ಅಂಬಲಪಾಡಿ ಯಕ್ಷಗಾನ ಮಂಡಳಿಯ ವಿವಿಧ ಪ್ರಶಸ್ತಿಗಳಿಗೆ ಆಯ್ಕೆ.



ಉಡುಪಿ : ಅಂಬಲಪಾಡಿ ಶ್ರೀ ಲಕ್ಷ್ಮೀ ಜನಾರ್ದನ ಯಕ್ಷಗಾನ ಕಲಾ ಮಂಡಳಿಯ 66ನೇ ವಾರ್ಷಿಕೋತ್ಸವವು ಫೆಬ್ರವರಿ 03, 2024 ಶನಿವಾರ ಸಂಜೆ 6.00 ಗಂಟೆಗೆ ಕಂಬ್ಳಕಟ್ಟದ ‘ಶ್ರೀ ಜನಾರ್ದನ ಮಂಟಪ’ದಲ್ಲಿ ಜರಗಲಿದೆ.
ಪ್ರತೀ ವರ್ಷದಂತೆ ಈ ಸಂದರ್ಭದಲ್ಲಿ ಮೂವರು ಸಾಧಕ ಕಲಾವಿದರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ಕಿದಿಯೂರು ಜನಾರ್ದನ ಆಚಾರ್ಯ ಸ್ಮರಣಾರ್ಥ ಪ್ರಶಸ್ತಿಯನ್ನು ಹಿರಿಯ ಚಂಡೆವಾದಕರಾದ ಶ್ರೀ ರಾಮಕೃಷ್ಣ ಮಂದಾರ್ತಿ, ಕಪ್ಪೆಟ್ಟು ಬಾಬು ಶೆಟ್ಟಿಗಾರ್ ಸ್ಮರಣಾರ್ಥ ಪ್ರಶಸ್ತಿಯನ್ನು ಹಿರಿಯ ಪ್ರಸಾಧನ ತಜ್ಞರಾದ ಶ್ರೀ ಕೃಷ್ಣಸ್ವಾಮಿ ಜೋಯಿಸ್, ಬ್ರಹ್ಮಾವರ ಹಾಗೂ ಕುತ್ಪಾಡಿ ಆನಂದ ಗಾಣ ಗ ಸ್ಮರಣಾರ್ಥ ಪ್ರಶಸ್ತಿಯನ್ನು ಹಿರಿಯ ಹಾಸ್ಯ ಕಲಾವಿದರಾದ ಶ್ರೀ ನಾಗಪ್ಪ ಹೊಳೆಮೊಗೆಯವರಿಗೆ ನೀಡಲಾಗುವುದು.
ಧರ್ಮದರ್ಶಿ ಡಾ. ನಿ. ಬೀ. ವಿಜಯ ಬಲ್ಲಾಳರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಅಧ್ಯಕ್ಷ ಕೆ. ಅಜಿತ್ ಕುಮಾರ್ ಮತ್ತು ಕಾರ್ಯದರ್ಶಿ ಪ್ರಕಾಶ್ ಹೆಬ್ಬಾರ್ ತಿಳಿಸಿರುತ್ತಾರೆ.