ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಶ್ರೀ ಶಿವರಾಜ್ ತಂಗಡಗಿ ಅವರು ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಸಾಂಸ್ಕೃತಿಕ ಭವನಕ್ಕೆ 24ರಂದು ಭೇಟಿಯಿತ್ತರು.
ಕರ್ನಾಟಕ ಸರಕಾರದ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರದ 50 ಲಕ್ಷ ಅನುದಾನದೊಂದಿಗೆ ಸಾಂಸ್ಕೃತಿಕ ಭವನವು ಈಗಾಗಲೇ ಒಂದುವರೆ ಕೋಟಿ ರೂಪಾಯಿಗೂ ಹೆಚ್ಚಿನ ಕಾಮಗಾರಿಗಳು ನಡೆದಿರುತ್ತದೆ.
ಸಾಂಸ್ಕೃತಿಗೆ ಭವನದ ಲೈಬ್ರರಿ ,ಮ್ಯೂಸಿಯಂ ,ಮರೆಯಲಾಗದ ಮಹಾನುಭಾವರು ಫೋಟೋ ಅನಾವರಣ ಇತ್ಯಾದಿಗಳನ್ನು ನೋಡಿದ ಕನ್ನಡ ಮತ್ತು ಸಂಸ್ಕೃತಿ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.
ಗಡಿನಾಡು ಕಾಸರಗೋಡಿನ ಗ್ರಾಮೀಣ ಪ್ರದೇಶವಾದ ಸಿರಿಬಾಗಿಲಿನಲ್ಲಿ ಇಂತಹ ಯೋಜನೆ ಸಂಕಲ್ಪಿಸಿ ಯಶಸ್ವಿಗೊಳಿಸುತ್ತಿರುವ ಪ್ರತಿಷ್ಠಾನಕ್ಕೆ ಅಭಿನಂದನೆ ಸಲ್ಲಿಸಿದರು. ಮುಂದಿನ ಹಂತದಲ್ಲಿ ಕರ್ನಾಟಕ ಸರಕಾರವು ಸಹಕರಿಸುವ ಭರವಸೆ ಇತ್ತರು.

ಪ್ರತಿಷ್ಠಾನದ ಅಧ್ಯಕ್ಷ ರಾಮಕೃಷ್ಣ ಮಯ್ಯ, ಸುಮಿತ್ರಾ ಮಯ್ಯ ಹಾಗೂ ಖಜಾಂಜಿ ಲಕ್ಷ್ಮೀನಾರಾಯಣ ತಂತ್ರಿ, ಜಗದೀಶ ಕೂಡ್ಲು ,ಶಾಮ್ ಕುಂಚಿನಡ್ಕ ಶ್ರೀಮುಖ ಮಯ್ಯ ಪ್ರತಿಷ್ಠಾನದ ಸದಸ್ಯರು ಸಚಿವರನ್ನು ಇದೀರ್ಗೊಂಡರು.

ಸಚಿವರ ಜೊತೆ ಧಾರ್ಮಿಕ ರಾಜಕೀಯ ನೇತಾರ ಶ್ರೀ ಮಿಥುನ ರೈ ಹಾಗೂ ಕರ್ನಾಟಕದ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಶ್ರೀ ಪ್ರಕಾಶ್ ಮತ್ತಿಹಳ್ಳಿ, ಕಾಸರಗೋಡಿನ ವಿಶ್ರಾಂತ ಪ್ರೊಫೆಸರ್ ಶ್ರೀನಾಥ್ ಕಾಸರಗೋಡು ಮುಂತಾದ ಗಣ್ಯರು ಜೊತೆಕರಿಸಿದರು.