ಭಗವದ್ಗೀತಾಭಿಯಾನಮ್- ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ
ಶ್ರೀಮಜ್ಜಗದ್ಗುರು ಶಂಕರಾಚಾರ್ಯ, ಶ್ರೀ ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನಮ್, ಶಿರಸಿ, ಭಗವದ್ಗೀತಾ ಅಭಿಯಾನ – ಕರ್ನಾಟಕ ಹಾಗೂ ಜನಕಲ್ಯಾಣ ಟ್ರಸ್ಟ್, ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ
ಬೆಳಗಾವಿಯ ಸಂತ ಮೀರಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ದಶಂಬರ್ 23ರಂದು ನಡೆದ ರಾಜ್ಯ ಮಟ್ಟದ ಭಗವದ್ಗೀತಾಭಿಯಾನ ಭಾಷಣ ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ
9ನೇ ತರಗತಿಯ ಕುಮಾರಿ ವೈಷ್ಣವಿ ಪೈ ( ಶ್ರೀ ನಾಗೇಶ್ ಪೈ ಮತ್ತು ಶಿಕ್ಷಕಿ ಶ್ರೀಮತಿ ಸಹನಾ ಪೈ ದಂಪತಿಗಳ ಪುತ್ರಿ) ಪ್ರಥಮ ಬಹುಮಾನ ಪಡೆದಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.