Saturday, January 18, 2025
Homeಸುದ್ದಿ26ರ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ, ನಂತರ ಪುನಃ ಬ್ಲಾಕ್ ಮೇಲ್ - 3 ಜನರ...

26ರ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ, ನಂತರ ಪುನಃ ಬ್ಲಾಕ್ ಮೇಲ್ – 3 ಜನರ ಬಂಧನ

ನಗರದಲ್ಲಿ 26 ವರ್ಷದ ಮಹಿಳೆಯ ಮೇಲೆ ಅತ್ಯಾಚಾರವೆಸಗಿದ್ದ ಮೂವರು ಶಂಕಿತರನ್ನು ಬಂಧಿಸಿರುವುದಾಗಿ ನೋಯ್ಡಾ ಪೊಲೀಸರು ಸೋಮವಾರ ತಿಳಿಸಿದ್ದಾರೆ.


ಸ್ಥಳೀಯ ಪ್ರಬಲ ಆರೋಪಿ ಸೇರಿದಂತೆ ಇಬ್ಬರು ಆರೋಪಿಗಳು ಇನ್ನೂ ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಾಮೂಹಿಕ ಅತ್ಯಾಚಾರವು ಕೆಲವು ಸಮಯದ ಹಿಂದೆ ಶಾಪಿಂಗ್ ಮಾಲ್ ಬಳಿ ನಡೆದಿತ್ತು ಆದರೆ ಆಗ ದೂರು ದಾಖಲಾಗಿರಲಿಲ್ಲ, ಆರೋಪಿಗಳು ಪದೇ ಪದೇ ಕಿರುಕುಳ ಬ್ಲಾಕ್ ಮೇಲ್ ನೀಡಿದ ನಂತರ ದೂರುದಾರರು ಡಿಸೆಂಬರ್ 30 ರಂದು ಸ್ಥಳೀಯ ಪೊಲೀಸರನ್ನು ಸಂಪರ್ಕಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಡಿಸೆಂಬರ್ 30 ರಂದು ಸೆಕ್ಟರ್ 39 ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ, ನಂತರ ತನಿಖೆಯನ್ನು ಕೈಗೆತ್ತಿಕೊಂಡು ಆರೋಪಿಗಳಲ್ಲಿ ಮೂವರನ್ನು ಬಂಧಿಸಲಾಗಿದೆ” ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.

“ಬಂಧಿತರನ್ನು ರಾಜ್‌ಕುಮಾರ್, ಆಜಾದ್ ಮತ್ತು ವಿಕಾಸ್ ಎಂದು ಗುರುತಿಸಲಾಗಿದೆ. ರವಿ ಮತ್ತು ಮೆಹ್ಮಿ ಎಂದು ಗುರುತಿಸಲಾದ ಇತರ ಇಬ್ಬರು ಶಂಕಿತರು ತಲೆಮರೆಸಿಕೊಂಡಿದ್ದಾರೆ ಮತ್ತು ಅವರನ್ನು ಬಂಧಿಸಲು ಪ್ರಯತ್ನಗಳು ನಡೆಯುತ್ತಿವೆ” ಎಂದು ವಕ್ತಾರರು ತಿಳಿಸಿದ್ದಾರೆ.


ದುಷ್ಕರ್ಮಿಗಳು “ದಬಾಂಗ್” (ಸಬಲರು) ಜನರು ಎಂಬ ಕಾರಣದಿಂದಾಗಿ ದೂರುದಾರರು ತಕ್ಷಣ ಪೊಲೀಸರಿಗೆ ಈ ವಿಷಯವನ್ನು ವರದಿ ಮಾಡಿಲ್ಲ ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಆರೋಪಿಗಳು, ಅತ್ಯಾಚಾರಕ್ಕೊಳಗಾದ ಯುವತಿಗೆ ಪುನಃ ಬ್ಲ್ಯಾಕ್‌ಮೇಲ್ ಮಾಡಿದ ನಂತರ ಡಿಸೆಂಬರ್ 30 ರಂದು ಪೊಲೀಸರನ್ನು ಅಕೆ ಸಂಪರ್ಕಿಸಿದಳು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.


ಕಳೆದ ವಾರ ಆಕೆಯ ವೈದ್ಯಕೀಯ ಪರೀಕ್ಷೆಯ ನಂತರ ಕಾರ್ಯವಿಧಾನದ ಪ್ರಕಾರ ದೂರುದಾರರ ಹೇಳಿಕೆಯನ್ನು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments