Saturday, September 21, 2024
Homeಸುದ್ದಿಗುಜರಾತ್‌ನಲ್ಲಿ 30 ಅಡಿ ಆಳದ ಬೋರ್‌ವೆಲ್‌ನಿಂದ ಹೊರತೆಗೆಯಲ್ಪಟ್ಟ 3 ವರ್ಷದ ಬಾಲಕಿ - ಆದರೂ ಕೊನೆಗೂ...

ಗುಜರಾತ್‌ನಲ್ಲಿ 30 ಅಡಿ ಆಳದ ಬೋರ್‌ವೆಲ್‌ನಿಂದ ಹೊರತೆಗೆಯಲ್ಪಟ್ಟ 3 ವರ್ಷದ ಬಾಲಕಿ – ಆದರೂ ಕೊನೆಗೂ ಸಂಭವಿಸಿದ ದುರಂತ

ಗುಜರಾತ್‌ನಲ್ಲಿ 30 ಅಡಿ ಆಳದ ಬೋರ್‌ವೆಲ್‌ನಿಂದ ಹೊರತೆಗೆಯಲ್ಪಟ್ಟ 3 ವರ್ಷದ ಬಾಲಕಿ ಸಾವನ್ನಪ್ಪಿದ್ದಾಳೆ
ರಾತ್ರಿ 9:50 ರ ಸುಮಾರಿಗೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಬಾಲಕಿಯನ್ನು 30 ಅಡಿ ಬೋರ್‌ವೆಲ್‌ನಿಂದ ಹೊರತೆಗೆದು ಚಿಕಿತ್ಸೆಗಾಗಿ ಜಾಮ್‌ನಗರದ ಆಸ್ಪತ್ರೆಗೆ ಸಾಗಿಸಲಾಯಿತು.


ಗುಜರಾತ್‌ನ ದೇವಭೂಮಿ ದ್ವಾರಕಾ ಜಿಲ್ಲೆಯಲ್ಲಿ ಸೋಮವಾರ ರಾತ್ರಿ 30 ಅಡಿ ಬೋರ್‌ವೆಲ್‌ಗೆ ಬಿದ್ದ ಮೂರು ವರ್ಷದ ಬಾಲಕಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾನ್ ಗ್ರಾಮದ ತನ್ನ ಮನೆಯ ಮುಂಭಾಗದ ಅಂಗಳದಲ್ಲಿ ತೆರೆದ ಬೋರ್‌ವೆಲ್‌ಗೆ ಬಿದ್ದ ಮಗುವನ್ನು ಎಂಟು ಗಂಟೆಗಳ ನಂತರ ಹೊರಕ್ಕೆ ತೆಗೆಯಲಾಯಿತು.

ರಕ್ಷಣಾ ಕಾರ್ಯಾಚರಣೆಯಲ್ಲಿ ಸೇನೆ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ತಂಡಗಳು ಪಾಲ್ಗೊಂಡಿತ್ತು


ಆಟವಾಡುತ್ತಿದ್ದಾಗ ಮಧ್ಯಾಹ್ನ 1 ಗಂಟೆ ಸುಮಾರಿಗೆ ಬೋರ್‌ವೆಲ್‌ಗೆ ಬಿದ್ದಿದ್ದಾಳೆ.

ಎನ್‌ಡಿಆರ್‌ಎಫ್ ತಂಡವು ಗಾಂಧಿನಗರದಿಂದ ರಾತ್ರಿ 8 ಗಂಟೆ ಸುಮಾರಿಗೆ ಘಟನಾ ಸ್ಥಳಕ್ಕೆ ತಲುಪಿತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

“ಎನ್‌ಡಿಆರ್‌ಎಫ್‌ನ 6 ನೇ ತಂಡವು ಮಗುವನ್ನು ಬೋರ್‌ವೆಲ್‌ನಿಂದ ಯಶಸ್ವಿಯಾಗಿ ಹೊರತೆಗೆದಿದೆ. ಆಕೆಯನ್ನು ಆಂಬ್ಯುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕಳುಹಿಸಲಾಗಿದೆ ಮತ್ತು ಮಗು ಪ್ರಜ್ಞಾಹೀನ ಸ್ಥಿತಿಯಲ್ಲಿದೆ” ಎಂದು ಅವರು ಹೇಳಿದರು.

ಆದರೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಆಕೆ ಆನಂತರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments