Saturday, January 18, 2025
Homeಸುದ್ದಿನಟಿ ಸನಾ ಜಾವೇದ್ ಅವರನ್ನು ವಿವಾಹವಾದ ಶೋಯೆಬ್‌ ಮಲಿಕ್ - ಸಾನಿಯಾ ಮಿರ್ಜಾ ವಿಚ್ಛೇದನ ವದಂತಿ...

ನಟಿ ಸನಾ ಜಾವೇದ್ ಅವರನ್ನು ವಿವಾಹವಾದ ಶೋಯೆಬ್‌ ಮಲಿಕ್ – ಸಾನಿಯಾ ಮಿರ್ಜಾ ವಿಚ್ಛೇದನ ವದಂತಿ ನಡುವೆ ದಿಢೀರ್ ಬೆಳವಣಿಗೆ

ಭಾರತದ ಮಾಜಿ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಅವರೊಂದಿಗೆ ಬೇರ್ಪಡುವ ವದಂತಿಗಳ ನಡುವೆ ಪಾಕಿಸ್ತಾನದ ಕ್ರಿಕೆಟ್ ತಾರೆ ಶೋಯೆಬ್ ಮಲಿಕ್ ಜನಪ್ರಿಯ ಪಾಕಿಸ್ತಾನಿ ನಟಿ ಸನಾ ಜಾವೇದ್ ಅವರನ್ನು ವಿವಾಹವಾದರು. ಶನಿವಾರ, ಜನವರಿ 20 ರಂದು ನಡೆದ ತಮ್ಮ ವಿವಾಹ ಸಮಾರಂಭದ ಫೋಟೋಗಳನ್ನು ಶೋಯೆಬ್ ಮಲಿಕ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡರು.

ಶೋಯೆಬ್ ಮಲಿಕ್ ಮತ್ತು ಸನಾ ಜಾವೇದ್ ಡೇಟಿಂಗ್ ಮಾಡುತ್ತಿದ್ದಾರೆ ಎಂದು ವದಂತಿಗಳಿತ್ತು. ಶೋಯಬ್ ಮಲಿಕ್ ಬರೆದು, ತಮ್ಮ ಇನ್‌ಸ್ಟಾಗ್ರಾಮ್ ಪುಟದಲ್ಲಿ ಇಬ್ಬರೂ ಒಟ್ಟಿಗೆ ಇರುವ ಫೋಟೋವನ್ನು ಹಂಚಿಕೊಂಡಿದ್ದಾರೆ.

ಸನಾ ಜಾವೇದ್ ಅವರ ಮದುವೆ ಸಮಾರಂಭದ ಫೋಟೋಗಳನ್ನು ಶನಿವಾರ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
ಶೋಯೆಬ್ ಮಲಿಕ್ 2010 ರಲ್ಲಿ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರನ್ನು ಮದುವೆಯಾಗುವ ಮೊದಲು ಆಯೇಶಾ ಸಿದ್ದಿಕಿ ಅವರಿಗೆ ವಿಚ್ಛೇದನ ನೀಡಿದರು.

ಸನಾ ಜಾವೇದ್ ತನ್ನ ಇನ್‌ಸ್ಟಾಗ್ರಾಮ್ ಖಾತೆಯ ಬಯೋದಲ್ಲಿ ತನ್ನ ಹೆಸರನ್ನು ಸಹ ಬದಲಾಯಿಸಿಕೊಂಡಿದ್ದಾಳೆ, ಅದನ್ನು ಸನಾ ಶೋಯೆಬ್ ಮಲಿಕ್ ಎಂದು ಮಾಡಿದ್ದಾರೆ. ಸನಾ ಜಾವೇದ್ 2020 ರಲ್ಲಿ ಗಾಯಕ ಉಮರ್ ಜಸ್ವಾಲ್ ಅವರನ್ನು ವಿವಾಹವಾದರು ಮತ್ತು 2023 ರಲ್ಲಿ ಇಬ್ಬರೂ ವಿಚ್ಛೇದನ ಪಡೆದರು.

ಶೋಯೆಬ್ ಮಲಿಕ್ ಮತ್ತು ಸಾನಿಯಾ ಮಿರ್ಜಾ ಅವರ ಪ್ರತ್ಯೇಕತೆಯ ಬಗ್ಗೆ ಊಹಾಪೋಹಗಳು ಹರಿದಾಡುತ್ತಿದ್ದರೂ ಸಹ ತಮ್ಮ ಖಾಸಗಿ ಜೀವನದ ಬಗ್ಗೆ ಬಾಯಿ ಮುಚ್ಚಿಕೊಂಡರು. ಬುಧವಾರವಷ್ಟೇ ಸಾನಿಯಾ ಮಿರ್ಜಾ ಅವರು ನಿಗೂಢ ಪೋಸ್ಟ್ ಅನ್ನು ಹಂಚಿಕೊಂಡಿದ್ದು, ಶೋಯೆಬ್ ಮಲಿಕ್ ಜೊತೆಗಿನ ವಿಚ್ಛೇದನದ ವದಂತಿಗಳನ್ನು ಹುಟ್ಟುಹಾಕಿದ್ದರು.

“ಮದುವೆ ಕಷ್ಟ. ವಿಚ್ಛೇದನ ಕಷ್ಟ. ಆದರೆ ನಾವು ನಮ್ಮ ಕಷ್ಟವನ್ನು ಆಯ್ಕೆ ಮಾಡಬಹುದು. ಬುದ್ಧಿವಂತಿಕೆಯಿಂದ ಆರಿಸಿ.” ಎಂದು ಸಾನಿಯಾ ಮಿರ್ಜಾ ಪೋಸ್ಟ್‌ ಮಾಡಿದ್ದರು. ಇದು ಸಾಮಾಜಿಕ ಮಾಧ್ಯಮದಲ್ಲಿ ಊಹಾಪೋಹಗಳನ್ನು ಹುಟ್ಟುಹಾಕಿತು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments