ಸುನಾದ ಸಂಗೀತ ಕಲಾಶಾಲೆ ಪುತ್ತೂರು, ಇದರ ವಾರ್ಷಿಕೋತ್ಸವವು ಇದೇ ಜನವರಿ ತಿಂಗಳ 13ರ ಶನಿವಾರ ಮತ್ತು 14ರ ಆದಿತ್ಯವಾರದಂದು ಪುತ್ತೂರಿನ ಸುದಾನ ವಸತಿಯುತ ಶಾಲೆಯ ಆವರಣದಲ್ಲಿ ನಡೆಯಲಿದೆ.
13.01.2024, ಶನಿವಾರ ಮಧ್ಯಾಹ್ನ ಘಂಟೆ 2ಕ್ಕೆ ಸರಿಯಾಗಿ ದೀಪೋಜ್ವಲನದೊಂದಿಗೆ ಆರಂಭವಾಗಲಿರುವ ಕಾರ್ಯಕ್ರಮ ಮರುದಿನ ಅಂದರೆ ದಿನಾಂಕ 14.01.2024ರ ಆದಿತ್ಯವಾರ ರಾತ್ರಿಯ ವರೆಗೆ ಮುಂದುವರಿಯಲಿದೆ.
13.01.2024, ಶನಿವಾರ ಮಧ್ಯಾಹ್ನ ಘಂಟೆ 2ಕ್ಕೆ ಸರಿಯಾಗಿ ದೀಪೋಜ್ವಲನದ ನಂತರ ಗುರುವಂದನೆ ಕಾರ್ಯಕ್ರಮ ನಡೆಯಲಿದೆ.
ದೇಶಾದ್ಯಂತ ಅಸಂಖ್ಯಾತ ಶಿಷ್ಯ ವೃಂದದವರನ್ನು ಹೊಂದಿರುವ, ಮಾತ್ರವಲ್ಲದೆ ವಿದೇಶದಲ್ಲೂ ಶಿಷ್ಯವರ್ಗವನ್ಮು ಹೊಂದಿರುವ ಕರ್ನಾಟಕ ಸಂಗೀತದ ಅದ್ವಿತೀಯ ಮೃದಂಗಪಟು ವಿದ್ವಾನ್ ಕಾಂಚನ ಈಶ್ವರ ಭಟ್ ಇವರಿಗೆ ಸುನಾದ ಸಂಗೀತ ಕಲಾಶಾಲೆಯ ವಿದ್ಯಾರ್ಥಿಗಳು ಗುರುವಂದನೆ ಸಲ್ಲಿಸಲಿದ್ದಾರೆ.
ಬಳಿಕ ಎರಡೂ ದಿನಗಳಲ್ಲಿ ಕಲಾ ಶಲೆಯ ವಿದ್ಯಾರ್ಥಿಗಳಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ.
ಮರುದಿನ 14. 01.2024 ಆದಿತ್ಯವಾರ ವಿದ್ವಾನ್ ಪಾಲ್ಘಾಟ್ ರಾಮಪ್ರಸಾದ್ ಅವರಿಂದ ಶಾಸ್ತ್ರೀಯ ಸಂಗೀತ ಗಾಯನ ನಡೆಯಲಿದೆ.
ಕಾರ್ಯಕ್ರಮದ ಎಲ್ಲಾ ವಿವರಗಳಿಗೆ ಕರಪತ್ರದ ಚಿತ್ರವನ್ನು ನೋಡಿ.
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions