ಇಂದು ಪುತ್ತೂರು ತಾಲೂಕು ಮಾಡಾವು ಅಯ್ಯಪ್ಪ ಭಜನಾ ಮಂದಿರದಲ್ಲಿ ಸತತ 11ನೇ ವರ್ಷದ, ಕಟೀಲು ಮೇಳದವರ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ಇಂದು ಅಂದರೆ ಮಕರ ಸಂಕ್ರಾಂತಿಯ ಪ್ರಯುಕ್ತ ದಿನಾಂಕ 14.01.2024ನೇ ಆದಿತ್ಯವಾರದಂದು ಸಂಜೆ 6 ಘಂಟೆಗೆ ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯರಿಂದ ‘ಶ್ರೀದೇವೀ ಲಲಿತೋಪಾಖ್ಯಾನ’ ಎಂಬ ಪ್ರಸಂಗದ ಪ್ರದರ್ಶನ ನಡೆಯಲಿದೆ.
ಅದಕ್ಕೂ ಮೊದಲು ಅಂದರೆ ಸಂಜೆ 4 ಘಂಟೆಯಿಂದ ಅಯ್ಯಪ್ಪ ಭಜನಾ ಮಂದಿರದಲ್ಲಿ ಭಜನಾ ಕಾರ್ಯಕ್ರಮ ನಡೆಯಲಿದೆ. ರಾತ್ರಿ 8 ಘಂಟೆಗೆ ಸರಿಯಾಗಿ ಅನ್ನಸಂತರ್ಪಣೆ ನಡೆಯಲಿದೆ.
ಈ ಬಾರಿಯ ಅನ್ನಸಂತರ್ಪಣೆಯ ಪ್ರಾಯೋಜಕತ್ವವನ್ನು ವಹಿಸಿಕೊಂಡವರು ಶ್ರೀ ವೆಂಕಟೇಶ್ವರ ಅರೆಪ್ಪಳ ಮತ್ತು ಅಜಯ್ ಕೃಷ್ಣ ಅರೆಪ್ಪಳ. ಈ ಎಲ್ಲಾ ಕಾರ್ಯಕ್ರಮಗಳಿಗೆ ಸಂಘಟಕರು ಸರ್ವರನ್ನೂ ಆದರದಿಂದ ಸ್ವಾಗತಿಸಿದ್ದಾರೆ.
ಹೆಚ್ಚಿನ ವಿವರಗಳಿಗೆ ಕಾರ್ಯಕ್ರಮದ ಕರಪತ್ರದ ಚಿತ್ರವನ್ನು ನೋಡಿ.
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions