Saturday, January 18, 2025
HomeUncategorizedಯಕ್ಷಗಾನದಲ್ಲಿ ಡಿಪ್ಲೊಮೊ ಕೋರ್ಸ್ ಆರಂಭ

ಯಕ್ಷಗಾನದಲ್ಲಿ ಡಿಪ್ಲೊಮೊ ಕೋರ್ಸ್ ಆರಂಭ

ವಿಶ್ವ ಪ್ರಸಿದ್ಧ ಕರ್ನಾಟಕದ ಪ್ರಾತಿನಿಧಿಕ ಕಲೆ ಯಕ್ಷಗಾನ. ದಿನದಿಂದ ದಿನಕ್ಕೆ ಇದರ ಜನಪ್ರಿಯತೆ ಹೆಚ್ಚುತ್ತಲೇ ಹೋಗುತ್ತಿದೆ. ಶಾಲಾ ಕಾಲೇಜುಗಳಲ್ಲಿಯೂ ಯಕ್ಷ ವೇಷ ಧರಿಸಿ ಪ್ರದರ್ಶಿಸುವವರ ಸಂಖ್ಯೆ ಹೆಚ್ಚುತ್ತಿದೆ. ಯಕ್ಷಗಾನ ಆಸಕ್ತರಿಗೆ ಕಲಿಸುವ ಗುರುಗಳು, ಯಕ್ಷ ಶಿಕ್ಷಣ ಕೇಂದ್ರಗಳು ನಗರ ಹಾಗೂ ಕರಾವಳಿ ಭಾಗದಲ್ಲಿಬಹಳ. ಆದರೆ ಇದಕ್ಕೆ ವಿಶ್ವವಿದ್ಯಾಲಯ ಮಟ್ಟದಲ್ಲಿ ಪರೀಕ್ಷೆ ನಡೆಸಿ ಡಿಪ್ಲೊಮೊ ಹಾಗೂ ಪ್ರಮಾಣ ಪತ್ರ (ಸರ್ಟಿಫಿûಕೇಟ್ ಕೋರ್ಸ್) ನೀಡುತ್ತಿರುವುದು ವಿರಳ.


ಇದೀಗ ಬೆಂಗಳೂರಿನ ಕಲಾಕದಂಬ ಆರ್ಟ್ ಸೆಂಟರ್ ಇದೇ ಪ್ರಥಮ ಬಾರಿಗೆ ಯಕ್ಷಗಾನದಲ್ಲಿ ಡಿಪ್ಲೊಮೊ ಹಾಗೂ ಪ್ರಮಾಣ ಪತ್ರ (ಸರ್ಟಿಫಿûಕೇಟ್ ಕೋರ್ಸ್) ತರಗತಿ ನಡೆಸುವ ಮಹತ್ವದ ಹೆಜ್ಜೆಯಿರಿಸಿದೆ. ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾಲಯ, ಮೈಸೂರು ಮೂಲಕ ಯಕ್ಷಗಾನದಲ್ಲಿ ವಿಶ್ವ ವಿದ್ಯಾಲಯ ನಿಯಮಾನುಸಾರ ತರಗತಿ ಹಾಗೂ ಪರೀಕ್ಷೆಗಳನ್ನು ನಡೆಸಿ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡುವುದಕ್ಕೆ ಸಜ್ಜಾಗಿದೆ ಎಂದು ಕಲಾಕದಂಬ ಆರ್ಟ್ ಸೆಂಟರ್ ಡಾ. ರಾಧಾಕೃಷ್ಣ ಉರಾಳ ತಿಳಿಸಿದ್ದಾರೆ.

ವಿಶ್ವವಿದ್ಯಾಲಯದೊಂದಿಗೆ ತತ್ಸಂಬಂಧಿತ ಪರಸ್ಪರ ಒಡಂಬಡಿಕೆಯ ಪತ್ರವನ್ನು ಮಾನ್ಯ ಕುಲಪತಿಗಳಾದ ಡಾ.ವಿ.ನಾಗೇಶ್ ಬೆಟ್ಟಕೋಟೆ ಹಾಗೂ ಕುಲಸಚಿವರಾದ ರಾಜೇಶ್ ಎಂ.ಆರ್ ಅವರಿಂದ ಪಡೆದಿದ್ದು ತರಗತಿಗಳು ಮುಂದಿನ ಜನವರಿಯಿಂದ ಆರಂಭಗೊಳ್ಳಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಯಕ್ಷಗಾನದಲ್ಲಿ ಕಲಿಯುವ ಆಸಕ್ತರು, ಈಗಾಗಲೇ ಕಲಿಯುತ್ತಿರುವವರು ಕೂಡಾ ನಮ್ಮ ಸಂಸ್ಥೆಯ ಮೂಲಕ ವಿಶ್ವ ವಿದ್ಯಾಲಯದ ಮಾರ್ಗಸೂಚಿಯಂತೆ ತರಗತಿ ಹಾಗೂ ಪರೀಕ್ಷೆಯಲ್ಲಿ ಪಾಲ್ಗೊಂಡು ಪ್ರಮಾಣ ಪತ್ರವನ್ನು ಪಡೆಯುವುದಕ್ಕೆ ಅವಕಾಶವಿದೆ. ಯಕ್ಷಗಾನದ ಕಲಿಕೆಗೂ ವಿಶ್ವ ವಿದ್ಯಾಲಯದ ಮಾನ್ಯತಾ ಪತ್ರ ಸಿಗುವಂತಾಗಬೇಕೆಂಬ ಬಹುವರ್ಷಗಳ ಕನಸಿಗೊಂದು ಈಗ ಸಾಕಾರ ಸಿಕ್ಕಂತಾಗಿದೆ.

ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾಲಯ, ಮೈಸೂರು ಮೂಲಕ ಯಕ್ಷಗಾನದಲ್ಲಿ ಡಿಪ್ಲೊಮೊ ಹಾಗೂ ಸರ್ಟಿಫಿಕೇಟ್ ಕೋರ್ಸ್ ಆರಂಭಿಸುತ್ತಿರುವ ಪ್ರಪ್ರಥಮ ಸಂಸ್ಥೆ ಕಲಾಕದಂಬ ಆರ್ಟ್ ಸೆಂಟರ್ ಎಂಬುದು ಹೆಮ್ಮೆಯ ವಿಷಯ ಎಂದು ಡಾ. ರಾಧಾಕೃಷ್ಣ ಉರಾಳ ಸಂತಸ ಹಂಚಿಕೊಂಡರು. ಹೆಚ್ಚಿನ ವಿವರಗಳಿಗೆ ಕಲಾಕದಂಬ ಆರ್ಟ್ ಸೆಂಟರ್ ಸಂಪರ್ಕಿಸಬಹುದು 9448510582, 9886066732

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments