Saturday, January 18, 2025
Homeಸುದ್ದಿನವವಿವಾಹಿತೆ ಪತ್ನಿಯನ್ನು ಸಮುದ್ರದಲ್ಲಿ ಮುಳುಗಿಸಿ, ಅಪಘಾತ ಎಂದು ಬಿಂಬಿಸಲು ಯತ್ನಿಸಿದ ಹೋಟೆಲ್ ಮ್ಯಾನೇಜರ್ ಬಂಧನ

ನವವಿವಾಹಿತೆ ಪತ್ನಿಯನ್ನು ಸಮುದ್ರದಲ್ಲಿ ಮುಳುಗಿಸಿ, ಅಪಘಾತ ಎಂದು ಬಿಂಬಿಸಲು ಯತ್ನಿಸಿದ ಹೋಟೆಲ್ ಮ್ಯಾನೇಜರ್ ಬಂಧನ

ಐಷಾರಾಮಿ ಹೋಟೆಲ್‌ನ 29 ವರ್ಷದ ಮ್ಯಾನೇಜರ್ ಅನ್ನು ಶನಿವಾರದಂದು ಗೋವಾದ ಕಾಬೋ ಡಿ ರಾಮಾ ಬೀಚ್‌ನಲ್ಲಿ ತನ್ನ ಹೆಂಡತಿಯನ್ನು ಮುಳುಗಿಸಿದ ಆರೋಪದ ಮೇಲೆ ಬಂಧಿಸಲಾಗಿದೆ.

ಗೌರವ್ ಕಟಿಯಾರ್ ಎಂದು ಗುರುತಿಸಲಾದ ಆರೋಪಿ, ತನ್ನ ಪತ್ನಿ ದೀಕ್ಷಾ ಗಂಗ್ವಾರ್ (27) ಅವರನ್ನು ಕೊಲೆ ಮಾಡಿದ ನಂತರ ಅಪಘಾತ ಎಂದು ಬಿಂಬಿಸಲು ಪ್ರಯತ್ನಿಸಿದರು, ಆದರೆ ವ್ಯಕ್ತಿಯೊಬ್ಬರು ಚಿತ್ರೀಕರಿಸಿದ ವೀಡಿಯೊ ಅದು ಕೊಲೆ ಎಂಬುದನ್ನು ಬಹಿರಂಗಪಡಿಸಿತು.


ಶುಕ್ರವಾರ ಮಧ್ಯಾಹ್ನ ಪೊಲೀಸರು ಗಂಗ್ವಾರ್ ಅವರ ಶವವನ್ನು ಜನಪ್ರಿಯ ಬೀಚ್ ಬಳಿ ಪತ್ತೆ ಮಾಡಿದ್ದಾರೆ
ಮೊದಲ ನೋಟದಲ್ಲಿ, ಕಟಿಯಾರ್ ಅವರು ಒಂದು ವರ್ಷದ ಹಿಂದೆ ವಿವಾಹವಾದ ಗಂಗ್ವಾರ್ ಅವರನ್ನು ತಮ್ಮ ವಿವಾಹೇತರ ಸಂಬಂಧಕ್ಕೆ ತೊಂದರೆಯಾಗುತ್ತದೆ ಎಂದು ಕೊಲೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸುತ್ತವೆ.

ಆಕೆಯನ್ನು ಕಡಲತೀರದ ಕಲ್ಲಿನ ಪ್ರದೇಶಕ್ಕೆ ಕರೆದೊಯ್ದು ಸಮುದ್ರದಲ್ಲಿ ಮುಳುಗಿಸಿದ್ದಾನೆ. “ಆಕೆಯ ದೇಹದಲ್ಲಿ ಗಾಯದ ಗುರುತುಗಳು ಕಂಡುಬಂದಿವೆ” ಎಂದು ತಿಳಿದುಬಂದಿದೆ.

ಕೊಲೆ ಮಾಡಿದ ನಂತರ, ಕಟಿಯಾರ್ ಬೊಬ್ಬೆ ಹೊಡೆದು ಜನರನ್ನು ಸಹಾಯಕ್ಕಾಗಿ ಕೂಗಿ ಕರೆದು ಘಟನೆಯನ್ನು ಆಕಸ್ಮಿಕ ಅಪಘಾತ ಎಂದು ಬಿಂಬಿಸಲು ಪ್ರಯತ್ನಿಸಿದರು ಎಂದು ಪೊಲೀಸರು ಹೇಳಿದರು.

ಅಧಿಕಾರಿಯ ಪ್ರಕಾರ, ಸ್ಥಳೀಯರೊಬ್ಬರು ಚಿತ್ರೀಕರಿಸಿದ ವೀಡಿಯೊ ಕಟಿಯಾರ್ ಅವರ ಕೊಲೆಯನ್ನು ಬಹಿರಂಗಪಡಿಸಿದೆ. ಆರೋಪಿ ಕಟಿಯಾರ್ ಮತ್ತು ಸಂತ್ರಸ್ತೆ ಗಂಗ್ವಾರ್ ಇಬ್ಬರೂ ಲಕ್ನೋ ಮೂಲದವರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments