ಜನವರಿ 22ರಂದು ನಡೆಯುವ ಅಯೋಧ್ಯೆಯ ಶ್ರೀರಾಮ ಮಂದಿರದ ಉದ್ಘಾಟನೆಗೆ ಭಗವಾನ್ ಶ್ರೀ ರಾಮಚಂದ್ರನ ಪ್ರತಿಷ್ಟಾಪನೆ ಮತ್ತು ಪ್ರಾಣಪ್ರತಿಷ್ಠಾ ಕಾರ್ಯಕ್ರಮಕ್ಕೆ ಕ್ಷಣಗಣನೆ ಶುರುವಾಗಿದೆ.
ಈ ಸಂದರ್ಭದಲ್ಲಿ ತಾನೇ ವಿಶೇಷವಾಗಿ ಹಾಡುವ ಮೂಲಕ ಶ್ರೀರಾಮನನ್ನು ನಟ ಜಗ್ಗೇಶ್ ಕೊಂಡಾಡಿದ್ದಾರೆ. ತಾನು ಹಾಡುತ್ತಿರುವ ವಿಡಿಯೋವನ್ನು ಜಗ್ಗೇಶ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
“ಹಾಡುವ ಮುಖಾಂತರ ರಾಮನ ಬರಮಾಡಿಕೊಳ್ಳೋಣ ಸ್ನೇಹಿತರೆ. ಶಾಸ್ತ್ರೀಯವಾಗಿ ಬಂದರು ಸರಿ. ಇಲ್ಲದಿದ್ದರು ಸರಿ ರಾಮನಿಗಾಗಿ ಸಂಕೋಚಬಿಟ್ಟು ಯತ್ನಿಸಿ ನಿಮ್ಮ ಜಾಲತಾಣದಲ್ಲಿ ಟ್ಯಾಗ್ ಮಾಡಿ ಎಂದು ಪ್ರಾರ್ಥನೆ” ಎಂದು ಜಗ್ಗೇಶ್ ಬರೆದಿದ್ದಾರೆ.
“ರಾಮನಿಗಾಗಿ ಸಣ್ಣಭಕ್ತಿಯ ಪ್ರಯತ್ನ ನಾನು ಹಾಡುಗಾರನಲ್ಲ ತಪ್ಪಿದ್ದರೆ ಕ್ಷಮಿಸಿ. ಜೈ ಶ್ರೀರಾಮ್” ಎಂದು ಜಗ್ಗೇಶ್ ಕೊನೆಯಲ್ಲಿ ಸೇರಿಸಿದ್ದಾರೆ.