ಬೆಂಗಳೂರಿನ ತ್ಯಾಗರಾಜ ನಗರದಲ್ಲಿರುವ ಯಕ್ಷದೇಗುಲಕ್ಕೆ ಯಕ್ಷಗಾನದ ಮೂಲ ಸತ್ವ ತಿಳಿದುಕೊಳ್ಳಲು ಡಾ. ಮಾರ್ಷಲ್ ಗಂಜ್ ತಂಡದವರು ಆಗಮಿಸಿದರು.

ಪ್ರಿಯಾಂಕ ಕೆ. ಮೋಹನ ನಿರ್ದೇಶನದಲ್ಲಿ ಸಂಪ್ರದಾಯ ಕೊಡಂಗಿ ನೃತ್ಯ, ಬಾಲಗೋಪಾಲ, ಪೀಠಿಕಾ ಸ್ತ್ರೀ ವೇಷ, ಕೃಷ್ಣನ ಒಡ್ಡೋಲಗ, ರಾಜವೇಷದ ಒಡ್ಡೋಲಗ, ಯುದ್ಧ ನೃತ್ಯ, ಅಭಿನಯ, ಮಾತುಗಾರಿಕೆ ಬಗ್ಗೆ ಎರಡು ಗಂಟೆಗಳ ಕಾಲ ಪ್ರಾತ್ಯಕ್ಷಿಕೆ ಮತ್ತು ಕಂಸವಧೆ ಪ್ರಸಂಗದ ಒಂದು ಭಾಗವನ್ನು ಪ್ರದರ್ಶಿಸಲಾಯಿತು.

ಕನ್ನಡದಲ್ಲಿ ಮಾಡಿದ ಈ ಪ್ರಾತ್ಯಕ್ಷಿಕೆಯ ಎಲ್ಲಾ ಭಾಗವನ್ನು ಆಂಗ್ಲ ಭಾಷಾ ಸಂವಹನದೊಂದಿಗೆ ಪ್ರದರ್ಶಿಸಲಾಯಿತು.


ಪ್ರದರ್ಶನದಲ್ಲಿ ಪ್ರಿಯಾಂಕ ಕೆ. ಮೋಹನ್, ಶ್ರೀ ರಾಮ, ವಿಶ್ವನಾಥ ಉರಾಳ, ಶ್ರೀ ವಿದ್ಯಾ, ಚೈತ್ರ, ಶ್ರೀವತ್ಸ, ತೇಜಸ್ ಇನ್ನೀತರರು ಭಾಗವಹಿಸಿದರು.

ಯಕ್ಷದೇಗುಲದ ನಿರ್ದೇಶಕರಾದ ಕೆ. ಮೋಹನರು ಯಕ್ಷದೇಗುಲದ 45 ವರ್ಷದ ಅನುಭವನ್ನು ಡಾ. ಮಾರ್ಷಲ್ ಗಂಜ್ ತಂಡದವರೊಂದಿಗೆ ಹಂಚಿಕೊಂಡರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments