ಹೈದರಾಬಾದ್: ಹೈದರಾಬಾದ್ ಮೂಲದ 64 ವರ್ಷದ ಚಾರ್ಲಾ ಶ್ರೀನಿವಾಸ ಶಾಸ್ತ್ರಿ ಅವರು ಅಯೋಧ್ಯೆಯ ರಾಮ ಮಂದಿರದಲ್ಲಿ ಕಾಣಿಕೆಯಾಗಿ ನೀಡಲು ಚಿನ್ನ ಲೇಪಿತ (Gold plated) ಪಾದರಕ್ಷೆಗಳನ್ನು ಹೊತ್ತು ಪಾದಯಾತ್ರೆ ಆರಂಭಿಸಿದ್ದಾರೆ.
ಶಾಸ್ತ್ರಿಯವರು ಅಯೋಧ್ಯೆ-ರಾಮೇಶ್ವರಂ ಮಾರ್ಗದಲ್ಲಿ ಪ್ರಯಾಣಿಸುತ್ತಿದ್ದಾರೆ, ಭಗವಾನ್ ರಾಮನ ‘ವನವಾಸ್’ (ವನವಾಸ) ಸಮಯದ ಸಂಚಾರದ ದಾರಿಯಲ್ಲಿ ಹಿಂತಿರುಗುವ ರೀತಿಯಲ್ಲಿ ಪ್ರಯಾಣಿಸುತ್ತಿದ್ದಾರೆ. ಈ ಹಿಂದೆ ಅವರು ರಾಮಮಂದಿರಕ್ಕೆ ಐದು ಬೆಳ್ಳಿಯ ಇಟ್ಟಿಗೆಗಳನ್ನು ದಾನ ಮಾಡಿದ್ದರು.
ದಾರಿಯುದ್ದಕ್ಕೂ ಭಗವಾನ್ ರಾಮನು ಸ್ಥಾಪಿಸಿದ ಶಿವಲಿಂಗಗಳಲ್ಲಿ ಪೂಜೆ ಸಲ್ಲಿಸಿದರು.
ಜನವರಿ 22 ರಂದು ಉದ್ಘಾಟನಾ ಸಮಾರಂಭದ ಮೊದಲು ಅವರು ಚಿನ್ನದ ಲೇಪಿತ ಪಾದರಕ್ಷೆಗಳನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಹಸ್ತಾಂತರಿಸಲಿದ್ದಾರೆ.
ಒಡಿಶಾದ ಪುರಿ, ಮಹಾರಾಷ್ಟ್ರದ ತ್ರ್ಯಂಬಕ್ ಮತ್ತು ಗುಜರಾತ್‌ನ ದ್ವಾರಕಾ ಮುಂತಾದ ಮಹತ್ವದ ಸ್ಥಳಗಳನ್ನು ಕವರ್ ಮಾಡಿರುವ ಶಾಸ್ತ್ರಿ ಮುಂದಿನ 10 ದಿನಗಳಲ್ಲಿ ಅಯೋಧ್ಯೆಗೆ ತಲುಪುವ ಗುರಿಯನ್ನು ಹೊಂದಿದ್ದಾರೆ.
ಶಾಸ್ತ್ರಿ ಅವರು ತಮ್ಮ ತಲೆಯ ಮೇಲೆ ರಾಮ್ ಲಾಲ್ ಅವರ ವಿಗ್ರಹಕ್ಕಾಗಿ ‘ಪಂಚ ಧಾತು’ (ಐದು ಲೋಹಗಳು) ಗಳಿಂದ ತಯಾರಿಸಿದ ಚಿನ್ನದ ಲೇಪಿತ ‘ಪಾದುಕೆ’ (ಪಾದರಕ್ಷೆ) ಯನ್ನು ಹೊತ್ತಿದ್ದಾರೆ, ಅವರು ಅಯೋಧ್ಯೆಗೆ ತಲುಪಿದ ನಂತರ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಹಸ್ತಾಂತರಿಸಲು ಯೋಜಿಸಿದ್ದಾರೆ.
