ಕೇಪ್ ಟೌನ್‌ನಲ್ಲಿ ಗುರುವಾರ ನಡೆದ ಎರಡನೇ ಮತ್ತು ಅಂತಿಮ ಟೆಸ್ಟ್‌ನಲ್ಲಿ ಎರಡು ದಿನಗಳ ಒಳಗೆ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಏಳು ವಿಕೆಟ್‌ಗಳ ಗೆಲುವು ಸಾಧಿಸಿದ್ದು, ಬೌಲ್ ಮಾಡಿದ ಚೆಂಡುಗಳ ಸಂಖ್ಯೆಯನ್ನು ನೋಡಿದರೆ, ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಇದುವರೆಗಿನ ಅತ್ಯಂತ ಕಡಿಮೆ ಎಸೆತಗಳನ್ನು ಎಸೆದ ಟೆಸ್ಟ್ ಪಂದ್ಯವಾಗಿದೆ.

ಗೆಲುವಿಗಾಗಿ 79 ರನ್‌ಗಳ ಬೆನ್ನತ್ತಿದ ಭಾರತ 12 ಓವರ್‌ಗಳಲ್ಲಿ ಗೆಲುವಿನತ್ತ ದಾಪುಗಾಲು ಹಾಕಿತು.
ಒಂಬತ್ತು ದಶಕಗಳ ಹಳೆಯ ದಾಖಲೆಯನ್ನು ಮುರಿದ ಈ ಟೆಸ್ಟ್ ಕೇವಲ 642 ಎಸೆತಗಳಲ್ಲಿ ಮುಗಿದುಹೋಯಿತು.
1932ರಲ್ಲಿ ಮೆಲ್ಬೋರ್ನ್‌ನಲ್ಲಿ ಆಸ್ಟ್ರೇಲಿಯ ಮತ್ತು ದಕ್ಷಿಣ ಆಫ್ರಿಕಾ ನಡುವೆ ಅತಿ ಕಡಿಮೆ ಎಸೆತದ ಟೆಸ್ಟ್ ಪಂದ್ಯ ನಡೆದಿರುವುದು ಹಿಂದಿನ ದಾಖಲೆಯಾಗಿತ್ತು.
ದಕ್ಷಿಣ ಆಫ್ರಿಕಾ ತನ್ನ ಮೊದಲ ಇನಿಂಗ್ಸ್‌ನಲ್ಲಿ 23.2 ಓವರ್‌ಗಳಲ್ಲಿ 55 ರನ್‌ಗಳಿಗೆ ಆಲೌಟ್ ಆಯಿತು, ಮೊಹಮ್ಮದ್ ಸಿರಾಜ್ 6 ವಿಕೆಟ್ ಗಳಿಸಿದರು. ಭಾರತವು ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 34.5 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 153 ರನ್‌ಗಳಿಗೆ ಉತ್ತಮ ಸ್ಥಿತಿಯಲ್ಲಿ ಇತ್ತು.
ಆದರೆ ರನ್ ಗಳಿಸದೆ ಇನ್ನುಳಿದ ಆರು ವಿಕೆಟ್‌ಗಳನ್ನು ಕಳೆದುಕೊಂಡು ಆಘಾತಕಾರಿ ಕುಸಿತವನ್ನು ಅನುಭವಿಸಿ ಅಷ್ಟೇ ರನ್ನುಗಳಿಗೆ ಅಂದರೆ 153 ರನ್ನುಗಳಿಗೆ ಎಲ್ಲಾ ವಿಕೆಟ್ ಗಳನ್ನು ಕಳೆದುಕೊಂಡಿತು.