ಉತ್ತರ ಪ್ರದೇಶದ ಫತೇಪುರ್‌ನಲ್ಲಿ ಮಹಿಳೆಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಕೊಂದು ಶವವನ್ನು ನೀರಿನ ತೊಟ್ಟಿಗೆ ಎಸೆದಿದ್ದ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಸ್ತುತ ದುಬೈನಲ್ಲಿರುವ ಸಂತ್ರಸ್ತೆಯ ಪತಿ ಈ ಕೊಲೆಯನ್ಮು ಮಾಡಿಸಿದ್ದಾರೆ.
ಉತ್ತರ ಪ್ರದೇಶದ ಫತೇಪುರದಲ್ಲಿ ಮಹಿಳೆಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಕೊಂದ ಆರೋಪದ ಮೇಲೆ ಐವರನ್ನು ಬಂಧಿಸಲಾಗಿದೆ. ಐದು ಆರೋಪಿಗಳು ಮಹಿಳೆಯ ಮೈದುನಂದಿರಾಗಿದ್ದಾರೆ.
ಸಂತ್ರಸ್ತೆಯ ಕುಟುಂಬದವರ ದೂರಿನ ಮೇರೆಗೆ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇಡೀ ಪ್ರಕರಣವನ್ನು ಯೋಜಿಸಿದ ಮಹಿಳೆಯ ಪತಿ ಪ್ರಸ್ತುತ ದುಬೈನಲ್ಲಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಜನವರಿ 20 ರಂದು ನಿರ್ಮಾಣ ಹಂತದಲ್ಲಿರುವ ಕಟ್ಟಡದ ನೀರಿನ ತೊಟ್ಟಿಯೊಳಗೆ ಮಹಿಳೆಯ ಶವವನ್ನು ಬೆತ್ತಲೆ ಸ್ಥಿತಿಯಲ್ಲಿ ಸ್ಥಳೀಯರು ಕಂಡಾಗ ಘಟನೆ ಬೆಳಕಿಗೆ ಬಂದಿದೆ.
ಸ್ಥಳಕ್ಕಾಗಮಿಸಿದ ಪೊಲೀಸರು, ಮದ್ಯದ ಬಾಟಲಿಗಳು ಮತ್ತು ಕೆಲವು ತಿಂಡಿಗಳ ಪ್ಯಾಕೆಟ್ ಗಳು ಸಹ ಪತ್ತೆಯಾಗಿವೆ ಎಂದು ಹೇಳಿದರು.
ಬಂಧಿತ ನಾಲ್ವರು ಆರೋಪಿಗಳನ್ನು ರೋಹಿತ್ ಲೋಧಿ, ರಾಮಚಂದ್ರ ಅಲಿಯಾಸ್ ಪುಟ್ಟು, ಶಿವಂ ಅಲಿಯಾಸ್ ಪಂಚಮ್ ಮತ್ತು ಸೋನು ಲೋಧಿ ಎಂದು ಗುರುತಿಸಲಾಗಿದೆ. ಪ್ರಕರಣದ ಐದನೇ ಆರೋಪಿ ನಾಂಕು ಲೋಧಿ ಪರಾರಿಯಾಗಿದ್ದಾನೆ.
ವಿಚಾರಣೆ ನಡೆಸಿದಾಗ, ಆರೋಪಿಗಳು ತಮ್ಮ ಪೋಷಕರ ಮನೆಗೆ ಹೋಗಿದ್ದ ಮಹಿಳೆಯನ್ನು ಜಾತ್ರೆಗೆ ಕರೆದೊಯ್ಯುವ ನೆಪದಲ್ಲಿ ಅತ್ಯಾಚಾರವೆಸಗಿದ್ದಾರೆ ಎಂದು ಹೇಳಿದರು. ಬಳಿಕ ಆಕೆಯ ಗುರುತನ್ನು ಮರೆಮಾಚಲು ಆಕೆಯ ಮುಖವನ್ನು ಇಟ್ಟಿಗೆಗಳಿಂದ ಜಜ್ಜಿ ಹಾಕಿದ್ದಾರೆ ಎಂದು ಅವರು ಪೊಲೀಸರಿಗೆ ತಿಳಿಸಿದ್ದಾರೆ.
ಮಹಿಳೆಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಸಾಮೂಹಿಕ ಅತ್ಯಾಚಾರ ದೃಢಪಟ್ಟಿದೆ. ತಲೆಗೆ ಗಂಭೀರವಾದ ಗಾಯಗಳು ಮತ್ತು ಅತಿಯಾದ ರಕ್ತಸ್ರಾವದಿಂದ ಮಹಿಳೆ ಸಾವನ್ನಪ್ಪಿದ್ದಾಳೆ ಎಂದು ವರದಿ ದೃಢಪಡಿಸಿದೆ.
ಅವರ ಸಹೋದರ (ಮಹಿಳೆಯ ಪತಿ) ಅವರು ಅವರಿಗೆ ನಗದು ನೀಡಿ ಈ ಕೊಲೆ ಮಾಡಿಸಿದ್ದಾರೆ ಎಂದು ಆರೋಪಿಗಳು ಬಾಯಿ ಬಿಟ್ಟಿದ್ದಾರೆ, ಪತಿ ಮತ್ತು ಐದನೇ ಆರೋಪಿಯನ್ನು ಬಂಧಿಸುವ ಪ್ರಯತ್ನಗಳು ನಡೆಯುತ್ತಿವೆ.