“ನನ್ನ ತಂದೆ ಅಯೋಧ್ಯೆಯಲ್ಲಿ ‘ಕರಸೇವೆ’ಯಲ್ಲಿ ಭಾಗವಹಿಸಿದ್ದರು. ಅವರು ಹನುಮಂತನ ಪ್ರಬಲ ಭಕ್ತರಾಗಿದ್ದರು. ಅಯೋಧ್ಯೆಯಲ್ಲಿ ರಾಮಮಂದಿರವನ್ನು ನಿರ್ಮಿಸುವುದನ್ನು ನೋಡುವುದು ಅವರ ಆಸೆಯಾಗಿತ್ತು. ಅವರು ಇನ್ನಿಲ್ಲದ ಕಾರಣ, ಅವರ ಆಸೆಯನ್ನು ಪೂರೈಸಲು ನಾನು ನಿರ್ಧರಿಸಿದೆ” ಎಂದು ಶಾಸ್ತ್ರಿ ಹೇಳಿದರು.
ಹೈದರಾಬಾದ್‌ನಲ್ಲಿರುವ ಅಕ್ಕಸಾಲಿಗರಿಗೆ ಬೆಳ್ಳಿಯ ಪಾದುಕೆಗಳನ್ನು ಕಳುಹಿಸಿ ಆಮೇಲೆ ಅದಕ್ಕೆ ಇವರು ಮಾಡಿಸಿದ ಚಿನ್ನದ ಲೇಪಿತ ಪಾದರಕ್ಷೆಗಳು ತಲಾ 12.5 ಕೆ.ಜಿ. ತೂಗುತ್ತವೆ. ಪಾದರಕ್ಷೆಗಳನ್ನು ದೇವಾಲಯದ ಒಳಗೆ ಇಡಲಾಗುವುದು ಎಂದು ಯುಪಿ ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ ಎಂದು ಅವರು ಹೇಳುತ್ತಾರೆ.
- ನವವಿವಾಹಿತೆ ಆತ್ಮಹತ್ಯೆ – ಆಕೆ ಬರೆದಿಟ್ಟ ಡೆತ್ ನೋಟಿನಲ್ಲಿ ಏನಿದೆ?
- ತಾನು ಮದುವೆಯಾಗುವ ಹುಡುಗಿಗೆ ಮೂರು ಷರತ್ತುಗಳನ್ನು ವಿಧಿಸಿದ್ದ ಎ.ಆರ್. ರೆಹಮಾನ್: ಮದುವೆಯ ಮೂವತ್ತನೆಯ ವಾರ್ಷಿಕೋತ್ಸವ (ಗ್ರ್ಯಾಂಡ್ ಥರ್ಟಿ) ತಲುಪುವ ಭರವಸೆ ಹುಸಿಯಾಯಿತು ಎಂದ ಸಂಗೀತ ನಿರ್ದೇಶಕ
- ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಕ್ಷಕ-ಶಿಕ್ಷಕ ಸಂಘದ ಪದಾಧಿಕಾರಿಗಳ ಆಯ್ಕೆ
- ಎಲೆಕ್ಟ್ರಿಕ್ ಸ್ಕೂಟರ್ ಶೋರೂಮ್ ಬೆಂಕಿಗೆ ಆಹುತಿ – 20 ವರ್ಷದ ಯುವತಿ ಬೆಂಕಿಗೆ ಸಿಲುಕಿ ಸಾವು
- ಕಾಸರಗೋಡಿನ ಮಸೀದಿ ಪರಿಸರದ ಮಣ್ಣು ತೆಗೆದ ಜೆಸಿಬಿಗೆ 45 ಲಕ್ಷ ದಂಡ; ಬಡ ಕುಟುಂಬ ಸಂಕಷ್ಟದಲ್ಲಿ – ಕಬ್ರಿಸ್ತಾನ್ ಭೂಮಿಯ ಉಸ್ತುವಾರಿ ಮಸೀದಿ ಅಧಿಕಾರಿಗಳಿಗೆ ಶಿಕ್ಷೆ ಇಲ್ಲ